ಒಂದೇ ವರ್ಷದಲ್ಲಿ ಸಾವಿರ ಮಕ್ಕಳಿಗೆ ಕ್ಯಾನ್ಸರ್‌: ಜನರಲ್ಲಿ ಆತಂಕ

By Kannadaprabha News  |  First Published Nov 7, 2024, 8:06 AM IST

ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 85,000 ಮಂದಿಗೆ ಕ್ಯಾನ್ಸರ್‌ ಕಾಯಿಲೆ ಪತ್ತೆಯಾಗುತ್ತಿದ್ದು, ಇದರಲ್ಲಿ ಚಿಕ್ಕ ಮಕ್ಕಳಲ್ಲಿನ ಕ್ಯಾನ್ಸರ್‌ ಪ್ರಕರಣ ಒಂದು ಸಾವಿರದ ಗಡಿ ತಲುಪಿರುವುದು ಆತಂಕ ಮೂಡಿಸಿದೆ.


ಬೆಂಗಳೂರು (ನ.07): ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 85,000 ಮಂದಿಗೆ ಕ್ಯಾನ್ಸರ್‌ ಕಾಯಿಲೆ ಪತ್ತೆಯಾಗುತ್ತಿದ್ದು, ಇದರಲ್ಲಿ ಚಿಕ್ಕ ಮಕ್ಕಳಲ್ಲಿನ ಕ್ಯಾನ್ಸರ್‌ ಪ್ರಕರಣ ಒಂದು ಸಾವಿರದ ಗಡಿ ತಲುಪಿರುವುದು ಆತಂಕ ಮೂಡಿಸಿದೆ. ರಾಜ್ಯದಲ್ಲಿ 2023ರಲ್ಲಿ 14 ವರ್ಷದೊಳಗಿನ 975 ಮಕ್ಕಳಲ್ಲಿ ಕ್ಯಾನ್ಸರ್‌ ಪ್ರಕರಣ ಪತ್ತೆಯಾಗಿದೆ. ಇದರಲ್ಲಿ ಬೆಂಗಳೂರು ನಗರದಲ್ಲೇ 280ರಿಂದ 300 ಮಕ್ಕಳಲ್ಲಿ ಕ್ಯಾನ್ಸರ್‌ ಕಾಣಿಸಿಕೊಂಡಿದೆ. ಪ್ರತಿ ವರ್ಷದಿಂದ ವರ್ಷಕ್ಕೆ ಮಕ್ಕಳಲ್ಲಿನ ಕ್ಯಾನ್ಸರ್‌ ಕಾಯಿಲೆ ಪ್ರಕರಣ ಹೆಚ್ಚಾಗುತ್ತಿದೆ.

ಹೀಗಾಗಿ ವಯಸ್ಕರ ಜತೆಗೆ ಮಕ್ಕಳ ಕ್ಯಾನ್ಸರ್‌ ಬಗ್ಗೆಯೂ ಮುನ್ನೆಚ್ಚರಿಕೆ ವಹಿಸಬೇಕು. ಆರಂಭದಲ್ಲೇ ರೋಗ ಪತ್ತೆ ಮಾಡಿ ಸಕಾಲದಲ್ಲಿ ಚಿಕಿತ್ಸೆ ಕೊಡಿಸಬೇಕು ಎಂದು ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯ ವೈದ್ಯರು ಮನವಿ ಮಾಡಿದ್ದಾರೆ. ಇಂದು (ಏ.7) ಕ್ಯಾನ್ಸರ್‌ ಜಾಗೃತಿ ದಿನ ಎಂಬ ಕಾರಣಕ್ಕೆ ಪತ್ರಿಕಾ ಪ್ರಕಟಣೆ ನೀಡಿರುವ ಆಸ್ಪತ್ರೆಯು, ರಾಜ್ಯದಲ್ಲಿ 2.3 ಲಕ್ಷ ಮಂದಿ ಸಕ್ರಿಯ ಕ್ಯಾನ್ಸರ್‌ ರೋಗಿಗಳು ಇದ್ದಾರೆ. ಬೆಂಗಳೂರಿನಲ್ಲೇ ಪ್ರತಿ ವರ್ಷ 14,630 ಮಂದಿಗೆ ಕ್ಯಾನ್ಸರ್‌ ಪತ್ತೆಯಾಗುತ್ತಿದೆ. ಈ ಪೈಕಿ ಪುರುಷರಲ್ಲಿನ ಕ್ಯಾನ್ಸರ್‌ಗಳಲ್ಲಿ ಶ್ವಾಸಕೋಶ ಕ್ಯಾನ್ಸರ್‌ (ಶೇ.9.7). ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ (ಶೇ.31.5) ಹೆಚ್ಚಾಗಿ ಕಂಡು ಬರುತ್ತಿದೆ.

Tap to resize

Latest Videos

ಸಿದ್ದುಗೆ ತಾಕತ್ತಿದ್ದರೆ ಮುಡಾ ಪ್ರಕರಣ ಸಿಬಿಐ ತನಿಖೆಗೆ ವಹಿಸಲಿ: ಯಡಿಯೂರಪ್ಪ ಸವಾಲು

ದೇಶದಲ್ಲಿ ಕಳೆದ ವರ್ಷ 25,939 ಮಕ್ಕಳಲ್ಲಿ ಕ್ಯಾನ್ಸರ್‌ ಪತ್ತೆಯಾಗಿದೆ. ರಾಜ್ಯದಲ್ಲಿ 975 ಪ್ರಕರಣ ವರದಿಯಾಗಿದ್ದು, ಈ ಪೈಕಿ ಬಾಲಕರಲ್ಲಿ ಲಿಂಫಾಯಿಡ್‌ ಲ್ಯುಕೇಮಿಯಾ (ಶೇ.20.6), ಮೈಲೋಯ್ಡ್‌ ಲ್ಯುಕೇಮಿಯಾ (ಶೇ.14.4), ಮೆದುಳು ಮತ್ತು ನರಮಂಡಲ ಕ್ಯಾನ್ಸರ್‌ (ಶೇ.13.8), ಎನ್‌ಎಚ್ಎಲ್‌ (ರಕ್ತ ಕ್ಯಾನ್ಸರ್‌ ಮಾದರಿ) ಶೇ.7.5 ಹಾಗೂ ಹಾಡ್ಗಿನ್ಸ್‌ ಕ್ಯಾನ್ಸರ್‌ ಶೇ.6.9 ರಷ್ಟು ಪತ್ತೆಯಾಗುತ್ತಿದೆ. ಬಾಲಕಿಯರಲ್ಲಿ ಲ್ಯುಕೇಮಿಯಾ ಶೇ.25.5, ಮೆದುಳು ಮತ್ತು ನರಮಂಡಲದ ವ್ಯವಸ್ಥೆ ಶೇ.12.8, ಮೈಲೋಯ್ಡ್‌ ಲ್ಯುಕೇಮಿಯಾ ಶೇ.12.8, ಮೂಳೆ ಕ್ಯಾನ್ಸರ್‌ ಶೇ.11.7, ಅಂಡಾಶಯ ಶೇ.5.3, ಹಾಡ್ಗಿನ್ಸ್‌ ಕಾಯಿಲೆ ಶೇ.4.3 ರಷ್ಟು ಮಕ್ಕಳಲ್ಲಿ ಕಂಡು ಬರುತ್ತದೆ.

ಇಂದು ಕ್ಯಾನ್ಸರ್‌ ಜಾಗೃತಿ ದಿನ: ಕ್ಯಾನ್ಸರ್‌ ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ರೋಗದಿಂದ ಪಾರಾಗಬಹುದು. ತಡವಾದಷ್ಟು ಮನುಷ್ಯನ ದೇಹವನ್ನು ಆವರಿಸುತ್ತದೆ. ಹೀಗಾಗಿ ಕ್ಯಾನ್ಸರ್‌ ಬಗ್ಗೆ ಎಚ್ಚರ ವಹಿಸುವಂತೆ ಜಾಗೃತಿ ಮೂಡಿಸಲು ದೇಶಾದ್ಯಂತ ನ.7ಅನ್ನು ಕ್ಯಾನ್ಸರ್‌ ಜಾಗೃತಿ ದಿನವಾಗಿ ಆಚರಿಸಲಾಗುತ್ತದೆ. ಆರಂಭದಲ್ಲೇ ರೋಗ ಪತ್ತೆ ಹಾಗೂ ಸಕಾಲದಲ್ಲಿ ಚಿಕಿತ್ಸೆ ಇದರ ಮುಖ್ಯ ಉದ್ದೇಶ. ಅತಿಯಾದ ತಂಬಾಕು ಸೇವನೆ, ಮದ್ಯಪಾನ, ಧೂಮಪಾನದಿಂದ ದೂರವಿರುವುದರಿಂದ ಹಲವು ರೀತಿಯ ಕ್ಯಾನ್ಸರ್‌ ತಡೆಯಬಹುದು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಡಿಸಿ, ಎಸಿಗೆ ಧಮ್ಕಿ ಹಾಕಿದ್ದಾನೆ ಸಚಿವ ಜಮೀರ್‌: ಶಾಸಕ ಬಸನಗೌಡ ಯತ್ನಾಳ

ಬೆಂಗಳೂರು, ಬೆಳಗಾವಿಯಲ್ಲಿ ಹೆಚ್ಚು: 2023ರಲ್ಲಿ ರಾಜ್ಯದಲ್ಲಿ ಒಟ್ಟು 86,563 ಕ್ಯಾನ್ಸರ್‌ ಪ್ರಕರಣ ವರದಿಯಾಗಿವೆ. ಈ ಪೈಕಿ 38,604 ಮಂದಿ ಪುರುಷರು, 47,959 ಮಂದಿ ಮಹಿಳೆಯರಲ್ಲಿ ಕ್ಯಾನ್ಸರ್‌ ಪತ್ತೆಯಾಗಿದೆ. ಬೆಂಗಳೂರು ನಗರ 18,125, ಬೆಳಗಾವಿ 6,601 ಅತಿ ಹೆಚ್ಚು ಪ್ರಕರಣ ವರದಿಯಾಗಿದ್ದರೆ 672 ಪ್ರಕರಣದ ಮೂಲಕ ಕೊಡಗು ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.

click me!