ಸಾಮಾಜಿಕ ಹೋರಾಟ, ನಾಡು, ನುಡಿ ಪರ ಹೋರಾಟ ನಡೆಸಿದಾಗ ಪೊಲೀಸರು ಕೇಸ್ ದಾಖಲಿಸುವುದು ಸಹಜ, ಹಾಗೆಂದು ಮನೆಯಲ್ಲಿ ಕುಳಿತರೆ ಯಾವುದೇ ಕೆಲಸವೂ ಆಗುವುದಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು.
ದಾವಣಗೆರೆ (ಆ.21): ಸಾಮಾಜಿಕ ಹೋರಾಟ, ನಾಡು, ನುಡಿ ಪರ ಹೋರಾಟ ನಡೆಸಿದಾಗ ಪೊಲೀಸರು ಕೇಸ್ ದಾಖಲಿಸುವುದು ಸಹಜ, ಹಾಗೆಂದು ಮನೆಯಲ್ಲಿ ಕುಳಿತರೆ ಯಾವುದೇ ಕೆಲಸವೂ ಆಗುವುದಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು. ನಗರದ ಜಿಲ್ಲಾ ಗುರುಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಜ್ಞಾನಕಾಶಿ ಪ್ರತಿಭಾ ಪುರಸ್ಕಾರ, ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ ದೇಶದಲ್ಲಿ ಇಂದಿಗೂ ವ್ಯವಸ್ಥೆಯು ಸರಿ ಹೋಗಿಲ್ಲ. ಹೋರಾಟದಿಂದಲೇ ಕೆಲಸ ಮಾಡಿಸಿಕೊಳ್ಳಬೇಕಾದ ಸ್ಥಿತಿ ಇದೆ ಎಂದರು.
ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರೂ ಬಂಡವಾಳ ಶಾಹಿಗಳು, ಅಧಿಕಾರಿಗಳದ್ದೇ ಪುಂಡಾಟ ಮುಂದುವರಿದಿದೆ. ಹಾಗಾಗಿ ಏನೇ ಕೆಲಸ ಆಗಬೇಕೆಂದರೂ ಹೋರಾಟ ಅನಿವಾರ್ಯ ಎಂಬ ಸ್ಥಿತಿ ಇದೆ ಎಂದು ತಿಳಿಸಿದರು. ಬೆಂಗಳೂರಿನ ಇತಿಹಾಸ ತಜ್ಞ ಎ.ಎಸ್.ಧರ್ಮೇಂದ್ರಕುಮಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪುರಸ್ಕೃತರಾಗಿ ಮಾತನಾಡಿ, ಕನ್ನಡಿಗನಾಗಿದ್ದೇನೆಂಬ ಅಭಿಮಾನ ಹೊಂದಲು ಶತ ಶತಮಾನಗಳಿಂದರೂ ಅನೇಕ ಸಂಗತಿ, ಸಾಧನೆ ಇವೆ. ದೇಶದಲ್ಲೇ ಮೊದಲ ಸಲ ವಿದ್ಯುಚ್ಛಕ್ತಿ ಅಳವಡಿಸಿಕೊಂಡಿದ್ದು ಮೈಸೂರು ಸಂಸ್ಥಾನ.
ದೇವರಾಜು ಅರಸು ದಾರಿಯಲ್ಲಿ ಸಿಎಂ ಸಿದ್ದರಾಮಯ್ಯ: ಶಾಸಕ ಆನಂದ್
1880ರಲ್ಲಿ ಆಗಿನ ಮೈಸೂರು ರಾಜ್ಯದಲ್ಲಿ ಪ್ರಜಾಪ್ರತಿನಿಧಿ ಸಭೆಯ ಮೂಲಕ ಪ್ರಜಾಪ್ರಭುತ್ವ ಜಾರಿಯಲ್ಲಿತ್ತು ಎಂದರು. ಶಿಕ್ಷಣದಿಂದ ಯಾರೊಬ್ಬರೂ ವಂಚಿತರಾಗಬಾರದೆಂಬ ಸದುದ್ದೇಶದಿಂದ ಶಿಕ್ಷಣಕ್ಕೆ ಅಷ್ಟೇ ಮಹತ್ವ ನೀಡಿದ್ದ ಶ್ರೀಮಂತ ವ್ಯಕ್ತಿತ್ವವನ್ನು ಮೈಸೂರು ಒಡೆಯರು ಮೈಗೂಡಿಸಿಕೊಂಡಿದ್ದರು. ಮೈಸೂರು ಅರಸರು ನಾಡಿಗೆ ನೀಡಿದ ಕೊಡುಗೆಯಂತೂ ಅವಿಸ್ಮರಣೀಯವಾದ್ದುದು ಎಂದು ವಿವರಿಸಿದರು.
ಪಾಲಿಕೆ ಸದಸ್ಯರಾದ ಕೆ.ಚಮನ್ ಸಾಬ್, ಎ.ನಾಗರಾಜ, ಪಾಮೇನಹಳ್ಳಿ ನಾಗರಾಜ, ಮಾಹಾನಗಳ್ಳಿ ಬಿ.ಕೆ.ಪರಶುರಾಮ, ಬಿಇಓ ಪುಷ್ಪಲತಾ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ, ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಕರಿಬಸಪ್ಪ, ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ, ಗೌರವಾಧ್ಯಕ್ಷ ವಾಸುದೇವ ರಾಯ್ಕರ್, ಮಹಿಳಾ ಅಧ್ಯಕ್ಷೆ ಬಸಮ್ಮ, ಜಬೀವುಲ್ಲಾ, ಲೋಕೇಶ, ಅರ್.ಅಬ್ದುಲ್, ಸಂತೋಷ್, ಗೋಪಾಲ, ಮಲ್ಲಿಕಾರ್ಜುನ, ನಾಗರಾಜ, ಎಂ.ಮಹಾಂತೇಶ, ಕೋಮಲ್ ಜೈನ್, ಬಾಬಣ್ಣ, ಕರಿಬಸಪ್ಪ ಬೂದಿಹಾಳ್ ಇತರರಿದ್ದರು. ಅಂಕಣಕಾರ ಜಗನ್ನಾಥ ನಾಡಿಗೇರ್ ಕಾರ್ಯಕ್ರಮ ನಡೆಸಿಕೊಟ್ಟರು. ಜೀವಿತಾ ಪ್ರಾರ್ಥಿಸಿದರು. ಪರಮೇಶ್ವರ, ಮಂಜುನಾಥ ತಂಡ ನಾಡಗೀತೆ ಹಾಡಿತು.
ವಿವಿಧ ಪ್ರಶಸ್ತಿಗಳ ಪ್ರದಾನ: 2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ಕನ್ನಡ ಪರೀಕ್ಷೆಯಲ್ಲಿ 125ಕ್ಕೆ 125 ಅಂಕ ಪಡೆದ ದಾವಣಗೆರೆ ಉತ್ತರ-ದಕ್ಷಿಣ ವಲಯದ ವಿದ್ಯಾರ್ಥಿಗಳಿಗೆ ಜ್ಞಾನಕಾಶಿ ಪ್ರತಿಭಾ ಪುರಸ್ಕಾರ ನೀಡಿ, ಗೌರವಿಸಲಾಯಿತು. ದೊಡ್ಡಬಾತಿ ತಪೋವನದ ಮುಖ್ಯಸ್ಥ ಡಾ.ಶಶಿಕುಮಾರ ಮೆಹರವಾಡೆಗೆ ಪರಿಸರ ರತ್ನ ಪ್ರಶಸ್ತಿ ನೀಡಿ, ಗೌರವಿಸಲಾಯಿತು. ಬೆಂಗಳೂರು ಕಾಸಿಯಾ ಕಾರ್ಯಕಾರಿಣಿ ಸದಸ್ಯರಾಗಿ ಆಯ್ಕೆಯಾದ ಶ್ರೀನಿವಾಸ ಚಿನ್ನಿಕಟ್ಟಿಗೆ ಸನ್ಮಾನಿಸಲಾಯಿತು.
ದಿವಾಳಿಯ ಸ್ಥಿತಿಗೆ ತಲುಪಿದ ಕಾಂಗ್ರೆಸ್ ಸರ್ಕಾರ: ಪ್ರಲ್ಹಾದ್ ಜೋಶಿ
ಕೊರೋನಾ ಕಾಲಘಟ್ಟದಲ್ಲಿ ಎಲ್ಲವನ್ನೂ ನಾವು ಕಂಡಿದ್ದೇವೆ. ಆದರೆ, ಮೈಸೂರು ಅರಸರು ಹಿಂದೆ ಕಾಲರಾ ಲಸಿಕೆಯನ್ನು ನೀಡುವ ಬಗ್ಗೆ ತಪ್ಪು ಅಭಿಪ್ರಾಯ ಬಂದಾಗ, ಜನರಲ್ಲಿ ಆತಂಕ, ಭಯ ಮೂಡಿದ್ದಾಗ ಇಡೀ ಅರಮನೆಯವರೇ ಮೊದಲಿಗೆ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಜನರಿಗೆ ಧೈರ್ಯ ತುಂಬಿದ್ದರು.
-ಧರ್ಮೇಂದ್ರಕುಮಾರ, ಇತಿಹಾಸ ತಜ್ಞ