Chitradurga: ಸಿಎಂ ಬೊಮ್ಮಾಯಿ ಸಹ ಪ್ರಾಮಾಣಿಕ ಹೆಜ್ಜೆಯಿಡುತ್ತಿದ್ದಾರೆ: ಯಡಿಯೂರಪ್ಪ

By Govindaraj S  |  First Published Sep 24, 2022, 11:55 PM IST

ಶನಿವಾರ ಸಿರಿಗೆರೆಯ ತರಳಬಾಳು ಮಠದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ರಾಜ್ಯದಲ್ಲಿ ಹಲವೆಡೆ ಅತಿವೃಷ್ಠಿಯಿಂದ ರೈತರ ಬೆಳೆ ಹಾನಿ, ಸದನದಲ್ಲಿ ಸಿಎಂ ಬೊಮ್ಮಾಯಿ ಪರಿಹಾರದ ಭರವಸೆ ನೀಡಿದ್ದಾರೆ. 


ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಸೆ.24): ಶನಿವಾರ ಸಿರಿಗೆರೆಯ ತರಳಬಾಳು ಮಠದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ರಾಜ್ಯದಲ್ಲಿ ಹಲವೆಡೆ ಅತಿವೃಷ್ಠಿಯಿಂದ ರೈತರ ಬೆಳೆ ಹಾನಿ, ಸದನದಲ್ಲಿ ಸಿಎಂ ಬೊಮ್ಮಾಯಿ ಪರಿಹಾರದ ಭರವಸೆ ನೀಡಿದ್ದಾರೆ. ಸಾಲಗಾರರ ಕಪಿಮುಷ್ಠಿಯಲ್ಲಿ ನರಳದಂತೆ ಸಿಎಂ ತೀರ್ಮಾನ. ಪ್ರಧಾನಿ ಮೋದಿ ಅವರಿಗೆ ನೀರಾವರಿ ಯೋಜನೆಗೆ ಆದ್ಯತೆ ನೀಡುವ ಚಿಂತನೆಯಿದೆ ಎಂದರು. ಸಿಎಂ ಆಗಿದ್ದಾಗ ಶ್ರೀಗಳ ಸೂಚನೆ ಮೇರೆಗೆ ನೀರಾವರಿ ಯೋಜನೆಗೆ ಆದ್ಯತೆ. ದೇಶದಲ್ಲಿ ಮೊದಲ ಬಾರಿಗೆ ಭಾಗ್ಯಲಕ್ಷ್ಮೀ ಯೋಜನೆ ಜಾರಿ ಹಾಗೂ ಹಾಲು ಉತ್ಪಾದಕ ರೈತನಿಗೆ ನೆರವು ಯೋಜನೆ ಜಾರಿಗೆ ತಂದಿದ್ದೇವೆ.

Tap to resize

Latest Videos

ರೈತನ ಜ್ವಲಂತ ಸಮಸ್ಯೆಗೆ ಪರಿಹಾರ ಒದಗಿಸುವ ಕೆಲಸ. ರಾಜ್ಯದಲ್ಲಿ ರೈತರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಸಹ ಪ್ರಾಮಾಣಿಕ ಹೆಜ್ಜೆಯಿಡುತ್ತಿದ್ದಾರೆ. ರಾಜ್ಯದ ರೈತ ಸಮೂಹಕ್ಕೆ ಸವಲತ್ತು ಒದಗಿಸುವ ಕೆಲಸ ಮಾಡಿದ್ದೇನೆ. ಮಠ ಮಾನ್ಯ, ಸಂತರು ಭಾರತೀಯರಿಗೆ ಭೋಧಿಸಿದ ಪಾಠ ಮುಖ್ಯ. ಆಸ್ಪತ್ರೆ, ಶಾಲಾ, ಕಾಲೇಜು ಸ್ಥಾಪಿಸಿ ಜನರಿಗೆ ಅನುಕೂಲ. ಬರದನಾಡಿನ ರೈತರು ತೋಟ ಮಾಡಿ ಸ್ವಾವಲಂಬಿ ಆಗಲು ಅವಕಾಶ. ಮಠಗಳ ಸಮಾಜ ಸೇವೆ ಗುರುತಿಸಿ ಮಠಗಳಿಗೆ ಅನುದಾನ. ವೀರಶೈವ ಲಿಂಗಾಯತ ಸಮುದಾಯದ ಒಳಪಂಗಡಗಳ ಅಭಿವೃದ್ಧಿಗಾಗಿ ವೀರಶೈವ ಲಿಂಗಾಯತ ಅಭಿವೃದ್ಧಿ ಮಂಡಳಿ ಸ್ಥಾಪಿಸಿದ್ದೆನು. 

Chitradurga: ಸಿರಿಗೆರೆ ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಮಾರ್ಗದರ್ಶನ ಸರ್ಕಾರಕ್ಕೆ ಬೇಕು: ಸಿಎಂ ಬೊಮ್ಮಾಯಿ

ಬರದನಾಡು ಚಿತ್ರದುರ್ಗಕ್ಕೆ ನೀರಾವರಿ ಯೋಜನೆ ನೀಡಿದ ಸಮಾಧಾನ ನನಗಿದೆ. ಲಿಂ.ಶಿವಕುಮಾರ ಶ್ರೀಗಳ ಧರ್ಮ ನುಡಿ ಮೆಲುಕು ಹಾಕುವ ಅದೃಷ್ಠ ನಮ್ಮದಾಗಿದೆ. ಸಾಲ ಮಾಡಿದ ರೈತರ ಆಸ್ತಿ ಮುಟ್ಟುಗೋಲು ಹಾಕಲು ಬಿಡಲ್ಲ. ಸಿಎಂ ಬೊಮ್ಮಾಯಿ ಈಗಾಗಲೇ ಈ ಬಗ್ಗೆ ಕ್ರಮಕ್ಕೆ ಚಿಂತನೆ ನಡೆಸಿದ್ದಾರೆ. ರೈತರು ನೆಮ್ಮಸಿಯಿಂದ ಇದ್ದಾಗ ನಾವು ಬದುಕಲು ಸಾಧ್ಯ. ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕಿದೆ. ನಮ್ಮ ಸರ್ಕಾರದಿಂದ ರೈತರ ಸರ್ವತೋಮುಖ ಅಭಿವೃದ್ಧಿಗೆ ಕ್ರಮ. ಸಿಎಂ ಬೊಮ್ಮಾಯಿ ಸರ್ಕಾರ ರೈತ ಪರ ಕೆಲಸ ಮಾಡಲಿದೆ ಎಂದು ಬಿಎಸ್ ವೈ ತಿಳಿಸಿದರು.

ಚಿತ್ರದುರ್ಗ ಮುರುಘಾ ಶ್ರೀಗೆ ಜೈಲೈ ಗತಿ, ಜಾಮೀನು ಅರ್ಜಿ ವಜಾ!

ಇನ್ನೂ ಈ ವೇಳೆ ಮಾತನಾಡಿದ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು, ಸಿಎಂ ಬಸವರಾಜ ಬೊಮ್ಮಾಯಿ ಗರ್ಭಗುಡಿಯಲ್ಲಿನ ದೇವರಿದ್ದಂತೆ. ಮಾಜಿ ಸಿಎಂ ಬಿಎಸ್.ಯಡಿಯೂರಪ್ಪ ಉತ್ಸವ ಮೂರ್ತಿ ಇದ್ದಂತೆ. ದೇವರಾಜ್ ಅರಸು ಅವರ ಮಂತ್ರಿ ಮಂಡಲ ಸಿರಿಗೆರೆ ಮಠದಲ್ಲಿ ರಚನೆ ಆಗುತ್ತಿತ್ತು. ಲಿಂ. ಶಿವಕುಮಾರಶ್ರೀ ಸೀನಿದರೆ ವಿಧಾನಸೌಧ ನಡುಗುವ ಪ್ರತೀತಿಯಿತ್ತು. ರೈತರ ಸಾಲಕ್ಕಾಗಿ ಅವರ ಆಸ್ತಿ‌ ಹರಾಜು ಆಗಬಾರದು. ರೈತರ ಸಾವಿನ ನಂತರ ಪರಿಹಾರ‌ ಕೊಡುವಯದಕ್ಕಿಂತ ಬದುಕಿದ್ದಾಗ ನೆರವು ನೀಡಿ. ಸಮಸ್ಯೆ ಬಗೆಹರಿಸುವ ಭರವಸೆಯನ್ನು ಸಿಎಂ ನೀಡಿದ್ದಾರೆ. ತರಳಬಾಳು ಹುಣ್ಣಿಮೆ ಅಂದರೆ ಪರ್ಯಾಯವಾಗಿ ಏತ ನೀರಾವರಿ ಯೋಜನೆ ಎಂಬಂತಾಗಿದೆ. 2023ರಲ್ಲಿ ಕೊಟ್ಟೂರಿನಲ್ಲಿ ತರಳಬಾಳು ಹುಣ್ಣಿಮೆಯಿದೆ. ಆ ಕಾರ್ಯಕ್ರಮದ ವೇಳೆಗೆ ಯೋಜನೆಯ ಆದೇಶ ಸಿದ್ದವಾಗಿರಲಿ. ಸಿಎಂ ಬೊಮ್ಮಾಯಿಗೆ ತರಳಬಾಳು ಮಠದ ಡಾ.ಶಿವಮೂರ್ತಿ ಶ್ರೀ ಮನವಿ ಮಾಡಿದರು.

click me!