ಉಡುಪಿ ಜಿಲ್ಲೆಯ ಜನರಿಗೆ ಪ್ರವಾಹದ ಅನುಭವ ಆಗಿದೆ. ಅದರಲ್ಲೂ ಸೀತಾನದಿಯಲ್ಲಿ ನೀರು ಅಪಾಯಕಾರಿ ಮಟ್ಟಕ್ಕೆ ಏರಿದಾಗ ನಡೆಸಬೇಕಾದ ಕಾರ್ಯಾಚರಣೆಯ ಬಗ್ಗೆ ಅಣಕು ಪ್ರದರ್ಶನ ಏರ್ಪಡಿಸಲಾಗಿತ್ತು. ಈ ವೇಳೆ ಬ್ರಹ್ಮಾವರ ತಹಶೀಲ್ದಾರ್ ಭಾಗವಹಿಸಿದ್ದರು.
ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್
ಬ್ರಹ್ಮಾವರ (ಜೂ.6): ಉಡುಪಿ (Udupi) ಜಿಲ್ಲೆಯ ಬ್ರಹ್ಮಾವರ ( brahmavara ) ತಾಲೂಕಿನ ತಹಸಿಲ್ದಾರ್ ರಾಜಶೇಖರಮೂರ್ತಿ ( tahsildar Rajashekar Murthy) ಅವರು ನೀಲಾವರ ಬಳಿ ಇರುವ ಪಂಚಮಿಕಾನನ ಕೂರಾಡಿ ಸೇತುವೆ ಬಳಿ ಸೀತಾನದಿ ಬಿದ್ದಿದ್ದರು. ಈ ಸುದ್ದಿ ತಿಳಿದ ತಕ್ಷಣವೇ ಅಗ್ನಿಶಾಮಕದಳ ಮತ್ತು ಬ್ರಹ್ಮಾವರ ಗೃಹರಕ್ಷಕ ದಳದವರು ಕ್ಷಿಪ್ರ ಕಾರ್ಯಾಚರಣೆ ನಡೆಸುವ ಮೂಲಕ ಅವರನ್ನು ರಕ್ಷಿಸಿದರು!
undefined
ಅರೆ ಇದೇನು? ತಹಶೀಲ್ದಾರರು ಹರಿಯುವ ನದಿಗೆ ಬಿದ್ದದ್ದು ಹೇಗೆ? ಅವರ ರಕ್ಷಣಾ ಕಾರ್ಯಚರಣೆ ನಡೆದಿದ್ದಾದರೂ ಹೇಗೆ? ಹೀಗೆ ಅನೇಕ ಪ್ರಶ್ನೆಗಳು ನಿಮ್ಮಲ್ಲಿ ಉದ್ಭವಿಸಬಹುದು. ಇಷ್ಟಕ್ಕೂ ಇದೊಂದು ಅಪರೂಪದ ಕಾರ್ಯಾಚರಣೆ!
PSI Recruitment Scam; ವಿವಾದಕ್ಕೆ ಕಾರಣವಾಗಿದ್ದ ಅಭ್ಯರ್ಥಿ ದರ್ಶನ್ ಗೌಡ ಸೇರಿ ಮೂವರು ಅರೆಸ್ಟ್
ಮಳೆಗಾಲ ಸಮೀಪಿಸುತ್ತಿದೆ, ಹಿಂದಿನ ವರ್ಷಗಳಲ್ಲಿ ಉಡುಪಿ ಜಿಲ್ಲೆಯ ಜನರಿಗೆ ಪ್ರವಾಹದ ಅನುಭವ ಆಗಿದೆ. ಪ್ರವಾಹ ಬಂದರೆ ಅದೆಷ್ಟರ ಮಟ್ಟಿಗೆ ಅಪಾಯವಾಗುತ್ತದೆ ಅನ್ನೋದರ ಅನುಭವವೂ ಇದೆ. ಅದರಲ್ಲೂ ಅತಿಹೆಚ್ಚು ಪ್ರವಾಹ ಬರುವ ಸೀತಾನದಿಯಲ್ಲಿ ನೀರು ಅಪಾಯಕಾರಿ ಮಟ್ಟಕ್ಕೆ ಏರಿದಾಗ ನಡೆಸಬೇಕಾದ ಕಾರ್ಯಾಚರಣೆಯ ಬಗ್ಗೆ ತಂಡಗಳನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಈ ಅಣಕು ಪ್ರದರ್ಶನ ಏರ್ಪಡಿಸಲಾಗಿತ್ತು.
ಬ್ರಹ್ಮಾವರ ತಾಲೂಕಿನ ನೆರೆ ರಕ್ಷಣಾ ತಂಡದವರಿಂದ ನಡೆದ ಈ ಕಲ್ಪಿತ ಕಾರ್ಯಾಚರಣೆಯಲ್ಲಿ ಸ್ವತಹ ಬ್ರಹ್ಮಾವರ ತಹಶೀಲ್ದಾರ್ ಅವರೇ ನದಿಗೆ ಇಳಿದು ತಂಡದ ಕಾರ್ಯಕ್ಷಮತೆಯನ್ನು ಪರಿಶೀಲಿಸಿದ್ದಾರೆ. ಈ ಮೂಲಕ ಮುಂಬರುವ ಮುಂಗಾರಿನಲ್ಲಿ ಬರಬಹುದಾದ ಸಂಭಾವ್ಯ ಅಪಾಯವನ್ನು ಎದುರಿಸಲು ತನ್ನ ತಂಡವನ್ನು ಸಿದ್ಧಗೊಳಿಸಿದ್ದಾರೆ.
TEXTBOOK REVISION; ‘ಆಡಿಸಿ ನೋಡು’ ಗೀತೆಯ ಕರ್ತೃ ಹೆಸರೇ ಬದಲು ಮಾಡಿದ ಚಕ್ರತೀರ್ಥ ಸಮಿತಿ!
ಸೀತಾ ನದಿ (Sitha River) ತೀರದಲ್ಲಿರುವ ಕೂರಾಡಿ ಬಂಡಿಮಠ, ನೀಲಾವರ, ಎಳ್ಳಂಪಳ್ಳಿ ಭಾಗದ ಜನರು ವರ್ಷಂಪ್ರತಿ ಕೃತಕ ನೆರೆಯಿಂದ ಕಷ್ಟ ಅನುಭವಿಸುತ್ತಾರೆ. ಈ ಕಲ್ಪಿತ ಕಾರ್ಯಾಚರಣೆಯ ವೇಳೆ ಈ ಪರಿಸರ ಗ್ರಾಮಸ್ಥರೆಲ್ಲರೂ ಬಂದು ಸೇರಿದ್ದರು. ಅಗ್ನಿಶಾಮಕ ದಳ, ಗೃಹರಕ್ಷಕ ದಳ, ತಾಲೂಕು ಪಂಚಾಯತ್ ಅಧಿಕಾರಿಗಳು ,ಅರಣ್ಯ ಇಲಾಖೆ ,ಕಂದಾಯ ಇಲಾಖೆಯ ಅಧಿಕಾರಿಗಳು ಹೀಗೆ ಎಲ್ಲರೂ ನದಿ ಬದಿಗೆ ಬಂದು ಕಾರ್ಯಾಚರಣೆ ನಡೆಸುವುದನ್ನು ಆಶ್ಚರ್ಯಚಕಿತರಾಗಿ ನೋಡಿದರು.
ಕಲ್ಪಿತ ಕಾರ್ಯಾಚರಣೆಯಲ್ಲಿ ಬೋಟ್ ನಲ್ಲಿದ್ದ ಮುಳುಗು ತಜ್ಞರು, ಪ್ರಥಮ ಚಿಕಿತ್ಸೆ ನೀಡಲು ದಾದಿಯರು, ತುರ್ತು ಅಗತ್ಯವಾಗುವ ಆಂಬುಲೆನ್ಸ್ , ಪೊಲೀಸರು ಸೇರಿದಂತೆ ಎಲ್ಲರೂ ಭಾಗವಹಿಸಿದ್ದರು. ಆಡಳಿತ ವ್ಯವಸ್ಥೆ ಜನರಲ್ಲಿ ನೆರೆಯ ಅವಧಿಯಲ್ಲಿ ಮಾಡಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅರಿವು ಮೂಡಿಸಿತು.
ಪಠ್ಯಪುಸ್ತಕ ಪರಿಷ್ಕರಣೆ ಮೂಲಕ ಶಿಕ್ಷಣವನ್ನೇ ಬುಡಮೇಲು ಮಾಡಲಾಗಿದೆಯೇ?
ಮುಂಗಾರು ಸಮೀಪಿಸುತ್ತಿದೆ, ಎರಡು ವರ್ಷಗಳ ಹಿಂದೆ ದಾಖಲೆ ಪ್ರಮಾಣದ ಮಳೆ ಸುರಿದು ಉಡುಪಿ ಜಿಲ್ಲೆಯ ಆಯಕಟ್ಟಿನ ಸ್ಥಳದಲ್ಲಿ ಪ್ರವಾಹ ಉಂಟಾಗಿತ್ತು. ಬಹಳ ವರ್ಷಗಳ ನಂತರ ನಿರೀಕ್ಷಿಸದೇ ಬಂದ ಪ್ರವಾಹ ಅದು, ಜನರಾಗಲಿ, ಆಡಳಿತ ಯಂತ್ರವಾಗಲಿ ಪ್ರವಾಹ ಸ್ಥಿತಿಯನ್ನು ಎದುರಿಸುವ ತುರ್ತು ಅನುಭವ ಕೊರತೆಯಾಗಿತ್ತು. ಹಾಗಾಗಿ ಈ ಬಾರಿ ತಹಸಿಲ್ದಾರರ ಮುತುವರ್ಜಿಯಲ್ಲಿ ಅಣುಕು ಪ್ರದರ್ಶನ ಅಥವಾ ಕಲ್ಪಿತ ಕಾರ್ಯಾಚರಣೆ ಏರ್ಪಾಟಾಗಿತ್ತು.
ಸಂತ್ರಸ್ತನ ಸ್ಥಾನದಲ್ಲಿ ಸ್ವತಃ ತಹಸೀಲ್ದಾರರೇ ಇದ್ದು, ಅನುಭವ ಪಡೆದುಕೊಳ್ಳುವ ಮೂಲಕ ಕಾರ್ಯಾಚರಣೆ ಲೋಪದೋಷಗಳನ್ನು ತಿದ್ದುವುದು ಸಾಧ್ಯವಾಗಿದೆ. ಬರಲಿರುವ ಮುಂಗಾರಿಗೆ ಉಡುಪಿ ಜಿಲ್ಲೆಯ ತಾಲೂಕು ರಕ್ಷಣಾ ತಂಡಗಳು ಈ ರೀತಿ ಸಜ್ಜಾಗುತ್ತಿವೆ.