ನಿಖಿಲ್ ಕುಮಾರಸ್ವಾಮಿ ಅವರ ಪುತ್ರ ಆವ್ಯಾನ್ ದೇವ್ ಮೊದಲ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ದೇವ್ ಕೈಯಲ್ಲಿ ಕೇಕ್ ಕಟ್ ಮಾಡಿಸಿ ಜೆಡಿಎಸ್ ಕಾರ್ಯಕರ್ತರು ಸಂಭ್ರಮ ಪಟ್ಟರು.
ರಾಮನಗರ (ಸೆ.24): ನಿಖಿಲ್ ಕುಮಾರಸ್ವಾಮಿ ಅವರ ಪುತ್ರ ಆವ್ಯಾನ್ ದೇವ್ 1ನೇ ವರ್ಷದ ಬರ್ತಡೇ ಹಿನ್ನೆಲೆಯಲ್ಲಿ ರಾಮನಗರದ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಲಾಗಿದೆ. ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಆವ್ಯಾನ್ ದೇವ್ ಜೊತೆಗೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ, ತಾಯಿ ಅನಿತಾಕುಮಾರಸ್ವಾಮಿ ಜೊತೆಗೆ ಪೂಜೆ ಸಲ್ಲಿಸಿದರು. ಇದಾದ ಬಳಿಕ ಬಳಿಕ ಜೆಡಿಎಸ್ ಕಾರ್ಯಕರ್ತರ ಸಂಭ್ರಮಾಚರಣೆಯಲ್ಲಿ ಭಾಗಿಯಾದರು. ಅವ್ಯಾನ್ ದೇವ್ ಕೈಯಲ್ಲಿ ಕೇಕ್ ಕಟ್ ಮಾಡಿಸಿ ಜೆಡಿಎಸ್ ಕಾರ್ಯಕರ್ತರು ಸಂಭ್ರಮ ಪಟ್ಟರು. ಪಟಾಕಿ ಸಿಡಿಸಿ ಕೇಕ್ ಕಟ್ ಮಾಡಿಸುವ ಮೂಲಕ ಸಂಭ್ರಮಿಸಿದರು. ಆವ್ಯಾನ್ ದೇವ್ ಬರ್ತಡೇ ಸಂಭ್ರಮ ರಾಮನಗರದಲ್ಲಿ ಮನೆ ಮಾಡಿತ್ತು. ಇನ್ನು ಮೊಮ್ಮಗ ಅವ್ಯಾನ್ ದೇವ್ ಹುಟ್ಟು ಹಬ್ಬದ ಸಂಭ್ರಮದ ಹಿನ್ನೆಲೆ ಮಾತನಾಡಿರುವ ಅನಿತಾ ಕುಮಾರಸ್ವಾಮಿ ಅವರು ಕುಟುಂಬದ ಎಲ್ಲರ ಹುಟ್ಟು ಹಬ್ಬದಂದು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತೇವೆ. ಪತಿ ಕುಮಾರಸ್ವಾಮಿ ಹಾಗೂ ನನಗೆ ನಂಬಿಕೆ ಇರುವ ದೇಗುಲವಿದು. ತಾಯಿ ಚಾಮುಂಡೇಶ್ವರಿ ಅನುಗ್ರಹ ಇರಲಿ ಎಂದು ಇಲ್ಲಿಗೆ ಬಂದಿದ್ದೇವೆ. ಭರಣಿ ನಕ್ಷತ್ರದವರು ಧರಣಿ ಆಳುತ್ತಾರೆ ಎಂಬ ವಿಚಾರವಾಗಿ ಮಾತನಾಡಿದ ಅವರು ನಾನು ದೇವರ ಬಳಿ ಏನು ಬೇಡಿಕೆ ಇಡುವುದಿಲ್ಲ. ಎಲ್ಲಾ ನಿನ್ನ ಪಾದಕ್ಕೆ ಅರ್ಪಿಸುತ್ತೇನೆ ಎಂದಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ಮಗನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರಾಮನಗರದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ನನ್ನ ಮಗ ಹುಟ್ಟಿ ಇಂದಿಗೆ ಒಂದು ವರ್ಷ ಪೂರೈಸಿದೆ. ತಂದೆ - ತಾಯಿ ನಂಬಿರುವ ದೇವಿಯ ಕೃಪೆಗೆ ಬಂದಿದ್ದೇನೆ. ರಾಮನಗರದ ಶ್ರೀ ಚಾಮುಂಡೇಶ್ವರಿ ತಾಯಿಯ ಆಶಿರ್ವಾದಕ್ಕಾಗಿ ಮಗನ ಜೊತೆ ಆಗಮಿಸಿದ್ದೇವೆ. ನಾನು ಏನು ವಿಷೇಶವಾಗಿ ಏನು ಕೇಳಿಕೊಂಡಿಲ್ಲ. ನನ್ನ ತಾತ, ತಂದೆ ತಾಯಿ ಮಾಡಿರುವಂತೆ ಜನ ಸೇವೆ ಮಾಡಬೇಕು. ಜನರ ಸೇವೆಯಲ್ಲಿಯೇ ದೇವರನ್ನ ಕಾಣಬೇಕು. ಜನ ಸೇವೆ ಮಾಡುವುದಕ್ಕೆ ನಮ್ಮ ಜೀವನ ಮೀಸಲಿಡಬೇಕಿದೆ. ಇದು ನಮ್ಮ ತಂದೆ ಮಾಜಿ ಸಿಎಂ ಹೆಚ್‌ಡಿಕೆ ಹಾಗೂ ನಮ್ಮ ತಾತ ಮಾಜಿ ಪ್ರಧಾನಿ ದೇವೇಗೌಡರ ಆಶಯ . ಅವರ ಆಶಯದಂತೆ ನಾವುಗಳು ನಡೆಯುತ್ತಿದ್ದೇವೆ. ಅವ್ಯಾನ್ ಅಂದ್ರೆ ವಿಷ್ಣು ದೇವರ ಹೆಸರು, ದೇವ್ ಅಂದ್ರೆ ನನ್ನ ತಾತನ ಹೆಸರು ಇಟ್ಟಿದ್ದೇವೆ ಎಂದರು
ಜೆಡಿಎಸ್ ಸದೃಢಗೊಳಿಸಲು ಪಂಚರತ್ನ ಪ್ರವಾಸ: ನಿಖಿಲ್ ಕುಮಾರಸ್ವಾಮಿ
ಈ ಬಾರಿ ನಿಖಿಲ್ ಸ್ಪರ್ಧೆ ವಿಚಾರ: ಈಗಲೇ ಅದರ ಬಗ್ಗೆ ಪ್ರಸ್ತಾಪ ಮಾಡುವುದಿಲ್ಲ. 123 ಮಿಷನ್ ಬಗ್ಗೆ ಹೆಚ್ಚು ಗಮನ ಹರಿಸುತ್ತೇವೆ. ಅದರ ಬಗ್ಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆದ್ರೆ ಪಂಚ ರತ್ನದ ಬಗ್ಗೆ ಜನರಿಗೆ ಮಾಹಿತಿ ನೀಡಲು ರಥೋತ್ಸವದ ಮೂಲಕ ಚಾಲನೆ ಸದ್ಯದಲ್ಲೇ ದೊರೆಯಲಿದೆ. ನಾನು ಕೂಡ ಯುವಕರ ಸಂಘಟನೆ ಮಾಡುವ ಜವಾಬ್ದಾರಿ ಹೊಂದಿದ್ದೇನೆ. ಆ ಕೆಲಸವನ್ನ ನಾನು ಮಾಡುತ್ತೇನೆ. ಆದ್ರೆ ನಾನು ಸ್ಪರ್ಧೆ ಮಾಡುವ ವಿಚಾರ ಇನ್ನೂ ಇಲ್ಲ ಎಂದರು.
2023ರ ಚುನಾವಣೆಯೇ ನಮ್ಮ ಪಾಲಿಗೆ ಕೊನೆ: ಹೊಸ ಬಾಂಬ್ ಸಿಡಿಸಿದ ನಿಖಿಲ್ ಕುಮಾರಸ್ವಾಮಿ
ಸಂಸದ ಪ್ರಜ್ವಲ್ ರೇವಣ್ಣ ಜಂಟಿಯಾಗಿ ಪಕ್ಷ ಸಂಘಟನೆ ಮಾಡುವ ವಿಚಾರದ ಬಗ್ಗೆ ಮಾತನಾಡಿದ ನಿಖಿಲ್, ನಾವು ಇಬ್ಬರೆ ಸಂಘಟನೆ ಮಾಡುವುದಲ್ಲ. ಮೈಸೂರಿನ ಜಿ.ಟಿ. ಹರೀಶ್, ಉತ್ತರ ಕರ್ನಾಟಕದ ಶರಣ್ ಗೌಡ ಸೇರಿದಂತೆ ಹಲವು ಯುವಕರು ಇದ್ದಾರೆ. ಎಲ್ಲರೂ ಸೇರಿ ಪಕ್ಷ ಸಂಘಟನೆ ಮಾಡುವ ಕೆಲಸ ಮಾಡುತ್ತೇವೆ. ಈ ಬಗ್ಗೆ ಹಲವು ಸಭೆ ಕೂಡ ಆಗಿದೆ. ಮುಂದಿನ ದಿನಗಳಲ್ಲಿ ಸಂಘಟನೆಗೆ ಮಾಡುತ್ತೇವೆ. ಎಂದು ರಾಮನಗರದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.