
ಮೈಸೂರು : ಉದ್ಯಮಿಯನ್ನು ಅಪಹರಿಸಿದ ದುಷ್ಕರ್ಮಿಗಳನ್ನು ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವ್ಯಾಪಾರಕ್ಕಾಗಿ ನೀಡಿದ್ದ ಸಾಲದ ಹಣ ವಸೂಲಿ ಮಾಡಲು ಉದ್ಯಮಿಯೊಬ್ಬರನ್ನು ಹಾಡಹಗಲೇ ಅಪಹರಿಸಲಾಗಿತ್ತು.
ನಗರದ ಲಷ್ಕರ್ ಠಾಣೆ ವ್ಯಾಪ್ತಿಯ ಹಳ್ಳದ ಕೇರಿಯಲ್ಲಿ ಸೋಮವಾರ ಈ ಘಟನೆ ನಡೆದಿದೆ. ಹಳ್ಳದಕೇರಿಯಲ್ಲಿ ಲಲಿತಾ ಕಿಚನ್ ಸಪ್ಲೈಯರ್ಸ್ ಹೆಸರಿನಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಪ್ರಕಾಶ್ (35) ಎಂಬವರನ್ನು ಅಪಹರಿಸಿದ್ದ ರಾಜಸ್ತಾನ ಮೂಲದ ದುಗ್ಗರ್ ಸಿಂಗ್, ಬದ್ದಾರಾಮ್ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ವ್ಯಾಪಾರಿ ಪ್ರಕಾಶ್ ಕೆಲ ದಿನಗಳ ಹಿಂದೆ ದುಗ್ಗರ್ ಸಿಂಗ್‌ನಿಂದ ತಮಿಳುನಾಡಿನ ವ್ಯಾಪಾರಿಯೊಬ್ಬರಿಗೆ . 5.6 ಲಕ್ಷ ಮೌಲ್ಯದ ಗುಟ್ಕಾ ಕೊಡಿಸಿದ್ದರು. ಆದರೆ ತಮಿಳು ನಾಡಿನ ವ್ಯಾಪಾರಿ ಸಕಾಲದಲ್ಲಿ ಹಣ ಹಿಂದಿರುಗಿಸದೆ ವಿಳಂಬ ಮಾಡಿದ್ದರು. ಗುಟ್ಕಾ ಹಣ ಕೊಡಿಸುವಂತೆ ದುಗ್ಗರ್ ಸಿಂಗ್ ಅವರು ಪ್ರಕಾಶ್ ಮೇಲೆ ಒತ್ತಡ ಹೇರಿದ್ದರು. ಅಲ್ಲದೆ ಇದೇ ವಿಷಯವಾಗಿ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು.
ಜೂ. 26 ರಂದು ಪ್ರಕಾಶ್ ತಮ್ಮ ಅಂಗಡಿಯಲ್ಲಿ ಕುಳಿತಿದ್ದ ವೇಳೆ ದುಗ್ಗರ್ ಸಿಂಗ್ ನಾಲ್ವರೊಂದಿಗೆ ಅಂಗಡಿಗೆ ನುಗ್ಗಿ ಬಲವಂತವಾಗಿ ಪ್ರಕಾಶ್ ಅವರನ್ನು ಅಪಹರಿಸಿ ಕಾರಿನಲ್ಲಿ ಕರೆದೊಯ್ದಿದ್ದಾರೆ.
ನೆರೆ ಅಂಗಡಿ ಮಾಲೀಕ ಈ ಬಗ್ಗೆ ಲಷ್ಕರ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಇನ್‌ಸ್ಪೆಕ್ಟರ್ ಸಂತೋಷ್ ಮತ್ತು ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಾರಿನಲ್ಲಿ ಅಪಹರಣಗೊಂಡ ವ್ಯಾಪಾರಿ ಪ್ರಕಾಶ್, ಆನೇಕಲ್ ಬಳಿಯ ಕಟ್ಟಡದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ್ದು, ದುಗ್ಗರ್ ಸಿಂಗ್ ಸೇರಿದಂತೆ ಐವರನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಾರ್ಯಾಚರಣೆ ವೇಳೆ ಅಪಹರಣಕಾರರು ಓಡಿ ಹೋಗಲು ಯತ್ನಿಸಿದ್ದು, ಐವರನ್ನು ಬೆನ್ನತ್ತಿ ಪೊಲೀಸರು ಹಿಡಿದ್ದಾರೆ.
ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಡಿಸಿಪಿಗಳಾದ ಮುತ್ತುರಾಜ್ ಹಾಗೂ ಜಾಹ್ನವಿ ಮಾರ್ಗದರ್ಶನದಲ್ಲಿ ಎಸಿಪಿ ಶಾಂತಮಲ್ಲಪ್ಪ ಉಸ್ತುವಾರಿಯಲ್ಲಿ ಲಷ್ಕರ್ ಠಾಣೆ ಇನ್‌ಸ್ಪೆಕ್ಟರ್ ಸಂತೋಷ್ ನೇತೃತ್ವದಲ್ಲಿ ಎಸ್‌ಐ ಅನಿಲ…, ಸಿಬ್ಬಂದಿ ಚೇತನ್, ಚಿನ್ನಪ್ಪ, ಮಂಜು, ಕಿರಣ…, ಮಹದೇವಸ್ವಾಮಿ, ಪ್ರದೀಪ್, ರಾಥೋಡ್, ಬಾಬು, ಪ್ರಕಾಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕೆಲಸದ ಆಮಿಷ ಒಡ್ಡಿ ಕಿಡ್ನಾಪ್
ಬೆಂಗಳೂರು (ಡಿ.20) : ಫೇಸ್‌ಬುಕ್ ಸ್ನೇಹಿತನ ಆಹ್ವಾನ ಮೇರೆಗೆ ಉತ್ತಮ ವೇತನದ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ ಬಿಹಾರ ಮೂಲದ 17 ವರ್ಷದ ಬಾಲಕನನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇರಿಸಿದ್ದ ಮೂವರು ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಪಟ್ಟೇಗಾರಪಾಳ್ಯದ ಕನಕನಗರ ನಿವಾಸಿ ಎ.ಪ್ರಭಾತ್ (21), ಕುಣಿಗಲ್ ನಿವಾಸಿಗಳಾದ ಬಿ.ಕೆ.ರಂಗನಾಥ್ ಅಲಿಯಾಸ್ ಡಾಲಿ (19) ಹಾಗೂ ಬಿ.ಎಸ್.ಕುಶಾಲ್ (19) ಬಂಧಿತರು. ಆರೋಪಿಗಳು ಬಿಹಾರದಿಂದ ರೈಲಿನಲ್ಲಿ ಯಶವಂತಪುರ ರೈಲು ನಿಲ್ದಾಣಕ್ಕೆ ಬಂದ ಪ್ರವೀಣ್ ಕುಮಾರ್ (17) ಎಂಬಾತನನ್ನು ಡಿ.12ರಂದು ಅಪಹರಿಸಿ ಹಣಕ್ಕೆ ಬೇಡಿಕೆ ಇರಿಸಿದ್ದರು
ಎಂಗೇಜ್‌ಮೆಂಟ್ ದಿನವೇ ಮನೆಗೆ ನುಗ್ಗಿ 100ಕ್ಕೂ ಹೆಚ್ಚು ಜನರಿಂದ ಮಹಿಳೆ ಕಿಡ್ನ್ಯಾಪ್..!
ಆರೋಪಿ ಪ್ರಭಾತ್ ಬಿಹಾರ ಮೂಲದವನಾಗಿದ್ದು, ಈತನ ಕುಟುಂಬ 25 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದೆ. ಪ್ರಭಾತ್ ನಗರದ ಖಾಸಗಿ ಕಾಲೇಜಿನಲ್ಲಿ ಡಿಪ್ಲೊಮಾ ಓದುತ್ತಿದ್ದಾನೆ. ಆರೋಪಿ ರಂಗನಾಥ್ ಕುಣಿಗಲ್ ಕಾಲೇಜಿನಲ್ಲಿ ಪಿಯು ಮಾಡಿದ್ದಾನೆ. ಇನ್ನು ಕುಶಾಲ್ ಎಸ್ಸೆಸ್ಸೆಎಲ್ಸಿ ಅರ್ಧಕ್ಕೆ ಮೊಟಕುಗೊಳಿಸಿ ಕೃಷಿ ಮಾಡಿಕೊಂಡಿದ್ದ. ಆರೋಪಿ ಪ್ರಭಾತ್ ಕಾಲೇಜಿಗೆ ಹೋಗುವಾಗ ಈ ಇಬ್ಬರು ಆರೋಪಿಗಳು ಪರಿಚಯವಾಗಿದ್ದರು.
ಫೇಸ್‌ಬುಕ್‌ನಲ್ಲಿ ಫ್ರೆಂಡ್‌ಶಿಪ್:
ಬಿಹಾರ ಮೂಲದ ಪ್ರವೀಣ್ ಎಸ್ಸೆಸ್ಸೆಎಲ್ಸಿ ಮಾಡಿದ್ದು, ಗುಜರಾತಿನ ಅಹಮದಾಬಾದ್‌ನ ಹೋಟೆಲ್‌ವೊಂದರಲ್ಲಿ ಕ್ಯಾಷಿಯರ್ ಆಗಿದ್ದ. ಇತ್ತೀಚೆಗೆ ಪ್ರಭಾತ್ ಹಾಗೂ ಪ್ರವೀಣ್ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದರು. ಬಿಹಾರದಲ್ಲಿ ಪ್ರವೀಣ್ ಪೋಷಕರು ಸ್ಥಿತಿವಂತರಾಗಿದ್ದು, ಕೃಷಿ ಮಾಡಿಕೊಂಡಿದ್ದಾರೆ. ಈ ವಿಚಾರ ತಿಳಿದಿದ್ದ ಪ್ರಭಾತ್, ಪ್ರವೀಣ್‌ನನ್ನು ಬೆಂಗಳೂರಿಗೆ ಕರೆಸಿ ಹಣ ಸುಲಿಗೆಗೆ ಯೋಜಿಸಿದ್ದ. ಈ ವಿಚಾರವನ್ನು ಸ್ನೇಹಿತರಾದ ರಂಗನಾಥ್ ಮತ್ತು ಕುಶಾಲ್‌ಗೂ ತಿಳಿಸಿದ್ದ.