Caste Abuse: ಸಭಾಪತಿ ಹೊರಟ್ಟಿ ವಿರುದ್ಧ ಜಾತಿ ನಿಂದನೆ ಪ್ರಕರಣ

By Kannadaprabha News  |  First Published Jan 29, 2022, 10:16 AM IST

*  ಧಾರವಾಡ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು
*  ಹೊರಟ್ಟಿ ವಿರುದ್ಧ ದೂರು ದಾಖಲಿಸಿದ ಮೋಹನ ಗುಡಸಿಮನಿ
*  ಬಸವರಾಜ ಹೊರಟ್ಟಿ ವಜಾಕ್ಕೆ ಆಗ್ರಹ
 


ಧಾರವಾಡ(ಜ.29): ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ(Basavaraj Horatti) ಸೇರಿದಂತೆ ಐವರ ವಿರುದ್ಧ ಜಾತಿ ನಿಂದನೆ(Caste Abuse) ಪ್ರಕರಣವೊಂದು ಧಾರವಾಡ(Dharwad) ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ದಾಖಲಾಗಿದೆ.

ತಾಲೂಕಿನ ಮುಗದ ಗ್ರಾಮದ ‘ಸರ್ವೋದಯ ಶಿಕ್ಷಣ ಸಂಸ್ಥೆ’ಯ ಪ್ರೌಢಶಾಲೆಯು ಬಸವರಾಜ ಹೊರಟ್ಟಿ ಅವರಿಗೆ ಸಂಬಂಧಿಸಿದ್ದಲ್ಲ. ಶಾಲೆಯಲ್ಲಿರುವ ನಾಮಫಲಕ ತೆರವುಗೊಳಿವಂತೆ ಶಾಲೆಯ ಸಿಬ್ಬಂದಿಗೆ ತಿಳಿಸಿದಾಗ ಅವರು ನಮಗೆ ಜಾತಿ ನಿಂದನೆ ಮಾಡಿದರು’ ಎಂದು ಗ್ರಾಮೀಣ ಪೊಲೀಸ್‌ ಠಾಣೆಗೆ ಮೋಹನ ಗುಡಸಿಮನಿ(Mohan Gudasimani) ಎಂಬುವರು ದೂರು ದಾಖಲಿಸಿದ್ದಾರೆ.

Tap to resize

Latest Videos

ವಿಧಾನಸೌಧದಿಂದ ಅಧಿಕಾರಿಗಳ ಕಚೇರಿ ಸ್ಥಳಾಂತರಿಸಿ: ಹೊರಟ್ಟಿ

ದೂರಿನಲ್ಲಿ ಬಸವರಾಜ ಹೊರಟ್ಟಿ ಅವರನ್ನು 5ನೇ ಆರೋಪಿಯನ್ನಾಗಿ ಮಾಡಿದ್ದು, ಉಳಿದಂತೆ ವೆಂಕಟೇಶ ಲಕ್ಷಾನಿ, ಚೈತ್ರಾ ಮೇಟಿ, ನಿರ್ಮಲಾ ಚೌಹಾಣ, ದೊಡ್ಡಪ್ಪ ಕೆಂಗಣ್ಣವರ ಅವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಸರ್ವೋದಯ ಟ್ರಸ್ಟ್‌ ಹಾಗೂ ಅದರ ಅಡಿಯ ಶಿಕ್ಷಣ ಸಂಸ್ಥೆಗಳ ಕುರಿತಾಗಿ ಹೈಕೋರ್ಟ್‌ನಲ್ಲಿ(High Court) ವ್ಯಾಜ್ಯ ನಡೆಯುತ್ತಿದ್ದು, ಸದ್ಯ ಅದು ಬಸವರಾಜ ಹೊರಟ್ಟಿ ನೇತೃತ್ವದ ಆಡಳಿತ ಮಂಡಳಿ ಕೈಯಲ್ಲಿದೆ. ಈ ಘಟನೆ ನಡೆದಾಗ ಹೊರಟ್ಟಿ ಸ್ಥಳದಲ್ಲಿ ಇರದೇ ಇದ್ದರೂ ಜಾತಿ ನಿಂದನೆ ಪ್ರಕರಣದಲ್ಲಿ ಅವರ ಹೆಸರು ಪ್ರಸ್ತಾಪಿಸಿರುವುದು ಇದೀಗ ಚರ್ಚೆಯ ವಿಷಯವಾಗಿದೆ.

ಸಭಾಪತಿ ಹುದ್ದೆಯಿಂದ ಹೊರಟ್ಟಿ ವಜಾಕ್ಕೆ ಆಗ್ರಹ

ಬೆಂಗಳೂರು: ಧಾರವಾಡ ತಾಲೂಕಿನ ಮಗದ್‌ ಗ್ರಾಮದಲ್ಲಿರುವ ಮಹರ್ಷಿ ವಾಲ್ಮೀಕಿ ಗುರುಪೀಠಕ್ಕೆ ಸೇರಿದ್ದ ಸರ್ವೋದಯ ಶಿಕ್ಷಣ ಟ್ರಸ್ಟ್‌ನ ಶಾಲೆಯಲ್ಲಿ ನಡೆದ ಗಲಭೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಸಭಾಪತಿ ಬಸವರಾಜ ಹೊರಟ್ಟಿವಿರುದ್ಧ ಎಫ್‌ಐಅರ್‌ ದಾಖಲಾಗಿದ್ದು, ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ದಲಿತಪರ ಸಂಘಟನೆಗಳು ಒತ್ತಾಯಿಸಿವೆ.

ನಗರದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ವಾಲ್ಮೀಕಿ ಮಹಾ ಪರಿಷತ್‌ನ ರಾಜ್ಯಾಧ್ಯಕ್ಷ ಬಸವರಾಜ ನಾಯಕ, ರಾಜ್ಯದಲ್ಲಿ ರಾಜ್ಯಪಾಲರ ನಂತರ ಪರಮೋಚ್ಛ ಸ್ಥಾನ ಸಭಾಪತಿಗೆ ಇರಲಿದೆ. ಆದರೆ, ಬಸವರಾಜ ಹೊರಟ್ಟಿ ಅವರು ವಿಧಾನ ಪರಿಷತ್‌ನ(Vidhan Parishat) ಗೌರವಕ್ಕೆ ಚ್ಯುತಿ ಬರುವ ಕೆಲಸ ಮಾಡಿದ್ದಾರೆ. ಅಲ್ಲದೆ, ಅವರ ವಿರುದ್ಧ ಎಫ್‌ಐಆರ್‌(FIR) ದಾಖಲಾಗಿದೆ. ಆದ್ದರಿಂದ ಅವರು ಸಭಾಪತಿ(Speaker) ಹುದ್ದೆಯಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದು ತಾವೇ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಬೇಕು. ಇಲ್ಲವಾದಲ್ಲಿ ರಾಜ್ಯಪಾಲರು(Governor) ಸಭಾಪತಿ ಸ್ಥಾನದಿಂದ ಅವರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಬಹುಜನ ಸಮಾಜ ಪಕ್ಷ ರಾಜ್ಯ ಸಂಚಾಲಕ ಮಾರಸಂದ್ರ ಮುನಿಯಪ್ಪ ಮಾತನಾಡಿ, 73ನೇ ಗಣರಾಜ್ಯೋತ್ಸವದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌(Dr BR Ambedkar) ಅವರ ಭಾವಚಿತ್ರಕ್ಕೆ ಅವಮಾನ ಮಾಡಿರುವ ರಾಯಚೂರು ಜಿಲ್ಲಾ ಸೆಷನ್ಸ್‌ ನ್ಯಾಯಾಲಯದ(Court) ನ್ಯಾಯಾಧೀಶರನ್ನು ತಕ್ಷಣ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

Private School: ಬೊಮ್ಮಾಯಿ-ಹೊರಟ್ಟಿ ಮಹತ್ವದ ಸಭೆ, ಖಾಸಗಿ ಶಾಲೆ, ಶಿಕ್ಷಕರಿಗೆ ಗುಡ್‌ ನ್ಯೂಸ್

ಆರ್‌ಪಿಐ ಪಕ್ಷದ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ, ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಎನ್‌. ಮೂರ್ತಿ, ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ರಾಜ್ಯಾಧ್ಯಕ್ಷ ಸಿರಿಗೇರಿ ತಿಪ್ಪೇಶಿ ಮತ್ತಿತರರಿದ್ದರು.

ಗ್ರಾಪಂ ಅಧ್ಯಕ್ಷೆ ದುರ್ನ​ಡತೆ ಬಗ್ಗೆ ಆರೋ​ಪ

ಸಂಡೂರು(Sandur): ನರಸಿಂಗಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲಾ ಓಬಳೇಶ್‌ ಅವರು ತಮ್ಮನ್ನು ಒಬ್ಬ ಸದಸ್ಯೆ ಎಂದೂ ಗೌರವಿಸದೆ ಏಕವಚನದಲ್ಲಿ ನಿಂದಿಸುವುದಲ್ಲದೆ ತಮ್ಮ ವಿಷಯದಲ್ಲಿ ಅಗೌರವವಾಗಿ ನಡೆದುಕೊಂಡು ದುರ್ನಡತೆ ತೋರುತ್ತಿದ್ದಾರೆ ಎಂದು ಆರೋಪಿಸಿ ಅದೇ ಪಂಚಾಯ್ತಿ ಸದಸ್ಯೆ ಕೆ. ಸರಸ್ವತಿ ದೇವೇಂದ್ರಪ್ಪ ಆರೋಪಿಸಿದ್ದಾರೆ.
 

click me!