ಕಲಘಟಗಿ: ಮದುವೆಯಾದ ಒಂದೇ ದಿನದಲ್ಲಿ ಮಸಣ ಸೇರಿದ ಮದುಮಗ

Suvarna News   | Asianet News
Published : May 02, 2021, 02:28 PM ISTUpdated : May 02, 2021, 02:30 PM IST
ಕಲಘಟಗಿ: ಮದುವೆಯಾದ ಒಂದೇ ದಿನದಲ್ಲಿ ಮಸಣ ಸೇರಿದ ಮದುಮಗ

ಸಾರಾಂಶ

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಬಕದಹೊನ್ನಳ್ಳಿ ಗ್ರಾಮದಲ್ಲಿ ನಡೆದ ಘಟನೆ| ಮದುಮಗನ ನಿಧನದಿಂದ ಶೋಕಸಾಗರದಲ್ಲಿ ಮಳುಗಿದ ಗ್ರಾಮ| ಕಳೆದ ನಾಲ್ಕು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಮದುಮಗ| 

ಧಾರವಾಡ(ಮೇ.02): ಮದುವೆಯಾದ ಒಂದೇ ದಿನದಲ್ಲಿ ಮದುಮಗ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಕಲಘಟಗಿ ತಾಲೂಕಿನ ತಬಕದಹೊನ್ನಳ್ಳಿ ಗ್ರಾಮದಲ್ಲಿ ಇಂದು(ಭಾನುವಾರ) ಜರುಗಿದೆ. ಶಶಿಕುಮಾರ್ ಪಟ್ಟಣಶೆಟ್ಟಿ (ಅರಿಷಣಗೇರಿ)(28)ಎಂಬ ಯುವಕನೇ ಸಾವಿಗೀಡಾದ ದುರ್ದೈವಿಯಾಗಿದ್ದಾನೆ. 

ಮದುಮಗನ ನಿಧನದಿಂದ ಸಂಬಂಧಿಕರಲ್ಲಿ ದುಗುಡ ಮಡುಗಟ್ಟಿದೆ. ತಬಕದಹೊನ್ನಳ್ಳಿಯಲ್ಲಿ ಶನಿವಾರ ವರನ ಸ್ವಗೃಹದಲ್ಲಿ ಸರಳವಾಗಿ ಮದುವೆ ಜರುಗಿತ್ತು.  ಈ ಮೊದಲು ಕಳೆದ ನಾಲ್ಕು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಜ್ವರದ ನಡುವೆ ಕೂಡ ಗುಗ್ಗಳ ಮದುವೆಯ ಶಾಸ್ತ್ರ ಮುಗಿಸಿ ನಂತರ ಶಿಗ್ಗಾವ ತಾಲೂಕಿನ‌ ಮುಕಬಸರಿಕಟ್ಟಿಯಲ್ಲಿನ ವಧುವಿನ ಮನೆಗೆ ನವ ದಂಪತಿಗಳು ತೆರಳಿದ್ದರು ಎನ್ನಲಾಗಿದೆ.

ಸಿಂಧನೂರು: ಹಸೆಮಣೆ ಏರಬೇಕಿದ್ದ ಮದುಮಗ ಅಕಾಲಿಕ ನಿಧನ

ವಧುವಿನ ಮನೆಯಲ್ಲಿ ಶಶಿಕುಮಾರ್‌ಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಶಶಿಕುಮಾರ್‌ ಹಠಾತ್‌ ನಿಧನನಿಂದ ಎರಡೂ‌ ಕುಟುಂಬಗಳಲ್ಲಿ ನೀರವ ಮೌನ ಆವರಿಸಿದೆ. ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಚಿತು ಇಡೀ ಗ್ರಾಮವೇ ಶೋಕಸಾಗರದಲ್ಲಿ ಮಳುಗಿದೆ.
 

PREV
click me!

Recommended Stories

ಎಚ್‌ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ
ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ