Koppala; ಗಂಗಾವತಿಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಕೂಗು

By Suvarna News  |  First Published Jun 6, 2022, 3:20 PM IST

ಕೊಪ್ಪಳ ಜಿಲ್ಲೆಗೆ ಕೇಂದ್ರ ಸರಕಾರ  ಎರಡನೇ ಹಂತದಲ್ಲಿ ಉಡಾನ್ ಯೋಜನೆ ಘೋಷಿಸಿದೆ.‌ ಈಗಾಗಲೇ ಉಡಾನ್ ಯೋಜನೆ ಘೋಷಿಸಿ ಐದಾರು ವರ್ಷಗಳು ಕಳೆದರೂ ಸಹ ಇಲ್ಲಿಯವರೆಗೂ ವಿಮಾನ ಹಾರಾಟ ಆರಂಭವಾಗಿಲ್ಲ.‌


ವರದಿ: ದೊಡ್ಡೇಶ್ ಯಲಿಗಾರ್ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ (ಜೂ.6): ಆ ಜಿಲ್ಲೆಗೆ ಕೇಂದ್ರ ಸರಕಾರ  ಎರಡನೇ ಹಂತದಲ್ಲಿ ಉಡಾನ್ ಯೋಜನೆ ಘೋಷಿಸಿದೆ.‌ ಈಗಾಗಲೇ ಉಡಾನ್ ಯೋಜನೆ ಘೋಷಿಸಿ ಐದಾರು ವರ್ಷಗಳು ಕಳೆದರೂ ಸಹ ಇಲ್ಲಿಯವರೆಗೂ ವಿಮಾನ ಹಾರಾಟ ಆರಂಭವಾಗಿಲ್ಲ.‌ ಇದಕ್ಕೆ ಕಾರಣ ವಿಮಾನ‌ ನಿಲ್ದಾಣದ ಸಮಸ್ಯೆ.‌ ಅಷ್ಟಕ್ಕೂ ಏನಿದು ವಿಮಾನ‌ ನಿಲ್ದಾಣ ಸಮಸ್ಯೆ?  

Tap to resize

Latest Videos

ಕೊಪ್ಪಳ‌ ಜಿಲ್ಲೆಯ ಗಂಗಾವತಿ ಅಂದರೆ ಸಾಕು ತಟ್ಟನೆ ನೆನೆಪಿಗೆ ಬರೋದು, ಭತ್ತದ ನಾಡು ಎಂದು. ಜೊತೆಗೆ ಐತಿಹಾಸಿಕವಾಗಿ, ಪೌರಾಣಿಕವಾಗಿ ಈ ಗಂಗಾವತಿ ತಾಲೂಕು ಬಹಳಷ್ಟು ಪ್ರಸಿದ್ಧಿ ಪಡೆದಿದೆ. ಜೊತೆಗೆ ಇಲ್ಲಿ ಬೆಳೆಯುವ ಭತ್ತ ಸಹ ವಿಶ್ವಪ್ರಸಿದ್ಧಿ ಪಡೆದಿದೆ. ಇಂತಹ ಪ್ರಸಿದ್ಧಿ ಪಡೆದಿರುವ ಗಂಗಾವತಿ ತಾಲೂಕಿನ ಮರಳಿ ಗ್ರಾಮದ ಬಳಿ ಇದಘ ವಿಮಾನ ನಿಲ್ದಾಣ ಆರಂಭ ಮಾಡುವ ಕೂಗು ಕೇಳಿಬಂದಿದೆ.

ಮರಳಿಯಲ್ಲಿ ಯಾಕೆ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು?: ಇನ್ನು ಕೇಂದ್ರ ಸರಕಾರ ಎರಡನೇ ಹಂತದಲ್ಲಿ ಕೊಪ್ಪಳಕ್ಕೆ ಉಡಾನ್ ಯೋಜನೆ ಘೋಷಿಸಿದೆ. ಈಗಾಗಲೇ ಉಡಾನ್ ಯೋಜನೆ ಘೋಷಣೆ ಮಾಡಿ  ನಾಲ್ಕೈದು ವರ್ಷಗಳು ಕಳೆದರೂ ಸಹ ಇಲ್ಲಿಯವರೆಗೂ ವಿಮಾನಗಳು ಸಂಚಾರ ಮಾಡಲು ಆರಂಭ ಮಾಡಿಲ್ಲ.‌ ಇದಕ್ಕೆ ಕಾರಣ ಜಿಲ್ಲೆಯಲ್ಲಿ ವಿಮಾನ ನಿಲ್ದಾಣವು ಇರದೇ ಇರುವುದು.

TEXTBOOK REVISION; ‘ಆಡಿಸಿ ನೋಡು’ ಗೀತೆಯ ಕರ್ತೃ ಹೆಸರೇ ಬದಲು ಮಾಡಿದ ಚಕ್ರತೀರ್ಥ ಸಮಿತಿ!

ಕೊಪ್ಪಳ ತಾಲೂಕಿನ ಬಸಾಪೂರ ಬಳಿ ಎಂ ಎಸ್ ಪಿ ಎಲ್ ಖಾಸಗಿ ವಿಮಾನ‌ ನಿಲ್ದಾಣವು ಇದ್ದರೂ ಸಹ ಆ ಕಂಪನಿಯವರು ಉಡಾನ್ ಯೋಜನೆಗೆ ವಿಮಾನಗಳು ಹಾರಾಟ ಮಾಡಲು ಅನುಮತಿ ನೀಡುತ್ತಿಲ್ಲ.‌ ಇದರಿಂದಾಗಿ ಉಡಾನ್ ಯೋಜನೆ ಕೊಪ್ಪಳ ಜಿಲ್ಲೆಯ ಜನತೆಗೆ ಗಗನ ಕುಸುಮವಾಗಿದೆ. ಇನ್ನು ಈಗಾಗಲೇ ರಾಜ್ಯ ಸರಕಾರ ಕೊಪ್ಪಳ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯ ಕುರಿತಂತೆ ಎರಡು ಬಾರಿ ಅಧಿಕಾರಿಗಳ ನಿಯೋಗ ಕಳುಹಿಸಿದ್ದು, ಅವರು ವಿಮಾನ‌ ನಿಲ್ದಾಣ ಸ್ಥಾಪನೆ ಕುರಿತಂತೆ ಕೆಲವೆಡೆ ಭೂಮಿಯನ್ನು ಸಹ ವೀಕ್ಷಣೆ ಮಾಡಿಕೊಂಡು ಹೋಗಿದ್ದಾರೆ. 

ಆದರೆ ವಿಮಾನ ನಿಲ್ದಾಣ ಮಾಡಲು ಭೂಮಿಯ ಸಮಸ್ಯೆಯಿಂದ ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗಂಗಾವತಿ ತಾಲೂಕಿನ ಮರಳಿಯಲ್ಲಿ ಸರಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆಯೊಂದರ 290 ಎಕರೆ ಭೂಮಿ ಇದೆ. ಈ ಹಿನ್ನಲೆಯಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಆರಂಭಿಸಲು ಯಾವುದೇ ಭೂಸ್ವಾಧೀನ ಸಮಸ್ಯೆ ಬರುವುದಿಲ್ಲ. ಹೀಗಾಗಿ ಮರಳಿಯಲ್ಲಿಯೇ ವಿಮಾನ ನಿಲ್ದಾಣ ಆಭವಾಗಲಿ ಎನ್ನವುದು ಸ್ಥಳೀಯ ಒತ್ತಾವಾಗಿದ್ದು, ಈ ಕುರಿತು ಸಾಮಾಜಿಕ‌ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ.

ಮರಳಿಯಲ್ಲಿ ವಿಮಾನ ನಿಲ್ದಾಣದಿಂದ ಏನೇಲ್ಲ ಅನುಕೂಲಗಳು: ಇನ್ನು ನಾವು ಮೊದಲೇ ಹೇಳಿದಂತೆ ಗಂಗಾವತಿ ತಾಲೂಕು ಸಂಪದ್ಭರಿತ ಹಾಗೂ ಐತಿಹಾಸಿಕವಾಗಿ, ಪೌರಾಣಿಕವಾಗಿ ಬಹಳಷ್ಟು ಪ್ರಸಿದ್ಧಿ ಪಡೆದ ತಾಲೂಕು ಆಗಿದೆ.

ಪಠ್ಯಪುಸ್ತಕ ಪರಿಷ್ಕರಣೆ ಮೂಲಕ ಶಿಕ್ಷಣವನ್ನೇ ಬುಡಮೇಲು ಮಾಡಲಾಗಿದೆಯೇ?

ಜೊತೆಗೆ ಸಿಂಧನೂರು, ಕಾರಟಗಿ, ಕನಕಗಿರಿ ಸಿರುಗುಪ್ಪ, ಕಂಪ್ಲಿ, ಹೊಸಪೇಟೆ, ಬಳ್ಳಾರಿ, ಕೊಪ್ಪಳ, ಯಲಬುರ್ಗಾ, ಕುಷ್ಟಗಿ ಹತ್ತಿರ ಆಗುತ್ತವೆ. ಇನ್ನು ಮುಂದುವರೆದಂತೆ ಐತಿಹಾಸಿಕ ಸ್ಥಳಗಳಾದ ಅಂಜನಾದ್ರಿ ಬೆಟ್ಟ, ಪಂಪಾ ಸರೋವರ, ದುರ್ಗಾ ದೇವಿ ಬೆಟ್ಟ ಯಹಂಪಿ, ಮೌರ್ಯರ ಬೆಟ್ಟ, ಕುಮ್ಮಟ ದುರ್ಗ, ಆನೆಗುಂದಿ ನವ ಬೃಂದಾವನ, ಕನಕಗಿರಿ, ತುಂಗಭದ್ರ ಡ್ಯಾಂ ಮತ್ತು ಗಂಗಾವತಿ ಭಾಗದ ನದಿ, ಹಸಿರು ಪರಿಸರ ಸ್ನೇಹಿ ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ಗಂಗಾವತಿ ಭತ್ತದ ಕಣಜ ಈ ಭಾಗ ಹೊಂದಿದೆ. ಆಗಾಗಿ ಗಂಗಾವತಿಯಲ್ಲಿ ವಿಮಾನ ನಿಲ್ದಾಣ ಸೂಕ್ತ ಸ್ಥಳ ಎಂಬುದು ಸ್ಥಳೀಯರ ಮಾತಾಗಿದೆ.

ಒಟ್ಟಿನಲ್ಲಿ ಸರಕಾರದ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಜೊತೆಗೆ ಸಂಪನ್ಮೂಲ ಕೊರತೆಯಿಂದ ಕೊಪ್ಪಳದಲ್ಲಿ ಕಲೇದ ನಾಲ್ಕೈದು ವರ್ಷಗಳಿಂದ ವಿಮಾನ‌ ನಿಲ್ದಾಣ ಯೋಜನೆಯ ಕನಸು ನನಸಾಗದೆ ಹಾಗೆಯೇ ಉಳಿದಿದೆ. ‌ಇನ್ನು ಸರಕಾರ ಭೂ ಸ್ವಾಧೀನಕ್ಕೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡುವ ಬದಲು ಇದ್ದ ಸರಕಾರಿ ಭೂಮಿಯಲ್ಲಿಯೇ ವಿಮಾನ ನಿಲ್ದಾಣ ಮಾಡುವುದು ಸೂಕ್ತ ಎನ್ನುವುದು ಕೆಲವರ ಮಾತು. ಒಟ್ಟಿನಲ್ಲಿ ಸರಕಾರ ಕೊಪ್ಪಳದಲ್ಲಿ ವಿಮಾನ ನಿಲ್ದಾಣ ಮಾಡುತ್ತಾ ಅಥವಾ ಗಂಗಾವತಿಯಲ್ಲಿ ಮಾಡುತ್ತಾ ಕಾದುನೋಡಬೇಕಿದೆ.

click me!