ಹಾಸನದಲ್ಲಿ ಭವಾನಿ ರೇವಣ್ಣಗೆ ಸೋಲು ನಿಶ್ಚಿತ, ಟಾಂಗ್ ಕೊಟ್ಟ ಶಾಸಕ ಪ್ರೀತಂಗೌಡ

By Gowthami K  |  First Published Sep 24, 2022, 9:26 PM IST

 ಹಾಸನದಿಂದ ಭವಾನಿ ರೇವಣ್ಣ ಸ್ಪರ್ಧೆ ಮಾಡಿದ್ರೆ ಮೂರನೆ ಸ್ಥಾನಕ್ಕೆ ಹೋಗ್ತಾರೆ ಎಂದು ಲೇವಡಿ ಮಾಡಿದ ಪ್ರೀತಂಗೌಡ. ಮುಂದಿನ ಚುನಾವಣೆಯಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡಿದ್ರೆ ಅವರಿಗೆ ಸೋಲು ನಿಶ್ಚಿತ ಎಂದಿದ್ದಾರೆ.


ಹಾಸನ (ಸೆ.24): ಹಾಸನದಲ್ಲಿ  ಟಿಕೆಟ್ ಆಕಾಂಕ್ಷಿಯಾಗಿರುವ  ಭವಾನಿ ರೇವಣ್ಣಗೆ  ಶಾಸಕ ಪ್ರೀತಂಗೌಡ  ಟಾಂಗ್ ನೀಡಿದ್ದಾರೆ. ಅವರಿಗೆ ಹಾಸನದ ಗಣಪತಿಗಳು ಎಲ್ಲಿವೆ, ರೋಡ್ ಯಾವುದು ಎನ್ನೋದು ಗೊತ್ತಿರಲಿಲ್ಲ. ಪ್ರೀತಂಗೌಡ ಬಂದಮೇಲೆ ಹಾಸನ ಹೆಂಗಿದೆ ಎಂದು ನೋಡೋ ಅವಕಾಶ ಕಲ್ಪಿಸಿ ಕೊಟ್ಟಿದ್ದೇನೆ. ಇನ್ನೂ ಅವರು ಗಣಪತಿ ನೋಡುತ್ತಿದ್ದಾರೆ. ಹಳ್ಳಿ ಕಡೆಗೆ ಹೋಗಲಿ, ನಾವಿದ್ದಾಗ ಏನು ಮಾಡಿದ್ಚಿ, ಪ್ರೀತಂಗೌಡ ಏನು ಮಾಡಿದ್ದಾರೆ ಎಂದು ನೋಡಲಿ. ಬಹುಶಃ ಅವರು ಎಲ್ಲ ಹಳ್ಳಿಗಳನ್ನ ಸುತ್ತಾಡಿ ಬಂದ್ರೆ ಚುನಾವಣೆ ಗೆ ನಿಲ್ಲೋದಿಲ್ಲ. ಆಗಿರೋ ಅಭಿವೃದ್ಧಿ ನೋಡಿ ಜನರ ಸ್ಪಂದನೆ ಹೇಗಿರುತ್ತೆ ಎಂದು ಗೊತ್ತಾಗುತ್ತೆ. ಗಣಪತಿ ಇರೋಕಡೆ ಜನ ಇರ್ತಾರೆ ಅಲ್ಲಿ ಕರ್ಕೊಂಡ್ ಹೋಗಿ ಹಾರ ಹಾಕಿಸ್ತಾರೆ. ಓಹ್ ಇವರೆಲ್ಲಾ ನನಗೇ ಓಟ್ ಹಾಕ್ತಾರೆ ಅನ್ಕೊಂಡು ಸುತ್ತಾಡುತ್ತಾರೆ. ನಿಜವಾಗಿ ಹೋಗಬೇಕಿರೋದು ಹಳ್ಳಿಗೆ ಜನರ ಮದ್ಯೆ, ಕಾರ್ತಕರ್ತರ ಮಧ್ಯೆ ಹೋಗಲಿ. ಅಲ್ಲಿ ಯಾವ್ಯಾವ ಹಳ್ಳಿ ಜನ ಅವರ ಜೊತೆ ಇರ್ತಾರೆ ಗೊತ್ತಾದ ಮೇಲೆ ಚುನಾವಣೆಗೆ ನಿಲ್ತಾರಾ ಕೇಳಿ ನೋಡಿ. ಈಗ ಆಕ್ಟೀವ್ ಆಗಿದಾರೆ, ಎಲ್ಲವನ್ನು ನೋಡಿದ ಮೇಲೆ ನನ್ನಿಂದ ಆಗಲ್ಲ ಎಂದು ಬೇರೆಯವರನ್ನ ಅಭ್ಯರ್ಥಿ ಮಾಡ್ತಾರೆ. ಇವರು ಅಭ್ಯರ್ಥಿ ಅದರೆ ನನಗೆ ಬಹಳ ಸಂತೋಷ . ಅವರು ಎಲ್ಲ ಹಳ್ಳಿ ಸುತ್ತಿ ಬಂದ ಮೇಲೆ ಜನರು ನಿಲ್ಲಲಿ ಎಂದರೆ ನಿಲ್ಲಲಿ. ಅವರಿಗೆ ಚುನಾವಣೆ ಗೆ ನಿಲ್ಲೋ ಧೈರ್ಯ ಬರಲಿ ಎಂದು ವಿನಾಯಕನಲ್ಲಿ ಪ್ರಾರ್ಥನೆ ಮಾಡ್ತೇನೆ. ಭವಾನಿ ರೇವಣ್ಣ ಏಕ್ ದಿನ್ ಕಾ ಸುಲ್ತಾನ್ ಆಗದ ರೀತಿಯಲ್ಲಿ ಹಳ್ಳಿಗಳ ಪ್ರವಾಸ ಮಾಡಲಿ. ಅವರೇ ಅಭ್ಯರ್ಥಿ ಆಗಲಿ ಎಂದು ನಿಮ್ಮಲ್ಲಿ ಮೂಲಕ ಮನವಿ ಮಾಡುತ್ತೇನೆ. ಅವರು ಮಿಸ್ಸಾಗಿ ವಾಪಸ್ ಏನಾದ್ರು ಹೋದಾರು ಎಂದು ಲೇವಡಿ ಮಾಡಿದ ಪ್ರೀತಂಗೌಡ. 

ಪಂಥಾಹ್ವಾನ ಸ್ಚೀಕಾರ ಮಾಡಿದ್ದಾರೆ ಹಾಗಿದ್ರೆ ಅಭ್ಯರ್ಥಿ ನಾನೇ ಎಂದು ಘೋಷಣೆ ಮಾಡಲಿ ಎಂದು ಸವಾಲೆಸೆದ ಶಾಸಕ ಪ್ರೀತಂಗೌಡ. ಅವರು ಘೋಷಣೆ ಮಾಡಿದ ದಿನ ನಾನು ಧನ್ಯವಾದ ಹೇಳ್ತೇನೆ. ನಾನು ಪದೇ ಪದೆ ಪಂಥಾಹ್ವಾನ ನೀಡುವಷ್ಟು ದೊಡ್ಡವನಲ್ಲ. ನಾನಂತೂ ಚುನಾವಣೆ ಗೆ ರೆಡಿಯಾಗಿದ್ದೇನೆ. ಅವರಾಗೆ ಬಂದು ಆಕ್ಟೀವ್ ಆಗಿರುವಾಗ ಅವರಿಗೆ ಶುಭಾಶಯ ಹೇಳ್ತೇನೆ. ಸಂಸದರು ಈಗಲಾದರು ಹಾಸನ ವಿಧಾನಸಭಾ ಕ್ಷೇತ್ರವನ್ನು ಒಮ್ಮೆ ಪ್ರದಕ್ಷಿಣೆ ಹಾಕಲಿ. ಅವರು ಇಷ್ಟು ದಿನ ಒಂದು ದಿನ ಒಂದೇ ಒಂದು ಹಳ್ಲಿಗೆ ಹೋಗಿಲ್ಲ. ಈಗ ಅವರ ತಾಯಿಯನ್ನ ಅಭ್ಯರ್ಥಿ ಮಾಡ್ತಿವಿ ಅನ್ನೋ ಕಾರಣಕ್ಕೆ ಗ್ರಾಮಗಳನ್ನ ನೋಡಲಿ. ಚುನಾವಣೆ ಗೆ ಹೋದಾಗ ಐದು ವರ್ಷಗಳ ಹಿಂದೆ ಬಂದಿದ್ರಿ ಈಗ ಯಾಕೆ ಬಂದಿದಿರಿ ಎಂದು ಯಾರು ಕೇಳದ ವಾತಾವರಣ ನಿರ್ಮಾಣ ಮಾಡಿಕೊಳ್ಳಲಿ. ಒಮ್ಮೆ ಹಾಸನದ ಎಲ್ಲಾ ಹಳ್ಳಿಗಳಿಗೆ ಹೋಗಿ ಬರಲಿ ಎಂದು ಸಲಹೆ ನೀಡಿದರು. 

Latest Videos

undefined

ನನಗೆ ಗೊತ್ತಿರೊ ಹಾಗೆ ಜಿಲ್ಲೆಯ ಯಾವ ಹಳ್ಳಿಗೂ ಅವರು ಹೋಗಿಲ್ಲ. ಕಾರ್ಯಕರ್ತರ ಸಭೆಗೆ ಹೋಗಿ ಬರ್ತಾರೆ ಅಷ್ಟೇ. ಯಾವುದೇ ಶಾಶ್ವತ ಯೋಜನೆಯನ್ನು ಜಿಲ್ಲೆಗೆ ಅಥವಾ ಈ ಕ್ಷೇತ್ರ ಕ್ಕೆ ಕೊಟ್ಟಿಲ್ಲ. ಮುಂದಿನ ಒಂದು ವರ್ಷದಲ್ಲಿಯಾದರೂ ಆಕ್ಟೀವ್ ಆಗಿ ಇರಲಿ. ಅವರು ಯಾವನೋ ಎಂದಿರೋದು ನನಗಲ್ಲ, ಈ ಕ್ಷೇತ್ರದ ಮತದಾರರಿಗೆ, ನಾನು ಈ ಕ್ಷೇತ್ರದ  ಜನರ ಪ್ರತಿನಿಧಿ. ಸಾಂವಿಧಾನಿಕ ಹುದ್ದೆಗೆ ಗೌರವ ಕೊಡೊದನ್ನ ಮೊದಲು ಕಲಿಯಲಿ. ಅವರಿಗೆ ವಯಸ್ಸಿದೆ ರಾಜಕಾರಣ ಏನಾಗುತ್ತೋ ಬಿಡುತ್ತೊ. ರಾಜಕಾರಣ ವನ್ನು ಜನರು ತೀರ್ಮಾನ ಮಾಡ್ತಾರೆ. ಆದರೆ ಸಾರ್ವಜನಿಕ ಜೀವನದಲ್ಲಿ ಗೌರವ ಕೊಟ್ಟು ಗೌರವ ತಗೊಬೇಕು. 

ನಾನು ಆಫ್ ದಿ ರೆಕಾರ್ಡ್ ಕೂಡ ಅವರನ್ನು ಹೋಗು ಬಾ ಅನ್ನಲ್ಲ. ಇದನ್ನ ಅವರು ಕಲಿತರೆ ಅವರ ವೈಯಕ್ತಿಕ ಜೀವನಕ್ಕೆ ಒಳ್ಳೆಯದು. ಅವರೂ ಕೂಡ ಇಂಜಿನಿಯರ್ ಇದಾರೆ, ಬಹಳ ಬುದ್ದಿಬಂತರು. ಆದರೆ ರಾಜಕೀಯ ದಲ್ಲಿ ಯಾರು ಬುದ್ದಿವಂತರು ಎಂದು ಎರಡು ಮೂರುಸಲ ನಾನು ತೋರಿಸಿದ್ದೀನಿ. ಹುಣಸೂರಿನಲ್ಲಿ ಅವರು ಜವಾಬ್ದಾರಿ ಇದ್ದ ಕ್ಷೇತ್ರದಲ್ಲಿ ಅವರು ಮೂರನೇ ಸ್ಥಾನ. ಶಿರಾದಲ್ಲಿ ಕೂಡ ಮೂರನೇ ಸ್ಥಾನ. ಹಾಸನಕ್ಕೆ ಅವರು ತಾಯಿಯನ್ನ ಕರೆತಂದರು ಅವರಿಗೆ ಮೂರನೇ ಸ್ಥಾನವೇ.

ಹಾಸನದಿಂದ ಭವಾನಿ ರೇವಣ್ಣ ಸ್ಪರ್ಧೆ ಮಾಡಿದ್ರೆ ಮೂರನೆ ಸ್ಥಾನಕ್ಕೆ ಹೋಗ್ತಾರೆ ಎಂದು ಲೇವಡಿ ಮಾಡಿದ ಪ್ರೀತಂಗೌಡ. ನಾನು ಈಗ ಏನು ಮಾತಾಡಿದ್ರು ಅತಿಶಯೋಕ್ತಿ ಆಗುತ್ತೆ. 2023 ರ ಮೇಲೆ ಇವರನ್ನು ಹಾಸನಕ್ಕೆ ಕರೆತರಲು ಓಡಾಡುತ್ತಿರುವವರು ಒಂದು ತಿಂಗಳು ಅವರ ಕುಟುಂಬ ದಿಂದ ದೂರ ಇರಬೇಕಾಗುತ್ತೆ. ಯಾಕೆ ಕರೆದುಕೊಂಡು ಹೋಗಿ ಹೀಗೆ ಮಾಡಿದ್ರಿ ಎಂದು ಅಕ್ಕ ಪಕ್ಕ ತಿರುಗಿದ್ರೆ ಜನ ಇಲ್ಲದಂತೆ ಮಾಡ್ತೀನಿ. ಈ ಬೈಟ್ ಇಟ್ಟು ಕೊಂಡಿರಿ ಈಗ ಅವರನ್ನ ಕರೆದುಕೊಂಡು ಓಡಾಡುತ್ತಿರೋದು ಮುಂದೆ ಅವರ ಜೊತೆ ಇರಲ್ಲ. ಯಾಕೆಂದ್ರೆ 2023 ರ ಚುನಾವಣೆ ಬಳಿಕ ಅವರ ಅಕ್ಕ ಪಕ್ಕ ಇದ್ದರೆ ತಲೆ ಮೇಲೆ ಹೊಡಿತಾರೆ. ಕರ್ಕೊಂಡು ಬಂದು ಸುಳ್ಳು ಹೇಳಿ ಹೀಗೆ ಮಾಡಿದ್ರಲ್ಲಾ ಅಂತ ಹೊಡಿತಾರೆ. ಮುಂದಿನ ಚುನಾವಣೆಯಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡಿದ್ರೆ ಅವರಿಗೆ ಸೋಲು ನಿಶ್ಚಿತ ಎಂದು ನೇರವಾಗಿ ಹೇಳಿದ ಪ್ರೀತಂಗೌಡ. ನಾನೆಲ್ಲೂ ಹೋಗೋದಿಲ್ಲ ಎಂದು ಸ್ಪಷ್ಟ ಪಡಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಬಸವರಾಜ್ ಯಂಕಂಚಿ ಉಪಸ್ಥಿತರಿದ್ದರು.

click me!