ನಕಲಿ ದಾಖಲೆ ಸೃಷ್ಟಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರನ ವಿರುದ್ಧ ದೂರು

Suvarna News   | Asianet News
Published : Jan 04, 2020, 10:26 AM ISTUpdated : Jan 04, 2020, 11:56 AM IST
ನಕಲಿ ದಾಖಲೆ ಸೃಷ್ಟಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರನ ವಿರುದ್ಧ ದೂರು

ಸಾರಾಂಶ

ಸುಳ್ಳು ದಾಖಲೆ ಸೃಷ್ಟಿಸಿದ ಆರೋಪ| ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ಸಹೋದರ ಚನ್ನರಾಜ ಹಟ್ಟಿಹೊಳಿ ವಿರುದ್ಧ ದೂರು ದಾಖಲು| ಚನ್ನರಾಜ ಹಟ್ಟಿಹೊಳಿ ವಿರುದ್ಧ ದೂರು ದಾಖಲಿಸಿದ ಸಿದ್ದಗೌಡ ಮೋದಗಿ| ಚನ್ನರಾಜ‌ ಹಟ್ಟಿಹೊಳಿ ರಾಜಕೀಯ ಪ್ರಭಾವ ಬಳಸಿಕೊಂಡು ಮೋದಗಾ ಗ್ರಾಮದ ರಹವಾಸಿ ಎಂದು ಸುಳ್ಳು ಪ್ರಮಾಣ ಪತ್ರ ನೀಡಿದ್ದಾರೆ|

ಬೆಳಗಾವಿ(ಜ.04): ಸುಳ್ಳು ದಾಖಲೆ ಸೃಷ್ಟಿಸಿದ ಆರೋಪ ಹಿನ್ನೆಲೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ವಿರುದ್ಧ ದೂರು ದಾಖಲಾಗಿದೆ.

ನಕಲಿ ದಾಖಲೆಗಳನ್ನು ಸೃಷ್ಟಿಸಿ ಚನ್ನರಾಜ ಹಟ್ಟಿಹೊಳಿ ಮೋದಗಾ ಪಿಕೆಪಿಎಸ್ ಸಂಘದ ನಿರ್ದೇಶಕರಾಗಿದ್ದಾರೆ ಎಂದು ಆರೋಪ ಭಾರತೀಯ‌ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದ್ದಗೌಡ ಮೋದಗಿ ಅವರು ನಗರ ಪೊಲೀಸ್ ಆಯುಕ್ತ, ಪ್ರಾದೇಶಿಕ ಆಯುಕ್ತರು, ಡಿಸಿ, ಜಿ.ಪಂ.ಸಿಒಒ, ಸಹಕಾರ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. 

"

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಬಗ್ಗೆ ಮಾತನಾಡಿದ ಸಿದ್ದಗೌಡ ಮೋದಗಿ ಸಹಕಾರ ಕ್ಷೇತ್ರದಲ್ಲಿ ಬೆಳೆಯಲು ಚನ್ನರಾಜ‌ ಹಟ್ಟಿಹೊಳಿ ರಾಜಕೀಯ ಪ್ರಭಾವ ಬಳಸಿಕೊಂಡು ಮೋದಗಾ ಗ್ರಾಮದ ರಹವಾಸಿ ಎಂದು ಸುಳ್ಳು ಪ್ರಮಾಣ ಪತ್ರ ನೀಡಿದ್ದಾರೆ.ಈ ರಹವಾಸಿ ಪ್ರಮಾಣ ಪತ್ರ ಪರಿಶೀಲಿಸದೆ ಚನ್ನರಾಜ‌ ಹಟ್ಟಿಹೊಳಿಗೆ ಸಂಘದ ಸದಸ್ಯತ್ವ ನೀಡಲಾಗಿದೆ. ಹೀಗಾಗಿ ಸಹಕಾರ ಇಲಾಖೆ ಅಧಿಕಾರಿಗಳು ಚನ್ನರಾಜ‌ ಹಟ್ಟಿಹೊಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. 

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ಚನ್ನರಾಜ ಖಾನಾಪುರ ತಾಲೂಕಿನ ಚಿಕ್ಕಹಟ್ಟಿಹೊಳಿ‌ ನಿವಾಸಿಯಾಗಿದ್ದಾರೆ. ಆದರೆ, ಸುಳ್ಳು ದಾಖಲೆ ಸೃಷ್ಟಿಸಿ ಗ್ರಾಮದ ರಹವಾಸಿ ಎಂದು ಸುಳ್ಳು ಪ್ರಮಾಣ ಪತ್ರ ನೀಡಿದ್ದಾರೆ ಎಂದು ಸಿದ್ದಗೌಡ ಮೋದಗಿ ಆರೋಪಿಸಿದ್ದಾರೆ. 
 

PREV
click me!

Recommended Stories

ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಲಲಿತಮ್ಮ