ಶಿವಾಜಿ ಪುತ್ಥಳಿ ಸ್ಥಾಪನೆ ವಿಚಾರ; ಬಿಜೆಪಿಯ ನಾಯಕರಲ್ಲಿ ಮತ್ತೆ ಶುರುವಾಯ್ತು ಆಣೆ ಪ್ರಮಾಣದ ಪೈಟ್!

By Kannadaprabha NewsFirst Published Aug 21, 2023, 9:41 AM IST
Highlights

ನಗರದಲ್ಲಿ ಶಿವಾಜಿ ಪುತ್ಥಳಿ ಸ್ಥಾಪನೆಗೆ ನನ್ನ ವಿರೋಧವಿಲ್ಲ, ಆದಾಗ್ಯ ನನ್ನ ವಿರುದ್ಧ ಆರೋಪ ಮಾಡಲಾಗುತ್ತಿದೆ. ಇದಕ್ಕಾಗಿ ಮುಚಖಂಡಿ ವೀರಭದ್ರೇಶ್ವರ, ತುಳಸಿಗೇರಿ ಆಂಜನೇಯ ದೇವಸ್ಥಾನದಲ್ಲಿ ಆಣೆ-ಪ್ರಮಾಣಕ್ಕೂ ಸಿದ್ಧನಿದ್ದೇನೆ. ಮಾಜಿ ಶಾಸಕ ವೀರಣ್ಣ ಚರಂತಿಮಠ ಸಿದ್ಧರೇ? ಎಂದು ವಿಧಾನ ಪರಿಷತ್‌ ಸದಸ್ಯ ಪಿ.ಎಚ್‌.ಪೂಜಾರ ಸವಾಲು ಹಾಕಿದ್ದಾರೆ.

ಬಾಗಲಕೋಟೆ (ಆ.21) :  ನಗರದಲ್ಲಿ ಶಿವಾಜಿ ಪುತ್ಥಳಿ ಸ್ಥಾಪನೆಗೆ ನನ್ನ ವಿರೋಧವಿಲ್ಲ, ಆದಾಗ್ಯ ನನ್ನ ವಿರುದ್ಧ ಆರೋಪ ಮಾಡಲಾಗುತ್ತಿದೆ. ಇದಕ್ಕಾಗಿ ಮುಚಖಂಡಿ ವೀರಭದ್ರೇಶ್ವರ, ತುಳಸಿಗೇರಿ ಆಂಜನೇಯ ದೇವಸ್ಥಾನದಲ್ಲಿ ಆಣೆ-ಪ್ರಮಾಣಕ್ಕೂ ಸಿದ್ಧನಿದ್ದೇನೆ. ಮಾಜಿ ಶಾಸಕ ವೀರಣ್ಣ ಚರಂತಿಮಠ ಸಿದ್ಧರೇ? ಎಂದು ವಿಧಾನ ಪರಿಷತ್‌ ಸದಸ್ಯ ಪಿ.ಎಚ್‌.ಪೂಜಾರ ಸವಾಲು ಹಾಕಿದ್ದಾರೆ.

ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವಾಜಿ ಪ್ರತಿಮೆ ಪ್ರತಿಷ್ಠಾಪನೆ ವಿಚಾರದಲ್ಲಿ ನಾನು ಸುಳ್ಳು ಹೇಳಿದರೆ ವಿಪ ಸದಸ್ಯ ಸ್ಥಾನಕ್ಕೇ ರಾಜೀನಾಮೆ ನೀಡುತ್ತೇನೆ. ನೀವು ಸುಳ್ಳು ಹೇಳಿದರೆ ರಾಜಕೀಯ ನಿವೃತ್ತಿ ಪಡೆದುಕೊಳ್ಳಬೇಕು. ಪ್ರಮಾಣ ಮಾಡಲು ಸ್ವತಃ ತಾವೇ ಬರಬೇಕು ಎಂದು ಚರಂತಿಮಠಗೆ ತಿರುಗೇಟು ನೀಡಿದರು.

ಬಿಜೆಪಿಯಲ್ಲಿ ಭುಗಿಲೆದ್ದ ಬಣ ರಾಜಕಾರಣ..!

ಶಿವಾಜಿ, ಬಸವೇಶ್ವರ ಪುತ್ಥಳಿಗೆ ನಾನು ಯಾವುದೇ ಸಂದರ್ಭದಲ್ಲೂ ವಿರೋಧ ಮಾಡಲು ಸಾಧ್ಯವಿಲ್ಲ. ಸಂಘ ಪರಿವಾರದಿಂದಲೇ ಬಂದವನಾದ ನಾನು ಹಿಂದು ವಿರೋಧಿ ಚಟುವಟಿಕೆ ಮಾಡಲು ಸಾಧ್ಯವಿಲ್ಲ. ಸಭೆ, ಸಮಾರಂಭ, ಪ್ರತಿಭಟನೆಗಳಲ್ಲಿ ಪುತ್ಥಳಿಗೆ ವಿರೋಧ ಮಾಡುತ್ತಿದ್ದಾರೆಂದು ವಿನಾಕಾರಣ ನನ್ನ ಹೆಸರು ಪ್ರಸ್ತಾಪ ಮಾಡುತ್ತಿದ್ದೀರಿ. ಹಾಗಿದ್ದರೆ ದೇವಸ್ಥಾನಕ್ಕೆ ಬಂದು ಆಣೆ ಪ್ರಮಾಣ ಮಾಡಿ. ನಾನು ಉಟ್ಟಬಟ್ಟೆಯಲ್ಲೇ ನೀವು ಹೇಳಿದ ಸಮಯಕ್ಕೆ ಬರುತ್ತೇನೆ ಎಂದು ಪೂಜಾರ್‌ ಶಾಸಕ ವೀರಣ್ಣ ಚರಂತಿಮಠಗೆ ಪಂಥಾಹ್ವಾನ ನೀಡಿದರು.

ಈ ಹಿಂದೆ 5 ವರ್ಷ ಅಧಿಕಾರದಲ್ಲಿ ಇದ್ದಾಗ ಆರ್‌ಎಸ್‌ಎಸ್‌ ಮೆರವಣಿಗೆ ವೇಳೆ ಪರಿವಾರದ ಕಾರ್ಯಕರ್ತರ ಮೇಲೆ ಜಾತಿ ನಿಂದನೆ ಕೇಸ್‌ ದಾಖಲಿಸಿದ್ದು, ಕೆಂಪು ರೋಡ್‌ ಹನುಮಂತ ದೇವರ ಕಟ್ಟಡಕ್ಕೆ ಅಡ್ಡಿಸುದ್ದು ತಾವು. ಹಿಂದೂ ವಿರೋಧಿ ಚಟುವಟಿಕೆ ಮಾಡಿದ್ದು ಮರೆತಿದ್ದೀರಾ? ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.

ಜಿಲ್ಲಾಡಳಿತ ಕ್ರಮ ಖಂಡನೀಯ:

ಇನ್ನು ಪುತ್ಥಳಿ ಸ್ಥಾಪನೆ ವಿಷಯದಲ್ಲಿ ಜಿಲ್ಲಾಡಳಿತ, ಪೊಲೀಸರ ಕ್ರಮ ಖಂಡನೀಯ. ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತುತ್ತೇನೆ. ಪಕ್ಷದ ವರಿಷ್ಠರಿಗೂ ಈ ಬಗ್ಗೆ ವರದಿ ನೀಡುತ್ತೇನೆ. ಸಿಎಂ ಸಿದ್ದರಾಮಯ್ಯ ಅವರಿಗೂ ಮನವಿ ಮಾಡಿ ಪುತ್ಥಳಿ ಸ್ಥಾಪನೆಗೆ ಮನವಿ ಮಾಡುತ್ತೇನೆ ಎಂದು ಹೇಳಿದರು.

ಯಾರೋ ರಾತ್ರೋ ರಾತ್ರಿ ಪ್ಲಾಸ್ಟಿಕ್‌ ಪುತ್ಥಳಿ ಸ್ಥಾಪಿಸಿ ಇಟ್ಟಿದ್ದಾರೆ ಎನ್ನುವುದು ಸರಿಯಲ್ಲ. ಧೈರ್ಯದಿಂದ ನಾವೇ ಇಟ್ಟಿದ್ದೇವೆಂದು ಹೇಳಬೇಕು. ಅದು ಬಿಟ್ಟು ಇನ್ನೊಬ್ಬರ ಮೇಲೆ ಸುಖಾ ಸುಮ್ಮನೇ ಗೂಬೆ ಕೂರಿಸುವುದು ಸರಿಯಲ್ಲ. ಸತ್ಯಾಂಶವನ್ನು ಬೆಳಕಿಗೆ ತರಬೇಕು ಎಂದು ಡಾ.ಶೇಖರ ಮಾನೆ ಸಹ ಸವಾಲು ಹಾಕಿದರು.

 

ಬಿಜೆಪಿ ಸಭೆಯಲ್ಲಿ ಗಲಾಟೆ ತಲೆ ತಗ್ಗಿಸುವ ವಿಚಾರ: ಬಿಜೆಪಿ ಮುಖಂಡ ಅಸಮಾಧಾನ

ಪುತ್ಥಳಿ ಸ್ಥಾಪನೆಗೆ ನಾವು ವಿರೋಧ ಮಾಡುತ್ತಿದ್ದೇವೆ ಎನ್ನುವುದು ಶುದ್ಧ ಸುಳ್ಳು. ಎಂದಿಗೂ ವಿರೋಧ ಮಾಡಿಲ್ಲ. ವಿಶ್ವದ ಯಾವುದೇ ಮೂಲೆಯಲ್ಲಿ ಪುತ್ಥಳಿ ಸ್ಥಾಪಿಸಿದರೂ ಸಂತೋಷ ಪಡುತ್ತೇವೆ. ಟಾರ್ಗೆಟ್‌ ಮಾಡಿ ವಿವಾದದಲ್ಲಿ ಸಿಲುಕಿಸುವುದು ತರವಲ್ಲ. ವಿರೋಧಿಸಿದ್ದನ್ನು ಸಾಬೀತುಪಡಿಸಿದರೆ ಹಿಂದೂ ಸಂಘಟನೆಗಳು ನೀಡುವ ಶಿಕ್ಷೆಗೆ ಸಿದ್ಧನಿದ್ದೇನೆ. ವಿನಾಕಾರನ ಒಬ್ಬರ ತೇಜೋವಧೆ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ. ಇಂದು ನಾಟಕವಾಡುವುದು ದುರಂತದ ಸಂಗತಿ.

- ಡಾ.ಶೇಖರ ಮಾನೆ, ಮರಾಠ ಸಮಾಜದ ಮುಖಂಡ

click me!