ವ್ಯವಸ್ಥಾಪಕನ ಹಣದ ಅವ್ಯವಹಾರ ಬೆನ್ನಲೇ ಕ್ಯಾಷಿಯರ್‌ ಆತ್ಮಹತ್ಯೆಗೆ ಶರಣು

By Kannadaprabha News  |  First Published Oct 7, 2022, 5:46 AM IST

ಜಿಲ್ಲೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಒಂದರಲ್ಲಿ ಬ್ಯಾಂಕ್‌ ವ್ಯವಸ್ಥಾಪಕ ಲಕ್ಷಾಂತರ ರು. ಹಣವನ್ನು ಬೇರೆ ಬೇರೆಯವರ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಿ ಲಕ್ಷಾಂತರ ರು, ಹಣ ದುರ್ಬಳಕೆ ಆರೋಪ ಕೇಳಿ ಬಂದಿರುವ ಬೆನ್ನಲೇ ಬ್ಯಾಂಕ್‌ ಕ್ಯಾಷಿಯರ್‌ ಒಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಗೌರಿಬಿದನೂರಲ್ಲಿ ನಡೆದಿದೆ.


ಚಿಕ್ಕಬಳ್ಳಾಪುರ (ಅ.07): ಜಿಲ್ಲೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಒಂದರಲ್ಲಿ ಬ್ಯಾಂಕ್‌ ವ್ಯವಸ್ಥಾಪಕ ಲಕ್ಷಾಂತರ ರು. ಹಣವನ್ನು ಬೇರೆ ಬೇರೆಯವರ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಿ ಲಕ್ಷಾಂತರ ರು, ಹಣ ದುರ್ಬಳಕೆ ಆರೋಪ ಕೇಳಿ ಬಂದಿರುವ ಬೆನ್ನಲೇ ಬ್ಯಾಂಕ್‌ ಕ್ಯಾಷಿಯರ್‌ ಒಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಗೌರಿಬಿದನೂರಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಬ್ಯಾಂಕ್‌(bank)) ಕ್ಯಾಷಿಯರನ್ನು ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕಲ್ಲುಡಿ ಗ್ರಾಮದ ನಿವಾಸಿ ಸುನೀಲ್‌ ಎಂದು ಗುರುತಿಸಲಾಗಿದ್ದು ಬುಧವಾರ ರಾತ್ರಿ ವಾಟದಹೊಸಹಳ್ಳಿ ಬಳಿ ಕೆರೆ ಸಮೀಪ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುನೀಲ್‌ ಗುಂಡಚಿಕ್ಕನಹಳ್ಳಿಯ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ಕ್ಯಾಷಿಯರ್‌ ಆಗಿ ಕೆಲಸ ಮಾಡುತ್ತಿದ್ದ.

Tap to resize

Latest Videos

ಲಕ್ಷಾಂತರ ರು. ದುರ್ಬಳಕೆ: ಗೌರಿಬಿದನೂರುನ ಕಲ್ಲುಡಿ ಕರ್ನಾಟಕ (Karntaka) ಗ್ರಾಮೀಣ ಬ್ಯಾಂಕ್‌ನಲ್ಲಿ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಅದೇ ತಾಲೂಕಿನ ಜಿ.ಬೊಮ್ಮಸಂದ್ರದ ನಿವಾಸಿ ಮಣೀಂದ್ರರೆಡ್ಡಿ ಎಸ್‌ ಬಿನ್‌ ಸಕ್ಕರಪ್ಪರೆಡ್ಡಿ (30) ಎಂಬಾತ ಸೆ.29 ಹಾಗೂ 30 ರಂದು ದೆಹಲಿ, ಗುಜರಾತ್‌ ಹಾಗೂ ಕೊಲ್ಕತ್ತಾ ಮೂಲದ ಮೂವರು ವ್ಯಕ್ತಿಗಳಿಗೆ ಹಾಗೂ ದೆಹಲಿ (Delhi) ಮೂಲದ ಬಾಲಾಜಿ ಟ್ರೇಡರ್‌ ಹಾಗೂ ವಿಸನ್‌ ಗ್ಲೋಬರ್‌ ಸಂಸ್ಥೆಗೆ ಬರೋಬ್ಬರಿ 84.78 ಲಕ್ಷ ರು, ಹಣವನ್ನು ಯೆಸ್‌ ಬ್ಯಾಂಕ್‌ ಮೂಲಕ ಮಣೀಂದ್ರರೆಡ್ಡಿ ಆರ್‌ಟಿಜಿಎಸ್‌ ಮೂಲಕ ಅಕ್ರಮವಾಗಿ ವರ್ಗಾವಣೆ ಮಾಡಿದ್ದ. ಈ ಕುರಿತು ಬ್ಯಾಂಕಿನ ಕೋಲಾರದ ಪ್ರಾದೇಶಿಕ ವ್ಯವಸ್ಥಾಪಕರು ಗೌರಿಬಿದನೂರು ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು.

ತನಿಖೆಗೆ ಹೆದರಿ ಆತ್ಮಹತ್ಯೆ: 84.78 ಲಕ್ಷ ರು, ಹಣವನ್ನು ಅಕ್ರಮವಾಗಿ ಬೇರೆ ವ್ಯಕ್ತಿಗಳಿಗೆ ವರ್ಗಾಯಿಸಿ ಸದ್ಯ ತಲೆಮರೆಸಿಕೊಂಡಿರುವ ಮಣೀಂಧ್ರರೆಡ್ಡಿ ಈ ಮೊದಲು ಗುಡಿಬಂಡೆ ತಾಲೂಕಿನ ಎಲ್ಲೋಡಿನಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ವ್ಯವಸ್ಥಾಪಕರಾಗಿ ಇದ್ದು ಇದೇ ವೇಳೆ ಆತ್ಮಹತ್ಯೆಗೆ ಶರಣಾಗಿರುವ ಸುನೀಲ್‌ ಸಹ ಕ್ಯಾಷಿಯರ್‌ ಆಗಿದ್ದ. ಬಳಿಕ ಮಣೀಂದ್ರರರೆಡ್ಡಿರನ್ನು ಕಲ್ಲೂಡಿ ಬ್ಯಾಂಕ್‌ಗೆ ವರ್ಗಾಯಿಸಿದಾಗ ಸುನೀಲ್‌ರನ್ನು ಗುಂಡಚಿಕ್ಕನಹಳ್ಳಿ ಶಾಖೆಗೆ ಕ್ಯಾಷಿಯರ್‌ ಆಗಿ ವರ್ಗಾವಣೆಗೊಂಡ ಬಂದಿದ್ದ. ಆದರೆ ಕಲ್ಲುಡಿ ಬ್ಯಾಂಕಿನಲ್ಲಿ ಹಣಕಾಸಿನ ಅವ್ಯವಹಾರ ಬೆಳಕಿಗೆ ಬಂದ ಬೆನ್ನಲೇ ಬ್ಯಾಂಕ್‌ ಕ್ಯಾಷಿಯರ್‌ ಸುನೀಲ್‌ ಆತ್ಮಹತ್ಯೆ ಪ್ರಕರಣ ಸಾಕಷ್ಟುಅನುಮಾನಗಳಿಗೆ ಕಾರಣವಾಗಿದೆ. ಬ್ಯಾಂಕ್‌ ವ್ಯವಸ್ಥಾಪಕ ಮಣೀಂದ್ರರೆಡ್ಡಿ ಹಾಗೂ ಕ್ಯಾಷಿಯರ್‌ ಆಗಿದ್ದ ಸುನೀಲ್‌ ನಡುವೆ ಸಾಕಷ್ಟುಹಣಕಾಸಿನ ವ್ಯವಹಾರ ಇತ್ತು ಎನ್ನಲಾಗಿದ್ದು ಅಕ್ರಮವಾಗಿ ಹಣ ದುರುಪಯೋಗಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಸುನೀಲ್‌ ತನಿಖೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡರಾ ಎನ್ನುವ ಚರ್ಚೆ ಈಗ ಮುನ್ನೆಲೆಗೆ ಬಂದಿದೆ.

  •  ವ್ಯವಸ್ಥಾಪಕನ ಹಣದ ಅವ್ಯವಹಾರ ಬೆನ್ನಲೇ ಕ್ಯಾಷಿಯರ್‌ ಆತ್ಮಹತ್ಯೆಗೆ ಶರಣು
  • ವ್ಯವಸ್ಥಾಪಕನ ಹಣದ ಅವ್ಯವಹಾರ ಬೆನ್ನಲೇ ಕ್ಯಾಷಿಯರ್‌ ಆತ್ಮಹತ್ಯೆಗೆ ಶರಣು
  • ಬೇರೆ ಖಾತೆಗಳಿಗೆ 84.78 ಲಕ್ಷ ಹಣ ವರ್ಗಾಯಿಸಿ ಮ್ಯಾನೇಜರ್‌ ಮಣೀಂದ್ರರೆಡ್ಡಿ ನಾಪತ್ತೆ ಪ್ರಕರಣ
  • ಗೌರಿಬಿದನೂರುನ ಕಲ್ಲುಡಿ ಕರ್ನಾಟಕ (Karntaka) ಗ್ರಾಮೀಣ ಬ್ಯಾಂಕ್‌ನಲ್ಲಿ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಅದೇ ತಾಲೂಕಿನ ಜಿ.ಬೊಮ್ಮಸಂದ್ರದ ನಿವಾಸಿ
  • ಆತ್ಮಹತ್ಯೆಗೆ ಶರಣಾದ ಬ್ಯಾಂಕ್‌(bank)) ಕ್ಯಾಷಿಯರನ್ನು ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕಲ್ಲುಡಿ ಗ್ರಾಮದ ನಿವಾಸಿ ಸುನೀಲ್‌
  • ತನಿಖೆಗೆ ಹೆದರಿ ಆತ್ಮಹತ್ಯೆ: 84.78 ಲಕ್ಷ ರು, ಹಣವನ್ನು ಅಕ್ರಮವಾಗಿ ಬೇರೆ ವ್ಯಕ್ತಿಗಳಿಗೆ ವರ್ಗಾಯಿಸಿ ಸದ್ಯ ತಲೆಮರೆಸಿಕೊಂಡಿರುವ ಮಣೀಂಧ್ರರೆಡ್ಡಿ
  • ಬ್ಯಾಂಕಿನಲ್ಲಿ ಹಣಕಾಸಿನ ಅವ್ಯವಹಾರ ಬೆಳಕಿಗೆ ಬಂದ ಬೆನ್ನಲೇ ಬ್ಯಾಂಕ್‌ ಕ್ಯಾಷಿಯರ್‌ ಸುನೀಲ್‌ ಆತ್ಮಹತ್ಯೆ
click me!