ಅನಾರೋಗ್ಯದಿಂದ ಬಳಲುತ್ತಿರುವ ಶಾಸಕ ಜಮೀರ್ ಅಹಮದ್‌ಗೆ ಯಶಸ್ವಿ ಶಸ್ತ್ರಚಿಕಿತ್ಸೆ

By Suvarna NewsFirst Published Sep 24, 2022, 5:49 PM IST
Highlights

ಭುಜದ ನೋವಿನಿಂದಾಗಿ ಆಸರಾ ಸಮೂಹ ಆಸ್ಪತ್ರೆಗೆ ದಾಖಲಾಗಿದ್ದ ಚಾಮರಾಜಪೇಟೆ ಕ್ಷೇತ್ರದ ಶಾಸಕರಾದ ಜಮೀರ್ ಅಹಮದ್ ಅವರಿಗೆ ಭುಜದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ.

ಬೆಂಗಳೂರು (ಸೆ.24) : ಭುಜದ ನೋವಿನಿಂದಾಗಿ ಆಸರಾ ಸಮೂಹ ಆಸ್ಪತ್ರೆಗೆ ದಾಖಲಾಗಿದ್ದ ಚಾಮರಾಜಪೇಟೆ ಕ್ಷೇತ್ರದ ಶಾಸಕರಾದ ಜಮೀರ್ ಅಹಮದ್ ಅವರಿಗೆ ಭುಜದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ತೀವ್ರವಾಗಿ ಹರಿದ ಸುಪ್ರಾಸ್ಪಿನೇಟಸ್ ಸ್ನಾಯುವಿನೊಂದಿಗೆ ತೀವ್ರ ಆವರ್ತಕ ಪಟ್ಟಿಯ ಗಾಯದಿಂದ (severe rotator cuff injury with badly torn supraspinatus muscle) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸರಾ ಸಮೂಹ ಆಸ್ಪತ್ರೆಯ ತಜ್ಞ ಶಸ್ತ್ರಚಿಕಿತ್ಸಕರು ಆಸ್ಪತ್ರೆಯಲ್ಲಿ ಲಭ್ಯವಿರುವ ಇತ್ತೀಚಿನ ಸ್ಟ್ರೈಕರ್ 4K ಆರ್ತ್ರೋಸ್ಕೊಪಿಕ್ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಂಡು ಆವರ್ತಕ ಪಟ್ಟಿಯ ಪುನರ್ನಿರ್ಮಾಣವನ್ನು (Rotator cuff reconstruction) ಮಾಡಿದರು. ಡಾ. ಜಗದೀಶ್ ಹಿರೇಮಠ್ ಅವರು, “ಜಮೀರ್ ಅವರು ನಾಳೆ ಕೆಲಸಕ್ಕೆ ಮರಳುತ್ತಾರೆ ಆದರೆ ಶಸ್ತ್ರಚಿಕಿತ್ಸೆಗೆ ಒಳಗಾದ ಭಾಗವು ವಾಸಿಯಾಗಲು ವಿಶ್ರಾಂತಿಯ ಅಗತ್ಯವಿದೆ. ನಾವು ಗಮನಿಸುತ್ತಿದ್ದೇವೆ ಮತ್ತು ಅವರು ಬೇಗನೆ ಚೇತರಿಸಿಕೊಳ್ಳುವಂತೆ ನೋಡಿಕೊಳ್ಳುತ್ತೇವೆ"ಎಂದರು. 

ಜಮೀರ್ ವಿರುದ್ಧ ಹಿಂದೂ ಸಂಘಟನೆಗಳ ಅಭಿಯಾನ: ಅಪ್ಪನಿಗೆ ಚುನಾವಣೆ ಭಯ, ಮಗನಿಗೆ ಸಿನಿಮಾ ಭಯ 

ಕರಡಿ ದಾಳಿಗೊಳಗಾದ ವ್ಯಕ್ತಿಗೆ ಯಶಸ್ವಿ ಶಸ್ತ್ರಚಿಕಿತ್ಸೆ
ಹುಬ್ಬಳ್ಳಿ: ಕರಡಿ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಮುಂಡಗೋಡ ತಾಲೂಕಿನ ಕಾತೂರಿನ ಫಕ್ಕೀರಪ್ಪನಿಗೆ (40) ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಅತಿ ಅಪರೂಪದ ಶಸ್ತ್ರಚಿಕಿತ್ಸೆ ಇದು. ಗಾಯಾಳು ಇದೀಗ ಪೂರ್ಣ ಗುಣಮುಖನಾಗಿದ್ದು, ಕಿಮ್ಸ್‌ನ ಮತ್ತೊಂದು ಸಾಧನೆ ಇದಾಗಿದೆ ಎಂದು ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜು. 30ರಂದು ಫಕ್ಕೀರಪ್ಪ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಕರಡಿ ದಾಳಿ ನಡೆಸಿತ್ತು. ಈತನಿಗೆ ಮುಂಡಗೋಡ ತಾಲೂಕಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ಅಲ್ಲಿಂದ ಜು. 31ರಂದು ಕಿಮ್ಸ್‌ಗೆ ದಾಖಲಿಸಲಾಗಿತ್ತು. ಇಲ್ಲಿಗೆ ಬಂದ ಮೇಲೆ ಪರೀಕ್ಷಿಸಿದಾಗ ಆತನ ಕಣ್ಣು ಮತ್ತು ಮುಖದ ಮೂಳೆ ಕಿತ್ತುಕೊಂಡು ಹೋಗಿದ್ದು ಗೊತ್ತಾಯಿತು. ಆದರೆ ಕಣ್ಣಿನ ರೆಟಿನಾ ಭಾಗ ಹಾಳಾಗಿರಲಿಲ್ಲ. ಆದರೆ ಇದನ್ನು ಶಸ್ತ್ರಚಿಕಿತ್ಸೆ ನಡೆಸುವುದು ದೊಡ್ಡ ಸವಾಲಿನ ಕೆಲಸವಾಗಿತ್ತು ಎಂದರು.

3ಡಿ ಕಸ್ಟಮೈಜೆಡ್‌ ಟೈಟಾನಿಯ್‌ಂ ಇಂಪ್ಲಾಂಟ್‌ ಅಳವಡಿಸಿ ಸೆ. 12ರಂದು ಬರೋಬ್ಬರಿ 6 ಗಂಟೆ ಈ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆಪರೇಷನ್‌ ಮಾಡಿದ ಬಳಿಕ ದೃಷ್ಟಿಬರುತ್ತದೆಯೋ ಇಲ್ಲವೋ ಎಂಬ ಸಂಶಯವಿತ್ತು. ಆದರೆ ಇದೀಗ ಚೇತರಿಸಿಕೊಳ್ಳುತ್ತಿರುವ ಬಗೆ ನೋಡಿದರೆ ಸಂಪೂರ್ಣ ದೃಷ್ಟಿಕೂಡ ಬರಲಿದೆ. ಸಾಮಾನ್ಯರಂತೆ ಈತ ಬದುಕು ಸಾಗಿಸಬಹುದಾಗಿದೆ ಎಂದು ವಿವರಿಸಿದರು.

ಕಿಮ್ಸ್‌ನ ಬಾಯಿ ಮತ್ತು ಮುಖ ವಿಭಾಗ, ಕಣ್ಣು ಮತ್ತು ಅರವಳಿಕೆ ವಿಭಾಗದ ತಜ್ಞ ವೈದ್ಯರ ತಂಡ ಈ ಶಸ್ತ್ರಚಿಕಿತ್ಸೆಯನ್ನು ಮಾಡಿದೆ. ವೈದ್ಯರಾದ ಡಾ. ಮಂಜುನಾಥ ಬಿಜಾಪುರ, ಡಾ. ವಸಂತ ಕಟ್ಟಿಮನಿ, ಡಾ. ಅನುರಾಧಾ, ಡಾ. ವಿವೇಕಾನಂದ ಜೀವಣಗಿ, ಡಾ. ಧರ್ಮೇಶ, ಡಾ. ಸ್ಪೂರ್ತಿ ನೇತೃತ್ವದ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ. ಸದ್ಯ ಫಕ್ಕೀರಪ್ಪ ಯಥಾಸ್ಥಿತಿಗೆ ಮರಳಿದ್ದಾರೆ. ಈ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ . 1.50 ಲಕ್ಷ ರೂ ವೆಚ್ಚವಾಗಬಹುದಾದ ಗಂಭೀರ ಸ್ವರೂಪದ ಈ ಶಸ್ತ್ರಚಿಕಿತ್ಸೆಯನ್ನು ಕಿಮ್ಸ… ಉಚಿತವಾಗಿ ನಡೆಸಿ ಅನುಕೂಲ ಮಾಡಿಕೊಟ್ಟಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ, ಮಂಜುನಾಥ ವಿಜಾಪುರ, ಡಾ. ವಸಂತ ಕಟ್ಟಿಮನಿ, ಡಾ. ಅನುರಾಧ ನಾಗನಗೌಡ್ರ, ಡಾ. ಸ್ಪೂರ್ತಿ, ಡಾ. ವಿವೇಕಾನಂದ, ಡಾ.ರಾಜಶೇಖರ ದ್ಯಾಬೇರಿ ಸೇರಿದಂತೆ ಹಲವರಿದ್ದರು.

ನಾಯಿ ಕಾಪಾಡಿತು: ಫಕ್ಕೀರಪ್ಪ ಹೊಲದಲ್ಲಿ ಕೆಲಸ ಮಾಡುವಾಗ ಕರಡಿ ದಾಳಿ ಮಾಡಿತ್ತು. ಇನ್ನು ಸ್ವಲ್ಪ ಇದ್ದರೆ ಈತನ ಪ್ರಾಣವೂ ಅಲ್ಲೇ ಹಾರಿ ಹೋಗುತ್ತಿತ್ತು. ಆದರೆ ಅಷ್ಟರಲ್ಲೇ ನಾಯಿ ಬಂದು ಬೊಗಳಲು ಶುರು ಮಾಡಿದ ಮೇಲೆ ಕರಡಿ ಈತನನ್ನು ಅಲ್ಲೇ ಬಿಟ್ಟು ಹೋಗಿತ್ತು. ಇದರಿಂದ ಈತನ ಪ್ರಾಣ ಉಳಿಯಿತು. ಹೀಗಾಗಿ ಈತನ ಪ್ರಾಣ ನಾಯಿ ಕಾಪಾಡಿದೆ.
 

click me!