ಹೆಸ್ಕಾಂ ಸಿಬ್ಬಂದಿಗೆ ಗ್ರಾಮದೊಳಗೆ ಬಹಿಷ್ಕಾರ; ಶಿಡೇನೂರು ಗ್ರಾಮಸ್ಥರಿಂದ ಎಚ್ಚರಿಕೆ ಬ್ಯಾನರ್!

By Kannadaprabha NewsFirst Published Jun 18, 2023, 1:05 PM IST
Highlights

ಮೊದಲಿನಂತೆ ವಿದ್ಯುತ್‌ ದರ ಆಗುವರೆಗೂ ನಮ್ಮ ಗ್ರಾಮಕ್ಕೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಬಿಲ್‌ ವಸೂಲಿ ಮಾಡಲು ಬರುವಂತಿಲ್ಲ. ನಿಮಗೆ ನಮ್ಮಿಂದ ಬಹಿಷ್ಕಾರ.....

ಬ್ಯಾಡಗಿ (ಜೂ.18) ಮೊದಲಿನಂತೆ ವಿದ್ಯುತ್‌ ದರ ಆಗುವರೆಗೂ ನಮ್ಮ ಗ್ರಾಮಕ್ಕೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಬಿಲ್‌ ವಸೂಲಿ ಮಾಡಲು ಬರುವಂತಿಲ್ಲ. ನಿಮಗೆ ನಮ್ಮಿಂದ ಬಹಿಷ್ಕಾರ.....

ಈ ರೀತಿ ಬ್ಯಾನರ್‌ ಕಟ್ಟಿಹೆಸ್ಕಾಂ ಸಿಬ್ಬಂದಿಗೆ ಗ್ರಾಮದೊಳಗೆ ಪ್ರವೇಶವಿಲ್ಲ ಎಂದು ತಾಲೂಕಿನ ಶಿಡೇನೂರು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ದಿಢೀರ್‌ ವಿದ್ಯುತ್‌ ದರ ಏರಿಕೆಯಿಂದ ರೊಚ್ಚಿಗೆದ್ದಿರುವ ಗ್ರಾಮಸ್ಥರು ನಾವು ಬಿಲ್‌ ಕಟ್ಟುವುದಿಲ್ಲ. ಮೀಟರ್‌ ರೀಡರ್‌ಗಳನ್ನು ಗ್ರಾಮದೊಳಗೆ ಬಿಟ್ಟುಕೊಳ್ಳುವುದಿಲ್ಲ ಎಂದು ಸಂದೇಶ ನೀಡಿದ್ದಾರೆ.

ಈ ವೇಳೆ ಮಾತನಾಡಿದ ರೈತ ಸಂಘದ ಕಾರ್ಯಾಧ್ಯಕ್ಷ ಕಿರಣ ಗಡಿಗೋಳ, ಪ್ರತಿ ಮೀಟರ್‌ಗೆ ಪ್ರತಿ ತಿಂಗಳಿಗೆ 200 ಯುನಿಟ್‌ ಉಚಿತವೆಂದು ಘೋಷಿಸಿದ ಬೆನ್ನಲ್ಲೇ ವಿದ್ಯುತ್‌ ನಿಗಮ ಏಕಾಏಕಿ ಎಲ್ಲ ಗ್ರಾಹಕರಿಗೂ ಮೊದಲಿಗಿಂತ ಎರಡು ಪಟ್ಟು ಹೆಚ್ಚು ಬಿಲ್‌ ನೀಡಿದೆ. ತಕ್ಷಣ ಇಳಿಸಬೇಕು. ಅಲ್ಲಿಯ ವರೆಗೂ ವಿದ್ಯುತ್‌ ಬಿಲ್‌ ಕಟ್ಟುವುದಿಲ್ಲ ಮತ್ತು ಮೀಟರ್‌ ರೀಡರ್‌ಗಳನ್ನು ಗ್ರಾಮದಲ್ಲಿ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ರಾತ್ರಿಯಿಡೀ ಎದ್ದು, ಬಿದ್ದು ಹೋರಾಡಿ ಗೆದ್ದು ಬಾ ಗೆಳೆಯಾ, ಸ್ನೇಹಿತರ ಫಸ್ಟ್ ನೈಟ್ ವಿಶ್‌ ಬ್ಯಾನರ್ ವೈರಲ್‌

ನಾಗಪ್ಪ ಬಾವಿಕಟ್ಟಿಮಾತನಾಡಿ, ವಿದ್ಯುತ್‌ ದರದಲ್ಲಿ ದಿಢೀರ್‌ ಏರಿಕೆಗೆ ವಿರೋಧಿಸುತ್ತಿರುವುದು ಯಾವುದೇ ಕಾರಣಕ್ಕೂ ರಾಜಕೀಯ ದೃಷ್ಟಿಯಿಂದ ಪರಿಗಣಿಸಬೇಡಿ. ಕೋವಿಡ್‌, ಅತಿವೃಷ್ಟಿ, ಅನಾವೃಷ್ಟಿ, ಬೆಲೆ ಏರಿಕೆಯಿಂದ ರೈತರು, ಕೂಲಿಕಾರ್ಮಿಕರು ಕಂಗಾಲಾಗಿದ್ದಾರೆ. ಪ್ರಸಕ್ತ ತಿಂಗಳ ಬಿಲ್‌ ನೋಡಿ ಜನ ಸಾಮಾನ್ಯರು ದಂಗಾ ಗಿದ್ದಾರೆ. ನಿಗದಿತ ಶುಲ್ಕ, ವಿದ್ಯುತ್‌ ದರ, ಇಂಧನ ಹೊಂದಾಣಿಕೆ ಶುಲ್ಕ ಹೆಸರಿನಲ್ಲಿ ಏರಿಕೆ ಮಾಡಿರುವ ವಿದ್ಯುತ್‌ ಶುಲ್ಕಗಳು ಸಂಕಷ್ಟದಲ್ಲಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ತಕ್ಷಣವೇ ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಬ್ಯಾಡಗಿಗೆ ಆಗಮಿಸಿದ ಗ್ರಾಮಸ್ಥರು ತಹಸೀಲ್ದಾರ್‌ ಮೂಲಕ ಹೆಸ್ಕಾಂ ಎಂಡಿ ಹಾಗೂ ರಾಜ್ಯ ಸರ್ಕಾರಕ್ಕೆ ಲಿಖಿತ ಮನವಿ ಸಲ್ಲಿಸಿದರು.

ಎಮ್ಮೆಲ್ಲೆ ಬಸನಗೌಡ ಹೇಳ್ಯಾರಾ, ಕರೆಂಟ್‌ ಬಿಲ್‌ ಕಟ್ಟಂಗಿಲ್ಲ, ಏನ್ಮಾಡ್ತಿರಾ ಮಾಡ್ಕೊಳ್ಳಿ

ಈ ವೇಳೆ ಎಸ್‌.ಬಿ. ಒಡೆಯನಪುರ, ಬಿ.ಎಂ. ಮಳ್ಳಳ್ಳಿ, ಕೆ.ಜಿ. ಮಳ್ಳಪ್ಪನವರ, ಈರಪ್ಪ ಬಿದರಿ, ಬಸಪ್ಪ ಮಾಸಣಗಿ, ಶಿದ್ದನಗೌಡ ಪಾಟೀಲ, ಗುಡ್ಡಪ್ಪ ಕಳಕನವರ, ಈರಪ್ಪ ಬಣಕಾರ, ಈರನಗೌಡ ತೆವರಿ, ನಾಗಪ್ಪ ತೆವರಿ, ಗೋಪಾಲಪ್ಪ ಪೂಜಾರ, ಬಿ.ಎಂ. ಹುಲ್ಲತ್ತಿ ಸೇರಿದಂತೆ ಇನ್ನಿತರರಿದ್ದರು.

click me!