ನಿರಂತರ ಯೋಗ, ಧ್ಯಾನಭ್ಯಾಸದಿಂದ ಮಾನಸಿಕವಾಗಿ ಆರೋಗ್ಯವಾಗಿರಲು ಸಾಧ್ಯ ಎಂದು ತುಮಕೂರು ಜಿಲ್ಲಾ ಆರೋಗ್ಯ ಭಾರತಿ ಅಧ್ಯಕ್ಷ ಡಾ. ಚಿನ್ಮಯ್ ಕುಲಕರ್ಣಿ ಹೇಳಿದರು.
ತುಮಕೂರು : ನಿರಂತರ ಯೋಗ, ಧ್ಯಾನಭ್ಯಾಸದಿಂದ ಮಾನಸಿಕವಾಗಿ ಆರೋಗ್ಯವಾಗಿರಲು ಸಾಧ್ಯ ಎಂದು ತುಮಕೂರು ಜಿಲ್ಲಾ ಆರೋಗ್ಯ ಭಾರತಿ ಅಧ್ಯಕ್ಷ ಡಾ. ಚಿನ್ಮಯ್ ಕುಲಕರ್ಣಿ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ಘಟಕ ಹಾಗೂ ಎನ್‌ಎಸ್‌ಎಸ್ ಘಟಕ ಆರೋಗ್ಯ ಭಾರತಿ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಒತ್ತಡ ಹಾಗೂ ಆರೋಗ್ಯ ನಿರ್ವಹಣೆಯಲ್ಲಿ ಯೋಗದ ಪಾತ್ರದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
undefined
ದೈಹಿಕವಾಗಿ ಮಾನಸಿಕವಾಗಿ ಸದೃಢರಾಗಿದ್ದರೆ ಸಾಲದು, ಸಾಮಾಜಿಕವಾಗಿಯೂ ಸದೃಢರಾಗಿರಬೇಕು. ಮುಖ್ಯವಾಗಿ ನಮ್ಮ ಸುತ್ತಲೂ ಒಳ್ಳೆಯ ವಾತಾವರಣವನ್ನು ನಿರ್ಮಾಣ ಮಾಡಬೇಕು. ಅದಕ್ಕೆ ಯೋಗ ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ತುಮಕೂರು ವಿವಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಕಾಶ್ ಎಂ.ಶೇಠ್ ಮಾತನಾಡಿ, ಒತ್ತಡ ಮತ್ತು ಆರೋಗ್ಯ ನಿರ್ವಹಣೆಯಲ್ಲಿ ಯೋಗದ ಪಾತ್ರ ತುಂಬಾ ಮುಖ್ಯವಾಗಿದೆ. ಯೋಗ ಭಾರತೀಯ ಮೂಲದ ಆರೋಗ್ಯದ ಒಂದು ಸೂತ್ರ. ಮನುಷ್ಯ ಅರೋಗ್ಯವಾಗಿರಬೇಕೆಂದರೆ ಪ್ರತಿ ನಿತ್ಯಯೋಗಾಭ್ಯಾಸ ಮಾಡಬೇಕೆಂದು ಹೇಳಿದರು.
ಅಶ್ವಿನಿ ಆಯುರ್ವೇದ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಸ್ವಾತಿ ಬಿ.ಆರ್.‘ಒತ್ತಡ ಹಾಗೂ ಆರೋಗ್ಯ ನಿರ್ವಹಣೆಯಲ್ಲಿ ಯೋಗದ ಪಾತ್ರ’ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ತುಮಕೂರು ವಿವಿ ಯುವ ರೆಡ್‌ಕ್ರಾಸ್ ಘಟಕದ ಸಮನ್ವಯಾಧಿಕಾರಿ ಡಾ. ಪೂರ್ಣಿಮಾ ಡಿ.,ತುಮಕೂರು ಆರೋಗ್ಯ ಭಾರತಿ ವಿಭಾಗದ ಸಂಯೋಜಕ ವೈದ್ಯ ಅರವಿಂದ್, ವಿ.ವಿ. ವಿಜ್ಞಾನ ಕಾಲೇಜಿನ ಎನ್‌ಎಸ್‌ಎಸ್ ಘಟಕ ಸಂಯೋಜಕ ಡಾ. ಚಿಕ್ಕಪ್ಪ ಉಡುಗಣಿ ಭಾಗವಹಿಸಿದ್ದರು.
ಯೋಗ ದಿನಕ್ಕೆ ವರ್ಷದಿಂದ ವರ್ಷಕ್ಕೆ ಹೆಚ್ಚು ಉತ್ತಮ ಪ್ರತಿಕ್ರಿಯೆ
(ಅಸ್ಸಾಂ): ಅಂತಾರಾಷ್ಟ್ರೀಯ ಯೋಗ ದಿನಕ್ಕೆ ವರ್ಷದಿಂದ ವರ್ಷಕ್ಕೆ ಹೆಚ್ಚು ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ಜೂ.21ರಂದು ನಡೆಯಲಿರುವ ಈ ಸಲದ ಯೋಗ ದಿನಾಚರಣೆಯಲ್ಲಿ ವಿಶ್ವದಾದ್ಯಂತ 25 ಕೋಟಿ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಕೇಂದ್ರ ಆಯುಷ್ ಸಚಿವ ಸರ್ಬಾನಂದ ಸೋನೊವಾಲ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದ ಮುಖ್ಯ ಸಮಾರಂಭ ನ್ಯೂಯಾರ್ಕ್ ವಿಶ್ವಸಂಸ್ಥೆ ಕಚೇರಿಯಲ್ಲಿ ನಡೆಯಲಿದೆ. ಆ ಸಮಾರಂಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಖುದ್ದು ಹಾಜರಾಗಿ ಯೋಗ ಪ್ರದರ್ಶನ ಮಾಡಲಿದ್ದಾರೆ. ಭಾರತದ ಮುಖ್ಯ ಸಮಾರಂಭ ಜಬಲ್ಪುರದಲ್ಲಿ (Jabalpura) ನಡೆಯಲಿದೆ. ಅಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಪಾಲ್ಗೊಳ್ಳಲಿದ್ದಾರೆ ಎಂದು ಸಚಿವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
‘ವಸುಧೈವ ಕುಟುಂಬಕಂ’ (ವಿಶ್ವ ಒಂದೇ ಕುಟುಂಬ) ಎಂಬುದೇ ಯೋಗ ದಿನಾಚರಣೆಯ ಮೂಲ ಧ್ಯೇಯವಾಗಿದೆ. ಈ ಸಲ ವಿಶ್ವದ ವಿವಿಧ ಬಂದರುಗಳಲ್ಲಿ ಲಂಗರು ಹಾಕಿರುವ 9 ನೌಕಾಪಡೆ ಹಡಗಿನಲ್ಲಿ ‘ಓಷ್ಯನ್ ರಿಂಗ್ ಆಫ್ ಯೋಗ’ ಎಂಬ ವಿಶೇಷ ಪ್ರದರ್ಶನ ನಡೆಯಲಿದೆ. ‘ಯೋಗ ಭಾರತಮಾಲಾ’ ಪ್ರದರ್ಶನದಲ್ಲಿ ಭಾರತದ ಮೂರೂ ಸೇನಾಪಡೆ ಪಾಲ್ಗೊಳ್ಳಲಿವೆ. ‘ಯೋಗ ಸಾಗರಮಾಲಾ’ ಅಡಿ ಐಎನ್ಎಸ್ ವಿಕ್ರಾಂತ್ (INS Vikranth) ಯುದ್ಧನೌಕೆಯಲ್ಲಿ ಯೋಗ ಏರ್ಪಾಟಾಗಿದೆ. ಉತ್ತರ ಧ್ರುವ (North Pole) ಹಾಗೂ ದಕ್ಷಿಣ ಧ್ರುವದಲ್ಲೂ (South Pole) ಯೋಗ ದಿನ ನಡೆಯಲಿದೆ. ಎಲ್ಲ ಗ್ರಾಮ ಪ್ರಧಾನರಿಗೂ ಪ್ರಧಾನಿ ಮೋದಿ ಪತ್ರ ಬರೆದು ಯೋಗ ದಿನವನ್ನು ಗ್ರಾಮಗಳ ಶಾಲೆ, ಆಸ್ಪತ್ರೆ, ಅಂಗನವಾಡಿ ಕೇಂದ್ರಗಳಲ್ಲಿ ಉತ್ತೇಜಿಸಲು ಕರೆ ನೀಡಿದ್ದಾರೆ.