Kolar: ಶ್ರೀಪಾದರಾಜ ಮಠದ ಕೇಶವನಿಧಿ ಶ್ರೀ ವಿಧಿವಶ

By Kannadaprabha NewsFirst Published Jan 29, 2022, 9:28 AM IST
Highlights

*  ಕಳೆದ ಆರು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾಮೀಜಿ
*  ಕೋವಿಡ್‌ ಹಿನ್ನೆಲೆಯಲ್ಲಿ ಮಠದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಇರಲಿಲ್ಲ
*  ಮಠದ ಆವರಣದಲ್ಲಿಯೇ ಅಂತ್ಯಸಂಸ್ಕಾರ

ಕೋಲಾರ(ಜ.29): ಮುಳಬಾಗಿಲು ಪಟ್ಟಣದ ಹೊರವಲಯದಲ್ಲಿರುವ ಶ್ರೀ ಪಾದರಾಜ ಮಠದ(Shri Padaraj Matha) ಮಠಾಧೀಶ ಶ್ರೀ ಕೇಶವನಿಧಿ ತೀರ್ಥರು(Shri Keshavnidhi Teertha) ಬೆಂಗಳೂರಿನಲ್ಲಿ ಶುಕ್ರವಾರ ಬೆಳಗಿನ ಜಾವ ವಿಧಿವಶವಾದರು(Passes Away).

ಆರು ತಿಂಗಳಿಂದ ಅನಾರೋಗ್ಯದಿಂದ(Illness) ಬಳಲುತ್ತಿದ್ದ ಸ್ವಾಮೀಜಿಯವರು ಬೆಂಗಳೂರಿನ(Bengaluru) ಚಾಮರಾಜಪೇಟೆಯ ಮಠದಲ್ಲಿ ಕೊನೆಯುಸಿರೆಳೆದರು. ಸ್ವಾಮೀಜಿಗಳ ಪಾರ್ಥಿವ ಶರೀರವನ್ನು ಬೆಳಗ್ಗೆ 9 ಗಂಟೆಯ ತನಕ ಬೆಂಗಳೂರಿನ ಮಠದಲ್ಲಿಯೇ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಮಧ್ಯಾಹ್ನ 2 ಗಂಟೆಗೆ ಮುಳಬಾಗಿಲಿನ ನರಸಿಂಹತೀರ್ಥ ಕ್ಷೇತ್ರದಲ್ಲಿರುವ ಶ್ರೀ ಪಾದರಾಜ ಮಠಕ್ಕೆ ತರಲಾಯಿತು. 

Mangaluru: ಮರಕಡ ಪರಾಶಕ್ತಿ ಮಠದ ಶ್ರೀ ನರೇಂದ್ರನಾಥ ಸ್ವಾಮೀಜಿ ಲಿಂಗೈಕ್ಯ

ಕೋವಿಡ್‌(Covid19) ಹಿನ್ನೆಲೆಯಲ್ಲಿ ಮಠದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಇರಲಿಲ್ಲ. ಸಂಜೆ ಮಠದ ಸುತ್ತಲೂ ಸ್ವಾಮೀಜಿ ಅವರ ಪಾರ್ಥಿವ ಶರೀರದ ಮೆರವಣಿಗೆ ಮಾಡಿ ನಂತರ ಮಠದ ಆವರಣದಲ್ಲಿಯೇ ಅಂತ್ಯಸಂಸ್ಕಾರ(Funeral) ನೆರವೇರಿಸಲಾಯಿತು. ಮಠದ ಸಿಬ್ಬಂದಿ ಹಾಗು ಕಿರಿಯ ಶ್ರೀಗಳಾದ ಸುಜಯ ನಿಧಿ ತೀರ್ಥರಿಂದ ಅಂತಿಮ ವಿಧಿ ವಿಧಾನಗಳ ಕಾರ್ಯ ಸಂಜೆ 5 ಗಂಟೆಯ ನಂತರ ನೆರವೇರಿತು.

ಶ್ರೀಗಳು 15 ವರ್ಷಗಳಿಂದ ಶ್ರೀ ಪಾದ ಮಠದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಅನಾರೋಗ್ಯದ ಹಿನ್ನಲೆಯಲ್ಲಿ 6 ತಿಂಗಳ ಹಿಂದಷ್ಟೇ ಕಿರಿಯ ಶ್ರೀಗಳಾದ ಸುಜಯ ನಿಧಿ ಸ್ವಾಮೀಜಿಗಳಿಗೆ ಅಧಿಕಾರ ಹಸ್ತಾಂತರಿಸಿದ್ದರು.
 

click me!