ತುಮಕೂರಲ್ಲಿ ಭೀಕರ ರಸ್ತೆ ಅಪಘಾತ: ಮೂವರು ಸಜೀವ ದಹನ

Suvarna News   | Asianet News
Published : Jan 04, 2020, 10:27 AM ISTUpdated : Jan 04, 2020, 11:29 AM IST
ತುಮಕೂರಲ್ಲಿ ಭೀಕರ ರಸ್ತೆ ಅಪಘಾತ: ಮೂವರು ಸಜೀವ ದಹನ

ಸಾರಾಂಶ

ತುಮಕೂರಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಜೀವ ದಹನವಾಗಿದ್ದಾರೆ. ವಾಹನಗಳು ಡಿಕ್ಕಿಯಾದ ರಭಸಕ್ಕೆ ಬೆಂಕಿ ಕಾಣಿಸಿಕೊಂಡು ಎರಡೂ ವಾಹನಗಳು ಹೊತ್ತಿ ಉರಿದಿವೆ.

ತುಮಕೂರು(ಜ.04): ತುಮಕೂರಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಜೀವ ದಹನವಾಗಿದ್ದಾರೆ. ವಾಹನಗಳು ಡಿಕ್ಕಿಯಾದ ರಭಸಕ್ಕೆ ಬೆಂಕಿ ಕಾಣಿಸಿಕೊಂಡು ಎರಡೂ ವಾಹನಗಳು ಹೊತ್ತಿ ಉರಿದಿವೆ.

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ದೊಡ್ಡಗುಣಿ ಬಳಿ ಭೀಕರ ರಸ್ತೆ ಅಪಘಾತ ನಡೆದಿದ್ದು ಮೂವರು ಸಜೀವ ದಹನವಾಗಿದ್ದಾರೆ. ಕಾರು- ಬಸ್ ನಡುವೆ ನಡೆದ ಅಪಘಾತ. ನಡೆದಿದ್ದು, ಡಿಕ್ಕಿಯಾದ ರಭಸಕ್ಕೆ ಕಾರು ಹಾಗೂ ಬಸ್ ಹೊತ್ತಿ ಉರಿದಿದೆ. ಕಾರಿನಲ್ಲಿದ್ದ ವಸಂತ್ ಕುಮಾರ್, ರಾಮಯ್ಯ , ನರಸಮ್ಮ ಸಜೀವ ದಹನವಾಗಿದ್ದಾರೆ.

ಪ್ರವಾಸಕ್ಕೆ ಆಗಮಿಸಿದ್ದ ಬಸ್ ಅಪಘಾತ : ವಿದ್ಯಾರ್ಥಿ ಸಾವು, 12 ಜನರು ಗಂಭೀರ

ಗುಬ್ಬಿ ತಾಲೂಕಿನ ಹೊಸಹಳ್ಳಿ ಗ್ರಾಮದ ನರಸಮ್ಮಗೆ ಹೃದಯಾಘಾತವಾಗಿತ್ತು. ಸಂಬಂಧಿಕರು ನರಸಮ್ಮ ಅವರನ್ನು ಆಸ್ಪತ್ರೆಗೆ ಕರೆದುಕೊಂಡ ಹೋಗುತ್ತಿದ್ದ ಸಂದರ್ಭ ಅವಘಡ ಸಂಭವಿಸಿದೆ. ಮಧ್ಯ ರಾತ್ರಿ 2.30ರ ಸುಮಾರಿಗೆ ಅಪಘಾತ ಸಂಭವಿಸಿದೆ.

"

ಸಂಬಂಧಿಕರು ಹೊಸಹಳ್ಳಿ ಗ್ರಾಮದ ನರಸಮ್ಮ ಎಂಬುವರನ್ನು ಆಸ್ಪತ್ರೆಗೆ ಕೆರೆದುಕೊಂಡು ಹೋಗುತ್ತಿದ್ದರು. ಕಾರಿನಲ್ಲಿದ್ದ ನರಸಿಂಹ ಮೂರ್ತಿ, ರಾಧಾಮಣಿ, ರವಿ  ಎಂಬುವರಿಗೆ ಗಾಯಗಳಾಗಿವೆ. ತುಮಕೂರು- ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ದೊಡ್ಡಗುಣಿ ಕೆರೆ ಏರಿ ಮೇಲೆ ಅಪಘಾತ ಸಂಭವಿಸಿದೆ.

ಮಂಗಳೂರು ಗೋಲಿಬಾರ್‌ ಸಂತ್ರಸ್ತರ ನೆರವಿಗೆ 2 ಕೋಟಿ ಸಂಗ್ರಹ?

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ  ಶ್ರೀಶ ಟ್ರಾವೆಲ್ಸ್ ಪ್ರೈವೇಟ್ ಬಸ್ ಹಾಗೂ ಗುಬ್ಬಿ ತಾಲೂಕಿನ ಎನ್ ಹೊಸಹಳ್ಳಿಯಿಂದ ನಿಟ್ಟೂರಿಗೆ ಬರುತ್ತಿದ್ದ ಕಾರು ಮುಖಾಮುಖಿಯಾಗಿದೆ. ಗಾಯಾಳುಗಳನ್ನು ಹೈವೇ ಗಸ್ತು ವಾಹನದಲ್ಲಿ ತುಮಕೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಹಾಗೂ ಮಾರುತಿ ಕಾರು ಎರಡು ಸಂಪೂರ್ಣ ಸುಟ್ಟು ಹೋಗಿದೆ. ಬಸ್‌ನಲ್ಲಿದ್ದವರಿಗೆ ಯಾವುದೇ ಗಾಯಗಳಾಗದೆ ಪಾರಾಗಿದ್ದಾರೆ. ಗುಬ್ಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಣ್ಣದ ಮಾತಿಗೆ ಮರಳು: ಆಂಟಿಯನ್ನ ಅನುಭವಿಸಿ ಪರಾರಿಯಾದ ಯುವಕ

PREV
click me!

Recommended Stories

ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಲಲಿತಮ್ಮ
ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?