ತನ್ನ ಮದುವೆಯ ದಿನವೇ ನವವಧು ಪರೀಕ್ಷಾ ಕೇಂದ್ರ ಬಂದು ಪರೀಕ್ಷೆ ಬರೆದಿದ್ದಾಳೆ. ಸ್ವರ್ಧಾತ್ಮಕ ಪರೀಕ್ಷೆ ಎದುರಿಸಿದ್ದಾಲೆ
ಮಡಿಕೇರಿ (ನ.23): ಧಾರೆ ಮುಹೂರ್ತ ಮುಗಿಸಿದ ವಧು ಕಲ್ಯಾಣ ಮಂಟಪದಿಂದ ನೇರವಾಗಿ ಮಡಿಕೇರಿಯ ಜ್ಯೂನಿಯರ್ ಕಾಲೇಜಿಗೆ ಆಗಮಿಸಿ ಕೊಡಗು ಡಿಸಿಸಿ ಬ್ಯಾಂಕ್‌ಗೆ ನಡೆದ ಸ್ಪಧಾರ್ತ್ಮಕ ಪರೀಕ್ಷೆಗೆ ಹಾಜರಾಗಿದ್ದಾರೆ.
ಮಡಿಕೇರಿಯ ಅಶೋಕಪುರ ನಿವಾಸಿ ಸ್ವಾತಿ ಪರೀಕ್ಷೆ ಬರೆದ ವಧು, ವಿವಾಹ ದಿನಾಂಕಕ್ಕೂ ಮೊದಲು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡಿದ್ದ ಸ್ವಾತಿ ಅವರಿಗೆ ಸುಂಟಿಕೊಪ್ಪದ ಮದುರಮ್ಮ ಪಟ್ಟಣದ ಸುರೇಶ್ ಅವರೊಂದಿಗೆ ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ ಭಾನುವಾರ ಮದುವೆ ನಿಶ್ಚಯವಾಗಿತ್ತು. ಪರೀಕ್ಷಾ ದಿನದಂದೇ ಧಾರೆ ಮುಹೂರ್ತ ಕೂಡ ಬಂದಿತ್ತು.
ಆರತಕ್ಷತೆ ದಿನ ನವಜೋಡಿಯಿಂದ ಮಹತ್ವದ ನಿರ್ಧಾರ; ಮಾದರಿಯಾಯ್ತು ನವಜೋಡಿಯ ನಡೆ ...
ಎರಡೂ ಕುಟುಂಬದವರು ಸ್ವಾತಿ ಪರೀಕ್ಷೆಗೆ ಅಡ್ಡಿಯಾಗದಂತೆ ಬೆಳಗ್ಗೆ 6.30ರಿಂದ 9 ಗಂಟೆವರೆಗೆ ಇದ್ದ ಶುಭಲಗ್ನದಲ್ಲಿ ಧಾರೆ ಮುಹೂರ್ತ ನಿಗದಿಪಡಿಸಿಕೊಂಡು ವಿವಾಹವನ್ನು ನೆರವೇರಿಸಿದ್ದಾರೆ. ಬಳಿಕ ಸ್ವಾತಿ ಧಾರೆ ವಸ್ತ್ರದಲ್ಲೇ ಪರಿಕ್ಷಾ ಕೇಂದ್ರಕ್ಕೆ ಹಾಜರಾಗಿ ಪರೀಕ್ಷೆ ಬರೆದಿದ್ದಾರೆ.