ಗುಂಡ್ಲುಪೇಟೆ (ಜೂ.07): ತಾಲೂಕಿನ ಬರಗಿ ಕಾಲೋನಿಯಲ್ಲಿ ವಿಕಲ ಚೇತನ ವ್ಯಕ್ತಿಯೋರ್ವ ಕೋವಿಡ್ ಲಸಿಕೆ ಬೇಡ ಎಂದು ಕೂಗಾಡಿದ ಬಳಿಕ ಪಾನಮತ್ತನಾಗಿ ಮಚ್ಚು ಹಿಡಿದು ಗ್ರಾಪಂ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾನೆ.
ಕಾಲೋನಿಯ ವಿಕಲಚೇತನ ಮುನಿಯಪ್ಪನ ಮನೆಗೆ ಲಸಿಕೆ ಪಡೆಯಿರಿ ಎಂದು ಗ್ರಾಮ ಪಂಚಾಯತ್ ಪಿಡಿಒ ಮೋಹನ್ ಕುಮಾರ್ ಗೌಡ ಹಾಗೂ ಗ್ರಾಪಂ ಸದಸ್ಯರು ಹೇಳಿದಾಗ ನಾನು ಪಡೆಯುವುದಿಲ್ಲ ಎಂದು ಹೇಳಿದ್ದಾನೆ.
undefined
ಲಸಿಕೆ ಹಾಕಿದ ಬಳಿಕವೂ ಕೊರೋನಾ ಪರೀಕ್ಷೆ ಮಾಡಿಸಬೇಕೆ? ...
ಮುನಿಯಪ್ಪನ ಮಾತಿಗೆ ಪ್ರತಿಯಾಗಿ ಗ್ರಾಪಂ ಪಿಡಿಒ ಆಹಾರ ಕಿಟ್ ಕೊಡುತ್ತಾರೆ ಎಂದು ಕರೆಸಿದಾಗ ಬಂದ ಅಸಾಮಿ ಮುನಿಯಪ್ಪ ಲಸಿಕೆ ಪಡೆ ಎಂದಾಗ ಮತ್ತೆ ಬೈದು ಮನೆಗೆ ತೆರಳಿದ್ದಾನೆ. ಮನೆಯಿಂದ ಕುಡಿದು ಬಂದ ಮುನಿಯಪ್ಪ ಕೈಯಲ್ಲಿ ಮಚ್ಚು ಹಿಡಿದು ಗ್ರಾಪಂ ಸಿಬ್ಬಂದಿ ವಿರುದ್ದ ಲಸಿಕೆ ಪಡೆಯಿರಿ ಎಂದರೆ ಕೊಚ್ಚಿ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ ಎನ್ನಲಾಗಿದೆ.
ಮುನಿಯಪ್ಪನ ತಾಯಿ ಬಂದು ಮಗನ ರಂಪಾಟ ಕಂಡು ಬೈದು ಮಚ್ಚು ಕಿತ್ತುಕೊಂಡು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಈ ಸಂಬಂಧ ಗ್ರಾಪಂ ಪಿಡಿಒ ಮೋಹನ್ ಕುಮಾರ್ ಗೌಡ ಬರಗಿ ಕಾಲೋನಿಯ ಮುನಿಯಪ್ಪ ರಂಪಾಟದ ವಿಷಯ ಖಚಿತಪಡಿಸಿದ್ದಾರೆ.