ವಿಷಕಾರಿ ಹಾವಿಂದ ಮಾಲೀಕರ ಕುಟುಂಬ ಬಚಾವ್ ಮಾಡಿದ ಜೋಡಿ ಬೆಕ್ಕು..!

By BK Ashwin  |  First Published Jul 6, 2023, 1:50 PM IST

ಮನೆ ಹೊಕ್ಕು ಕೂತಿದ್ದ ನಾಗರ ಹಾವಿನ ಸುಳಿವನ್ನು ಜೋಡಿ ಬೆಕ್ಕು ನೀಡಿದೆ. ಈ ಮೂಲಕ ವಿಷಕಾರಿ ಹಾವಿನಿಂದ ಮಾಲೀಕರ ಕುಟುಂಬವನ್ನ ಬೆಕ್ಕುಗಳು ಬಚಾವ್‌ ಮಾಡಿರುವ ಘಟನೆ ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ನಡೆದಿದೆ.


ಗದಗ (ಜುಲೈ 6, 2023): ನಾಗರ ಹಬ್ಬದ ಸಮಯದಲ್ಲಿ ಹುತ್ತಕ್ಕೆ ಹಾಲೆರೆಯುವುದು ಹಾಗೆ ನಾಗರ ಹಾವನ್ನು ದೇವರಂತೆ ಪೂಜಿಸಲಾಗುತ್ತದೆ. ಆದರೂ, ಈ ಹಾವು ನಿಮ್ಮ ಕಣ್ಮುಂದೆ ಧುತ್ತನೆ ಕಂಡುಬಂದ್ರೆ ನಿಮಗೆ ಗಾಬರಿಯಾಗುತ್ತಲ್ವಾ..? ಅದೇ ರೀತಿ, ವಿಷಕಾರಿ ಹಾವೊಂದು ಮನೆಯೊಳಗೆ ಹೋಗಿದ್ದು, ಆದರೂ ಆ ಮನೆಯವರಿಗೆ ಏನೂ ಆಗದಂತೆ ಜೋಡಿ ಬೆಕ್ಕುಗಳು ಸಹಾಯ ಮಾಡಿವೆ. 

ಹೌದು, ಮನೆ ಹೊಕ್ಕು ಕೂತಿದ್ದ ನಾಗರ ಹಾವಿನ ಸುಳಿವನ್ನು ಜೋಡಿ ಬೆಕ್ಕು ನೀಡಿದೆ. ಈ ಮೂಲಕ ವಿಷಕಾರಿ ಹಾವಿನಿಂದ ಮಾಲೀಕರ ಕುಟುಂಬವನ್ನ ಬೆಕ್ಕುಗಳು ಬಚಾವ್‌ ಮಾಡಿರುವ ಘಟನೆ ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ನಡೆದಿದೆ. ಗದಗ ಜಿಲ್ಲೆ ನರಗುಂದ ಪಟ್ಟಣದ ಅಂಬೇಡ್ಕರ್ ನಗರದ ಲಕ್ಷ್ಮಣ ಚಲವಾದಿ ಮನೆಯಲ್ಲಿ ಈ ಘಟನೆ ನಡೆದಿದೆ ಎಂದೂ ತಿಳಿದುಬಂದಿದೆ. 

Tap to resize

Latest Videos

undefined

ಇದನ್ನು ಓದಿ: ಎಲೆಕ್ಷನ್ನಲ್ಲಿ ಹಾವಿಂದ ರಕ್ಷಣೆಗೆ ರಾಸಾಯನಿಕ: ಕಾರ್ಬೋಲಿಕ್‌ ಆಮ್ಲ ನೀಡಲು ರಾಜ್ಯ ಚುನಾವಣಾ ಆಯೋಗ ನಿರ್ದೇಶನ

 ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನಾಗರ ಹಾವು ಲಕ್ಷ್ಮಣ ಚಲವಾದಿ ಮನೆಯೊಳಗೆ ಹೋಗಿ ಅಡುಗೆ ಮನೆ ಸೇರಿಕೊಂಡಿತ್ತು. ಅಡುಗೆ ಮನೆಯನ್ನು ಸೇರಿದ ನಾಗರಹಾವನ್ನು ಬೆಕ್ಕುಗಳು ಗಮನಿಸಿದ್ದು, ಮನೆ ಮಾಲೀಕರು ಬರುತ್ತಿದ್ದಂತೆ ಅಡುಗೆ ಕೋಣೆಯ ಬಳಿ ನಿಂತಿದ್ದ ಬೆಕ್ಕುಗಳು ಕೂಗಾಡಿವೆ. 

ಬೆಕ್ಕುಗಳ ವರ್ತನೆಯಿಂದ ಅಡುಗೆ ಮನೆ ಗಮನಿಸಿದಾಗ ಹಾವು ಪ್ರತ್ಯಕ್ಷವಾಗಿದೆ. ನಂತರ, ಉರಗ ರಕ್ಷಕ ಬಿ ಆರ್ ಸುರೇಬಾನ ಅವರನ್ನು ಕುಟುಂಬಸ್ಥರು ಕರೆಸಿದ್ದು, ಬಳಿಕ ಉರಗ ರಕ್ಷಕ ಹಾವನ್ನು ರಕ್ಷಿಸಿದ್ದು ಅದನ್ನು ಸುರಕ್ಷಿತ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ. ಈ ಹಿನ್ನೆಲೆ ಬೆಕ್ಕುಗಳು ನಮ್ಮ ಜೀವ ಉಳಿಸಿದವು ಎಂದು ಕುಟುಂಬಸ್ಥರು ಈ ಜೋಡಿ ಬೆಕ್ಕುಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: Eid al - Adha: ಅಬ್ಬಾ.. ಈ ಕುರಿಗೆ ಹರಾಜಲ್ಲಿ 1 ಕೋಟಿ ರೂ. ಬೆಲೆ: ಆದರೂ ಮಾರಲ್ಲ ಎಂದ ಕುರಿಗಾಹಿ; ಕಾರಣ ಹೀಗಿದೆ..

ಎಲೆಕ್ಷನ್ನಲ್ಲಿ ಹಾವಿಂದ ರಕ್ಷಣೆಗೆ ರಾಸಾಯನಿಕ: ಕಾರ್ಬೋಲಿಕ್‌ ಆಮ್ಲ ನೀಡಲು ಚುನಾವಣಾ ಆಯೋಗ ನಿರ್ದೇಶನ
ಪಶ್ಚಿಮ ಬಂಗಾಳದಲ್ಲಿ ಜುಲೈ 8ರಂದು ನಡೆಯಲಿರುವ ಪಂಚಾಯತ್‌ ಚುನಾವಣೆಗಳ ಸಮಯದಲ್ಲಿ ಮತಗಟ್ಟೆ ಸಿಬ್ಬಂದಿಗಳನ್ನು ಹಾವುಗಳಿಂದ ರಕ್ಷಿಸಲು ಈ ಬಾರಿ ಚುನಾವಣಾ ಪರಿಕರಗಳ ಜೊತೆ ಕಾರ್ಬೋಲಿಕ್‌ ಆಮ್ಲವನ್ನು ನೀಡುವಂತೆ ರಾಜ್ಯ ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಮುಂಗಾರು ಸಮಯದಲ್ಲೇ ಅತಿ ಹೆಚ್ಚು ಹಾವು ಕಡಿತದ ಪ್ರಕರಣಗಳು ದಾಖಲಾಗಿರುವುದರಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಈ ರಾಸಾಯನಿಕವನ್ನು ಮತಗಟ್ಟೆ ಸುತ್ತ ಸಿಂಪಡಿಸಿದರೆ ಹಾವುಗಳು ಅತ್ತ ಕಡೆ ಸುಳಿಯುವುದಿಲ್ಲ ಎಂದು ವರದಿಯಾಗಿದೆ.

ಮತಪೆಟ್ಟಿಗೆ, ಮತಪತ್ರ ಮತ್ತು ಗುರುತಿನ ಇಂಕ್‌ ಜೊತೆಗೆ 4 ಕ್ಯಾಂಡಲ್‌ಗಳು, ಬೆಂಕಿಪೊಟ್ಟಣ, ಟಾರ್ಚ್‌ ಮತ್ತು ಕಾರ್ಬೋಲಿಕ್‌ ಆಮ್ಲವನ್ನು ನೀಡುವಂತೆ ಸೂಚಿಸಲಾಗಿದೆ. ಕಾರ್ಬೋಲಿಕ್‌ ಆಮ್ಲವನ್ನು ಬಳಸಿ ಹಾವುಗಳನ್ನು ದೂರ ಇಡುವ ಕ್ರಮವನ್ನು ಪಶ್ಚಿಮ ಬಂಗಾಳದ ಗ್ರಾಮೀಣ ಭಾಗಗಳಲ್ಲಿ ಅನುಸರಿಸಲಾಗುತ್ತದೆ. ಈ ಆಮ್ಲ ತೀಕ್ಷ್ಣವಾದ ಘಾಟನ್ನು ಹೊಂದಿದ್ದು ಇದು ಹಾವುಗಳನ್ನು ದೂರ ಇಡುತ್ತದೆ.

ಇದನ್ನೂ ಓದಿ: Bakrid: ಸರ್ಕಾರದ ಪ್ರಾಣಿಬಲಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ: ಮುಸ್ಲಿಂ ಸಮುದಾಯಕ್ಕೆ ಜಮಿಯತ್ ಮನವಿ

ಬಂಗಾಳದಲ್ಲಿ ಹೆಚ್ಚಿನ ಹಾವು ಕಡಿತಗಳು ಜೂನ್ ಮತ್ತು ಆಗಸ್ಟ್ ನಡುವಿನ ಮುಂಗಾರಿನ ತಿಂಗಳುಗಳಲ್ಲಿ ವರದಿಯಾಗುತ್ತವೆ. ರಾಜ್ಯದಲ್ಲಿ  ಕನಿಷ್ಠ ನಾಲ್ಕು ವಿಧದ ವಿಷಪೂರಿತ ಹಾವುಗಳು, ಈ ಪೈಕಿ ಎರಡು ವಿಧದ ನಾಗರಹಾವುಗಳು, ರಸ್ಸೆಲ್ಸ್ ವೈಪರ್ ಮತ್ತು ಸಾಮಾನ್ಯ ಕ್ರೈಟ್ ಹೇರಳವಾಗಿ ಕಂಡುಬರುತ್ತವೆ. ಬಂಗಾಳ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಕೇರಳದೊಂದಿಗೆ ಭಾರತದಲ್ಲಿ ಅತಿ ಹೆಚ್ಚು ಹಾವು ಕಡಿತ ಪ್ರಕರಣಗಳನ್ನು ವರದಿ ಮಾಡಿದೆ. ಸುಮಾರು 25% ಹಾವು ಕಡಿತಗಳು ಮಾರಣಾಂತಿಕವಾಗಿವೆ ಎಂದೂ ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: ಸಫಾರಿಗೆ ಹೋದವರ ಮೇಲೆ ಅಟ್ಟಿಸಿಕೊಂಡು ಹೋದ ವ್ಯಾಘ್ರ: ಪ್ರವಾಸಿಗರು ಜಸ್ಟ್ ಮಿಸ್!

click me!