ಇಂದು ಸಿರಿಗೆರೆಯಲ್ಲಿ ನಡೆದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 30ನೇ ವರ್ಷದ ಶ್ರದ್ಧಾಂಜಲಿ ಸಮಾರಂಭದಲ್ಲಿ ಶ್ರೀಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ಸ್ಮರಿಸಿದರು.
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಸೆ.24): ಇಂದು ಸಿರಿಗೆರೆಯಲ್ಲಿ ನಡೆದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 30ನೇ ವರ್ಷದ ಶ್ರದ್ಧಾಂಜಲಿ ಸಮಾರಂಭದಲ್ಲಿ ಶ್ರೀಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ಸ್ಮರಿಸಿದರು. ನಮ್ಮ ಮನಸ್ಸು ಶುದ್ಧೀಕರಣಕ್ಕೆ ಕಾರ್ಯಕ್ರಮ ಪ್ರೇರಣೆ. ಕಾರ್ ಸರ್ವೀಸ್‌ಗೆ ಬಿಟ್ಟಂತೆ ನಾವು ಇಲ್ಲಿಗೆ ಬರಬೇಕು ಎಂದರು. ಹಿರಿಯ ಜಗದ್ಗುರುಗಳ ಬದುಕು, ದುಃಖ, ದುಮ್ಮಾನ ಜನರ ದುಃಖ ದುಮ್ಮಾನಕ್ಕೆ ಹೆಚ್ಚು ಮಹತ್ವ ನೀಡಿದ್ದರು. ಸಮಾಜ ಉದ್ಧಾರ ಮಾಡಿದ ಶ್ರೇಷ್ಠ ಗುರು ಶಿವಕುಮಾರ ಶ್ರೀ. ಶಿವಕುಮಾರಶ್ರೀ ಬದುಕೇ ನಮಗೆ ಮಾರ್ಗದರ್ಶನ ಎಂದರು.
ಹಲವು ಪ್ರಶ್ನೆಗೆ ಧೃತಿಗೆಡದ ದೃಢ ಹೆಜ್ಜೆಯಿಟ್ಟರು. ವೈಚಾರಿಕತೆ ಮೂಲಕ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ. ಅರಮನೆ, ಗುರುಮನೆಗೂ ಸಂಬಂಧ ಇದೆ. ಗುರುಗಳ ಮಾರ್ಗದರ್ಶನ ಭಕ್ತರಿಗೆ, ಸರ್ಕಾರಕ್ಕೆ ಬೇಕು. ಗುರುಗಳ ಪ್ರತಿ ಮಾತು ಸಮಾಜದ ಮೇಲೆ ಪ್ರಭಾವ. ಸಮಾಜದ ದನಿ ಸರ್ಕಾರ ಕೇಳಿಸಿಕೊಳ್ಳಬೇಕಾಗುತ್ತದೆ. ಈಗಿನ ಜಗದ್ಗುರುಗಳ ಗುರುತರವಾದ ಜವಬ್ದಾರಿ ತೆಗೆದುಕೊಂಡಿದ್ದಾರೆ. ಭಕ್ತರು ರೈತಾಪಿ ವರ್ಗ ಎಂಬುದು ಗುರುಗಳು ಮನಗಂಡಿದ್ದಾರೆ. ರೈತರ ಬೆವರಿಗೆ ಬೆಲೆ ಬರಬೇಕೆಂಬುದು ಗುರುಗಳಿಗೆ ತಿಳಿದಿದೆ. ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀ ರೈತರಿಗೆ ಬೆಲೆ ನೀಡಿದ್ದಾರೆ. ರೈತರಿಗೆ ಬೇಕಾದ ನೀರಾವರಿ ವ್ಯವಸ್ಥೆಗೆ ಆದ್ಯತೆ.
ಚಿತ್ರದುರ್ಗ ಮುರುಘಾ ಶ್ರೀಗೆ ಜೈಲೈ ಗತಿ, ಜಾಮೀನು ಅರ್ಜಿ ವಜಾ!
ಅನೇಕ ನೀರಾವರಿ ಯೋಜನೆ ಹಾಗೇ ಉಳಿದಿದ್ದವು 25 ವರ್ಷದಿಂದ ನೀರಾವರಿ ಯೋಜನೆ, ಕೆರೆ ತುಂಬವ ಯೋಜನೆಗೆ ಶ್ರೀ ಆದ್ಯತೆ. ಶ್ರೀಗಳ ಆಶಯಕ್ಕೆ ಕೆಲವರು ಸ್ಪಂದಿಸಿದರು, ಕೆಲವರು ಸ್ಪಂದಿಸಿಲ್ಲ ಎಂದರು. ತರಳಬಾಳು ಹುಣ್ಣಿಮೆ ಮಾಡಿದಲ್ಲಿ ಏತನೀರಾವರಿ ಯೋಜನೆ ಮಾಡಿಸಿದ್ದಾರೆ. ಸರ್ಕಾರದಲ್ಲಿದ್ದವರು ತರಳಬಾಳು ಹುಣ್ಣಿಮೆಗೆ ಮಾಡಿಸಲು ಯೋಚಿಸಬೇಕೆಂದು ಚಟಾಕಿ ಹಾರಿಸಿದರು. ನೀರಾವರಿ ಯೋಜನೆಗಳಿಗೆ ನಮ್ಮ ನಾಯಕರಾದ ಬಿಎಸ್‌ವೈರಿಂದ ತೀವ್ರತೆ. ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರೂ ಸಹ ನಾವು ಚಾಲನೆ ನೀಡಿದ ಯೋಜನೆ ಮುಂದುವರೆಸುವ ಪ್ರಯತ್ನ ಮಾಡಿದ್ದಾರೆ.
ರಾಜ್ಯದ ನಾಲ್ಕು ದಿಕ್ಕಿನಲ್ಲಿ ಎಲ್ಲಿ ಹೋದರೂ ಬಿಎಸ್‌ವೈ ಪಾದಯಾತ್ರೆ. ಹೋದಲ್ಲೆಲ್ಲಾ ಬಿಎಸ್‌ವೈ ಪಾದಯಾತ್ರೆ ಮಾಡಿದ್ದಾರೆ. ನೀರಾವರಿ ಯೋಜನೆ ಆಗಬೇಕು ಅಂತಾರೆ. ನಾನೊಮ್ಮೆ ಸರ್ ನೀವು ಎಲ್ಲೆಲ್ಲಿ ಪಾದಯಾತ್ರೆ ಮಾಡಿದ್ದೀರಿ ಲೀಸ್ಟ್ ಕೊಡಿ ಎಂದಹ ಕೇಳಿದೆ ಎಂದು ಸಿಎಂ ಚಟಾಕಿ. ನಾನು ಬಿಎಸ್‌ವೈ ಹಾಕಿಕೊಟ್ಟ ಹಾದಿಯಲ್ಲಿ ಸಾಗಿದ್ದೇನೆ. ದುರದೃಷ್ಠಿಯಿಂದ ವಿದ್ಯಾನಿಧಿ ಯೋಜನೆ ಮಾಡಿದ್ದೇನೆ. ರೈತರು ಸ್ವಾಭಿಮಾನಿ, ಸ್ವಾವಲಂಬಿ ಬದುಕು ನಡೆಸಲು ಯೋಜನೆ. ಅತಿವೃಷ್ಠಿ, ಅನಾವೃಷ್ಠಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಕೆಲವು ಕಡೆ ಪ್ರವಾಹವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನೇಕ ಕಡೆ ಕೆರೆ, ಕಟ್ಟೆಗಳು ತುಂಬಿವೆ.
ಈರುಳ್ಳಿ ಬೆಳೆದು ಕಂಗಾಲಾದ ಕೋಟೆನಾಡಿನ ರೈತರು, 14 ಸಾವಿರ ಹೆಕ್ಟೇರ್ ಈರುಳ್ಳಿ ನಾಶ!
ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ವ್ಯಾಪ್ತಿಗೊಳಪಡಲಿದೆ. ಬದುಕು ವ್ಯವಹಾರ ಆದಾಗ ಸಂಬಂಧಗಳು ಉಳಿಯಲ್ಲ. ತತ್ವಜ್ಞಾನದಲ್ಲಿ ಪಾಪ ಪುಣ್ಯ ಇದೆ, ವ್ಯವಹಾರದಲ್ಲಿ ಲಾಭ ನಷ್ಟವಿದೆ. ಶ್ರೀಗಳು ರಚಿಸಿದ ಕೃತಿಯಲ್ಲಿ ಹಲವು ವಿಚಾರಗಳಿವೆ. ಸ್ವಾರ್ಥಕ್ಕಾಗಿ ಹೊಗಳಿಕೆ, ದ್ವೇಷಕ್ಕಾಗಿ ತೆಗಳಿಕೆ ಸರಿಯಲ್ಲ. ಸ್ಥಿತಪ್ರಜ್ಞರಾಗಿ ಬದುಕುವುದೇ ತರಳಬಾಳು ಮಠದ ಉದ್ದೇಶ. ಸರ್ಕಾರ ಮಠದ ತತ್ವಗಳಿಗೆ ಗೌರವ ತರುವ ರೀತಿ ಆಡಳಿತ -ಸಿಎಂ ಬೊಮ್ಮಾಯಿ ದುಡ್ಡೇ ದೊಡ್ಡಪ್ಪ ಅಲ್ಲ, ದುಡಿಮೆಯೇ ದೊಡ್ಡಪ್ಪ ಎಂಬುದು ಗುರುಗಳ ತತ್ವ ಎಂದು ಜನರಿಗೆ ತಿಳಿಸಿದರು.