ಕೆ.ಆರ್. ಪೇಟೆಯಲ್ಲಿ ಇತಿಹಾಸ ನಿರ್ಮಿಸಲಿದೆ BJP: ಬಿ. ವೈ. ವಿಜಯೇಂದ್ರ

By Web Desk  |  First Published Nov 24, 2019, 11:37 AM IST

ಕೆ. ಆರ್. ಪೇಟೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ. ಸಿ. ನಾರಾಯಣ ಗೌಡ ಪರವಾಗಿ ಇಂದು ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರು ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ ನಡೆಸಲಿದ್ದಾರೆ. ಕ್ಷೇತ್ರದ ಹಲವು ಹಳ್ಳಿಗಳಲ್ಲಿ ಪ್ರಚಾರ ಕಾರ್ಯ ನಡೆಸಲಿದ್ದು, ಜೆಡಿಎಸ್ ಅಭ್ಯರ್ಥಿ ಬಿ. ಎಲ್.  ದೇವರಾಜು ಅವರು ಕಸಬ ಹೋಬಳಿ ವ್ಯಾಪ್ತಿಯಲ್ಲಿ ಪ್ರಚಾರ ನಡೆಲಿದ್ದಾರೆ.


ಮಂಡ್ಯ(ನ.24): ಕೆ. ಆರ್. ಪೇಟೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ. ಸಿ. ನಾರಾಯಣ ಗೌಡ ಪರವಾಗಿ ಇಂದು ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರು ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ ನಡೆಸಲಿದ್ದಾರೆ.

ಕ್ಷೇತ್ರದ ಹಲವು ಹಳ್ಳಿಗಳಲ್ಲಿ ಪ್ರಚಾರ ಕಾರ್ಯ ನಡೆಸಲಿದ್ದು, ಜೆಡಿಎಸ್ ಅಭ್ಯರ್ಥಿ ಬಿ. ಎಲ್.  ದೇವರಾಜು ಅವರು ಕಸಬ ಹೋಬಳಿ ವ್ಯಾಪ್ತಿಯಲ್ಲಿ ಪ್ರಚಾರ ನಡೆಲಿದ್ದಾರೆ. ಹೆಚ್. ಡಿ. ರೇವಣ್ಣ, ಶ್ರವಣ ಬೆಳಗೊಳ ಶಾಸಕ ಬಾಲಕೃಷ್ಣ ಸೇರಿದಂತೆ ಸ್ಥಳೀಯರು ದೇವರಾಜು ಅವರಿಗೆ ಸಾಥ್ ನೀಡಲಿದ್ದಾರೆ.

Latest Videos

ಮಂಡ್ಯ ಪಾಲಿನ ಕರಾಳದಿನಕ್ಕಿಂದು ಒಂದುವರ್ಷ

ಕಾಂಗ್ರೆಸ್ ಅಭ್ಯರ್ಥಿ ಕೆ. ಬಿ. ಚಂದ್ರಶೇಖರ್ ಪರವಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಪ್ರಚಾರ ಸಭೆ ನಡೆಸಲಿದ್ದಾರೆ. ಮಾಜಿ ಸಚಿವ ಎನ್. ಚಲುವರಾಯಸ್ವಾಮಿ, ಎನ್. ನರೇಂದ್ರಸ್ವಾಮಿ ಸೇರಿದಂತೆ ಹಲವು ನಾಯಕರು ಹಲವು ಹಳ್ಳಿಗಳಿಗೆ ಭೇಟಿ ನೀಡಿ ಪ್ರಚಾರ ನಡೆಸಲಿದ್ದಾರೆ.

ಯಡಿಯೂರಪ್ಪರಿಗೆ ಜನ್ಮ‌ ಕೊಟ್ಟ ಪುಣ್ಯ ಭೂಮಿ ಎನ್ನುವ ಕಾರಣಕ್ಕೆ ಕೆ. ಆರ್. ಪೇಟೆ ಉಪಚುನಾವಣೆ ಮಹತ್ವ ಪಡೆದಿದೆ. ಯಡಿಯೂರಪ್ಪರಿಗೆ ಕೆಆರ್ ಪೇಟೆ ಅಭಿವೃದ್ಧಿ ಬಗ್ಗೆ ಕನಸಿದೆ. ಕ್ಷೇತ್ರದ ಮತದಾರರು ಕೂಡ ಅಭಿವೃದ್ಧಿ ಪರವಾಗಿದ್ದಾರೆ. ಎಲ್ಲಾ ವರ್ಗದ ಜನರು ಜಾತಿ-ಪಂಗಡದ ಚರ್ಚೆ ಬಿಟ್ಟು ಅಭಿವೃದ್ಧಿ ಮತಹಾಕಲು ನಿರ್ಧರಿಸಿದ್ದಾರೆ ಎಂದು ಬಿ. ವೈ ರಾಘವೇಂದ್ರ ಹೇಳಿದ್ದಾರೆ.

ನಾರಾಯಣ ಗೌಡ ವಿಭಿಷಣ, ಬಿಎಸ್‌ವೈ ರಾಮ, KR ಪೇಟೆ ರಾಮರಾಜ್ಯ: ನಳಿನ್

ಕಳೆದ ಒಂದೂವರೆ ವರ್ಷ ರಾಜ್ಯದಲ್ಲಿ ಅಭಿವೃದ್ಧಿ ಕುಂಟಿತವಾಗಿದ್ದನ್ನ ಜನ ನೋಡಿದ್ದಾರೆ. ಹಾಗಾಗಿ ಈ ಉಪಚುನಾವಣೆಯಲ್ಲಿ ಜನ ಬಿಜೆಪಿ ಗೆಲ್ಲಿಸಲಿದ್ದಾರೆ. ಯಾವುದೇ ಚುನಾವಣೆ ಆಗಲಿ ಯಾವುದೇ ರಾಜಕೀಯ ಪಕ್ಷ ಆಗಲಿ ಜಾತಿ ಆಧಾರದ ಮೇಲೆ ಚುನಾವಣೆ ಮಾಡುವ ಪರಿಪಾಟ ಇದೆ. ಆದ್ರೆ ಈ ಉಪಚುನಾವಣೆ ಎಲ್ಲವನ್ನೂ ಮೀರಿ ಅಭಿವೃದ್ಧಿ ಮಂತ್ರದ ಆಧಾರದ ಮೇಲೆ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೆಆರ್ ಪೇಟೆ ಮತದಾರರು ಪ್ರಜ್ಞಾವಂತ ಮತದಾರರು. ಉಪಚುನಾವಣೆಯಲ್ಲಿ ಅಭಿವೃದ್ಧಿ ಆಧಾರದ ಮೇಲೆ ಮತಚಲಾಯಿಸಲಿದ್ದಾರೆ. ಈ ಬಾರಿ ಗೆದ್ದು ಮಂಡ್ಯ ಜಿಲ್ಲೆಯಲ್ಲಿ ಇತಿಹಾಸ ನಿರ್ಮಿಸಲಿದ್ದೇವೆ ಎಂದಿದ್ದಾರೆ.

ಕೆ. ಆರ್. ಪೇಟೆ: ಮತದಾರರ ಸೆಳೆಯಲು ಕಾಂಗ್ರೆಸ್ 'ಜಾದೂ' ಪ್ರಯೋಗ..!

ನಾರಾಯಣಗೌಡ-ವಿಜಯೇಂದ್ರರನ್ನು ನಳೀನ್ ಕುಮಾರ್ ಜೋಡೆತ್ತು ಎಂದು ಕರೆದ ವಿಚಾರವಾಗಿ ಪ್ರತಿಕ್ರಿಯಿಸಿ, ಜೋಡೆತ್ತುಗಳೆಂದ್ರೆ ಅಭಿವೃದ್ಧಿಯ ಸಂಕೇತ. ಯಾವ ರೀತಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಜೋಡೆತ್ತುಗಳ ನಾಗಲೋಟ ನಡೆದಿತ್ತು. ಅದು ಈ ಉಪಚುನಾವಣೆಯಲ್ಲೂ ಮುಂದುವರೆಯಲಿದೆ ಎಂದಿದ್ದಾರೆ.

click me!