ಎಲೆಕ್ಷನ್ನಲ್ಲಿ ಹಾವಿಂದ ರಕ್ಷಣೆಗೆ ರಾಸಾಯನಿಕ: ಕಾರ್ಬೋಲಿಕ್ ಆಮ್ಲ ನೀಡಲು ರಾಜ್ಯ ಚುನಾವಣಾ ಆಯೋಗ ನಿರ್ದೇಶನ
ಮತಪೆಟ್ಟಿಗೆ, ಮತಪತ್ರ ಮತ್ತು ಗುರುತಿನ ಇಂಕ್ ಜೊತೆಗೆ 4 ಕ್ಯಾಂಡಲ್‌ಗಳು, ಬೆಂಕಿಪೊಟ್ಟಣ, ಟಾರ್ಚ್ ಮತ್ತು ಕಾರ್ಬೋಲಿಕ್ ಆಮ್ಲವನ್ನು ನೀಡುವಂತೆ ಸೂಚಿಸಲಾಗಿದೆ. ಕಾರ್ಬೋಲಿಕ್ ಆಮ್ಲವನ್ನು ಬಳಸಿ ಹಾವುಗಳನ್ನು ದೂರ ಇಡುವ ಕ್ರಮವನ್ನು ಪಶ್ಚಿಮ ಬಂಗಾಳದ ಗ್ರಾಮೀಣ ಭಾಗಗಳಲ್ಲಿ ಅನುಸರಿಸಲಾಗುತ್ತದೆ.
ಕೋಲ್ಕತಾ (ಜುಲೈ 6, 2023): ಪಶ್ಚಿಮ ಬಂಗಾಳದಲ್ಲಿ ಜುಲೈ 8ರಂದು ನಡೆಯಲಿರುವ ಪಂಚಾಯತ್ ಚುನಾವಣೆಗಳ ಸಮಯದಲ್ಲಿ ಮತಗಟ್ಟೆ ಸಿಬ್ಬಂದಿಗಳನ್ನು ಹಾವುಗಳಿಂದ ರಕ್ಷಿಸಲು ಈ ಬಾರಿ ಚುನಾವಣಾ ಪರಿಕರಗಳ ಜೊತೆ ಕಾರ್ಬೋಲಿಕ್ ಆಮ್ಲವನ್ನು ನೀಡುವಂತೆ ರಾಜ್ಯ ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಮುಂಗಾರು ಸಮಯದಲ್ಲೇ ಅತಿ ಹೆಚ್ಚು ಹಾವು ಕಡಿತದ ಪ್ರಕರಣಗಳು ದಾಖಲಾಗಿರುವುದರಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಈ ರಾಸಾಯನಿಕವನ್ನು ಮತಗಟ್ಟೆ ಸುತ್ತ ಸಿಂಪಡಿಸಿದರೆ ಹಾವುಗಳು ಅತ್ತ ಕಡೆ ಸುಳಿಯುವುದಿಲ್ಲ.
ಮತಪೆಟ್ಟಿಗೆ, ಮತಪತ್ರ ಮತ್ತು ಗುರುತಿನ ಇಂಕ್ ಜೊತೆಗೆ 4 ಕ್ಯಾಂಡಲ್‌ಗಳು, ಬೆಂಕಿಪೊಟ್ಟಣ, ಟಾರ್ಚ್ ಮತ್ತು ಕಾರ್ಬೋಲಿಕ್ ಆಮ್ಲವನ್ನು ನೀಡುವಂತೆ ಸೂಚಿಸಲಾಗಿದೆ. ಕಾರ್ಬೋಲಿಕ್ ಆಮ್ಲವನ್ನು ಬಳಸಿ ಹಾವುಗಳನ್ನು ದೂರ ಇಡುವ ಕ್ರಮವನ್ನು ಪಶ್ಚಿಮ ಬಂಗಾಳದ ಗ್ರಾಮೀಣ ಭಾಗಗಳಲ್ಲಿ ಅನುಸರಿಸಲಾಗುತ್ತದೆ. ಈ ಆಮ್ಲ ತೀಕ್ಷ್ಣವಾದ ಘಾಟನ್ನು ಹೊಂದಿದ್ದು ಇದು ಹಾವುಗಳನ್ನು ದೂರ ಇಡುತ್ತದೆ.
ಇದನ್ನು ಓದಿ: ಪತ್ರಕರ್ತರಂದ್ರೆ ರಾಜ್ಯದ ಈ ರಾಜಕಾರಣಿಗೆ ಭಯ, ಕೇರಳದಲ್ಲಿ ಆಪರೇಷನ್ ಶಕ್ತಿಗೆ ಥರಗುಟ್ಟಿದ ಎಡಪಕ್ಷ!
ಬಂಗಾಳದಲ್ಲಿ ಹೆಚ್ಚಿನ ಹಾವು ಕಡಿತಗಳು ಜೂನ್ ಮತ್ತು ಆಗಸ್ಟ್ ನಡುವಿನ ಮುಂಗಾರಿನ ತಿಂಗಳುಗಳಲ್ಲಿ ವರದಿಯಾಗುತ್ತವೆ. ರಾಜ್ಯದಲ್ಲಿ ಕನಿಷ್ಠ ನಾಲ್ಕು ವಿಧದ ವಿಷಪೂರಿತ ಹಾವುಗಳು, ಈ ಪೈಕಿ ಎರಡು ವಿಧದ ನಾಗರಹಾವುಗಳು, ರಸ್ಸೆಲ್ಸ್ ವೈಪರ್ ಮತ್ತು ಸಾಮಾನ್ಯ ಕ್ರೈಟ್ ಹೇರಳವಾಗಿ ಕಂಡುಬರುತ್ತವೆ. ಬಂಗಾಳ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಕೇರಳದೊಂದಿಗೆ ಭಾರತದಲ್ಲಿ ಅತಿ ಹೆಚ್ಚು ಹಾವು ಕಡಿತ ಪ್ರಕರಣಗಳನ್ನು ವರದಿ ಮಾಡಿದೆ. ಸುಮಾರು 25% ಹಾವು ಕಡಿತಗಳು ಮಾರಣಾಂತಿಕವಾಗಿವೆ ಎಂದೂ ತಜ್ಞರು ಹೇಳುತ್ತಾರೆ.
'ಮಾನ್ಸೂನ್‌ನಲ್ಲಿ ಹಾವುಗಳು ಸಕ್ರಿಯವಾಗುತ್ತವೆ'
‘’ಮುಂಗಾರಿನ ಸಮಯದಲ್ಲಿ, ಹಾವುಗಳು ಸಕ್ರಿಯವಾಗಿರುತ್ತವೆ ಮತ್ತು ಇಲಿಗಳು ಹಾಗೂ ಕಪ್ಪೆಗಳನ್ನು ಬೇಟೆಯಾಡಲು ಹೊರಬರುತ್ತವೆ. ಇವುಗಳು ಹೆಚ್ಚಾಗಿ ಮಾನವ ವಾಸಸ್ಥಾನಗಳಲ್ಲಿ ಕಂಡುಬರುತ್ತವೆ. ಪರಿಣಾಮವಾಗಿ, ಹಾವು ಕಡಿತದ ಪ್ರಕರಣಗಳು ಹೆಚ್ಚಾಗುತ್ತದೆ. ಆದರೂ, ಈ ಹಾವುಗಳಲ್ಲಿ ಕೇವಲ 10%-15% ಮಾತ್ರ ವಿಷಪೂರಿತ ಕಚ್ಚುವ ಹಾವುಗಳು" ಎಂದು ಕಲ್ಕತ್ತಾ ರಾಷ್ಟ್ರೀಯ ವೈದ್ಯಕೀಯ ಕಾಲೇಜಿನ ತುರ್ತು ವಿಭಾಗದ ಪ್ರಭಾರಿ ದಯಾಳ್ ಬಂಧು ಮಜುಂದಾರ್ ಹೇಳಿದರು. ಅವರು ಹಾವು ಕಡಿತದ ಬಗ್ಗೆ ICMR ನ ತಾಂತ್ರಿಕ ಸಲಹೆಗಾರ ಮತ್ತು ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯೂ ಆಗಿದ್ದಾರೆ.
ಇದನ್ನೂ ಓದಿ: ಬಿಜೆಪಿ ಪರ ಬಿಎಸ್‌ಎಫ್ ಕೆಲಸ; ಮತ ಹಾಕದಂತೆ ಗಡಿ ಭಾಗದ ಜನರಿಗೆ ಬೆದರಿಕೆ: ಮಮತಾ ಬ್ಯಾನರ್ಜಿ ಆರೋಪ
ಇನ್ನು, "ಕಾರ್ಬೋಲಿಕ್ ಆಮ್ಲವು ತೀವ್ರವಾದ ವಾಸನೆಯೊಂದಿಗೆ ಹೆಚ್ಚು ನಾಶಕಾರಿಯಾಗಿದ್ದು ಅದು ಹಾವುಗಳ ವಿರುದ್ಧ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ" ಎಂದು ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ರಾಜ್ಯದ ವಿಷ ಮಾಹಿತಿ ಕೇಂದ್ರದ ಮಾಜಿ ಮುಖ್ಯಸ್ಥ ಬಂಕುರಾ ಸಮ್ಮಿಲಾನಿ ವೈದ್ಯಕೀಯ ಕಾಲೇಜಿನ ಫೋರೆನ್ಸಿಕ್ ಮೆಡಿಸಿನ್ ಪ್ರೊಫೆಸರ್ ಸೋಮನಾಥ್ ದಾಸ್ ಹೇಳಿದ್ದಾರೆ.
ಹಾಗೆ, ಅತ್ಯಂತ ನಾಶಕಾರಿಯಾದ ಕಾರ್ಬೋಲಿಕ್ ಆಮ್ಲದ ಸ್ವಲ್ಪ ವಾಸನೆ ಕೂಡ "ಹಾವು ತನ್ನ ಮಾರ್ಗವನ್ನು ಬದಲಾಯಿಸುವಂತೆ ಮಾಡುತ್ತದೆ" ಎಂದು ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯದ ಜೀವ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಪೂಜಾ ರೇ ಅವರು ಹೇಳುತ್ತಾರೆ.
ಇದನ್ನೂ ಓದಿ: ದೀದಿ ರಾಜ್ಯದಲ್ಲಿ ಮುಕ್ತವಾಯ್ತು ಕಾಂಗ್ರೆಸ್: 'ಕೈ' ಏಕೈಕ ಶಾಸಕ ಟಿಎಂಸಿಗೆ ಸೇರ್ಪಡೆ
ಕಲ್ಕತ್ತಾ ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪಾರ್ಥಿಬ್ ಬಸು ಕೂಡ, ಕಾರ್ಬೋಲಿಕ್ ಆಮ್ಲವನ್ನು ಚುನಾವಣಾ ಸಿಬ್ಬಂದಿ ಹಾವುಗಳನ್ನು ಓಡಿಸಲು ಪರಿಣಾಮಕಾರಿಯಾಗಿ ಬಳಸಬಹುದು ಎಂದು ಹೇಳಿದರು.
ಇದನ್ನೂ ಓದಿ: ನಾನು ಅಮಿತ್ ಶಾ ಗೆ ಕರೆ ಮಾಡಿರುವುದು ಸಾಬೀತಾದ್ರೆ ರಾಜೀನಾಮೆ ಕೊಡ್ತೇನೆ ಎಂದು ದೀದಿ ಹೇಳಿದ್ಯಾಕೆ?