ಶಿವಮೊಗ್ಗ: ಏಕ್ ದಿನ್ ಕಾ ಇನ್ಸ್‌ಪೆಕ್ಟರ್‌ ಆದ ಬಾಲಕ, ಮಗುವಿನ ಆಸೆ ಪೂರೈಸಿದ ಪೊಲೀಸರು..!

By Girish Goudar  |  First Published Aug 17, 2023, 3:00 AM IST

ಇದು ಬಾಲಕನೊಬ್ಬ ಇನ್ಸ್‌ಪೆಕ್ಟರ್‌ ಆಗಿ ಪೊಲೀಸ್ ಕರ್ತವ್ಯ ನಿರ್ವಹಿಸಿದ ಸಿನಿಮಾ ರೀತಿಯ ರಿಯಲ್ ಕಥೆ.‌ ಕೇವಲ ಒಂದು ಗಂಟೆಯ ಸಮಯಕ್ಕೆ ಮಾತ್ರ ಸಾಂಕೇತಿಕವಾಗಿ ಇನ್ಸ್‌ಪೆಕ್ಟರ್‌ ಕುರ್ಚಿಯನ್ನು ಅಲಂಕರಿಸಿದ. ಪೊಲೀಸ್ ಸಿಬ್ಬಂದಿಗಳಿಗೆ ಯೋಗಕ್ಷೇಮ ವಿಚಾರಿಸಿ ರಜೆ ಮಂಜೂರು ಮಾಡಿದ. ಕಳ್ಳ ಕಾಕರಿಗೆ ಆವಾಜ್ ಹಾಕಿ ಕಳ್ಳತನ ಬಿಟ್ಟು ಕೆಲಸ ಮಾಡಿ ಎಂದು ಸಲಹೆ ನೀಡಿದ ಬಾಲಕ ಇನ್ಸ್‌ಪೆಕ್ಟರ್‌.


ಶಿವಮೊಗ್ಗ(ಆ.17): ಇದು ಶಿವಮೊಗ್ಗ ಜಿಲ್ಲೆಯ ಪೊಲೀಸ್ ಇಲಾಖೆಯ ಮಾನವೀಯತೆಗೆ ಸಾಕ್ಷಿಯಾದ ರಿಯಲ್ ಸ್ಟೋರಿ...!! ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿನ ಆಸೆಯನ್ನು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳು ಪೂರೈಸಿದ್ದಾರೆ.  ಇದು ಬಾಲಕನೊಬ್ಬ ಇನ್ಸ್‌ಪೆಕ್ಟರ್‌ ಆಗಿ ಪೊಲೀಸ್ ಕರ್ತವ್ಯ ನಿರ್ವಹಿಸಿದ ಸಿನಿಮಾ ರೀತಿಯ ರಿಯಲ್ ಕಥೆ.‌ ಕೇವಲ ಒಂದು ಗಂಟೆಯ ಸಮಯಕ್ಕೆ ಮಾತ್ರ ಸಾಂಕೇತಿಕವಾಗಿ ಇನ್ಸ್‌ಪೆಕ್ಟರ್‌ ಕುರ್ಚಿಯನ್ನು ಅಲಂಕರಿಸಿದ. ಪೊಲೀಸ್ ಸಿಬ್ಬಂದಿಗಳಿಗೆ ಯೋಗಕ್ಷೇಮ ವಿಚಾರಿಸಿ ರಜೆ ಮಂಜೂರು ಮಾಡಿದ. ಕಳ್ಳ ಕಾಕರಿಗೆ ಆವಾಜ್ ಹಾಕಿ ಕಳ್ಳತನ ಬಿಟ್ಟು ಕೆಲಸ ಮಾಡಿ ಎಂದು ಸಲಹೆ ನೀಡಿದ ಬಾಲಕ ಇನ್ಸ್‌ಪೆಕ್ಟರ್‌.

ಹೌದು ಇದು ಶಿವಮೊಗ್ಗದ ದೊಡ್ಡಪೇಟೆ ಠಾಣೆಯ ಇನ್ಸ್‌ಪೆಕ್ಟರ್‌ ಆದ ಎಂಟೂವರೆ  ವರ್ಷದ ಬಾಲಕ ಅಜಾನ್ ಖಾನ್ ಸಿನಿಮಾ ರೀತಿಯ ಕಥೆ. ಶಿವಮೊಗ್ಗ ಹೊರವಲಯದ ಸೂಳೇ ಬೈಲು ಬಡಾವಣೆಯ ಬಾಲಕ ಆಜಾನ್ ಖಾನ್ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ. ಹೃದಯ ಸಂಬಂಧಿ ಕಾಯಿಲೆಯಿಂದಾಗಿ ಬಳಲುತ್ತಿದ್ದ ಈ ಬಾಲಕನಿಗೆ ತಾನು ಪೊಲೀಸ್ ಅಧಿಕಾರಿಯಾಗಬೇಕೆಂಬ ಇಚ್ಛೆ ಇತ್ತು. ಬಾಲಕನ ಮತ್ತು ಆತನ ಪೋಷಕರ ಕೋರಿಕೆ ಮೇರೆಗೆ ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ಅವರು ಆಯಾಜ್ ಖಾನ್ ನನ್ನು ಒಂದು ಗಂಟೆ ಮಟ್ಟಿಗೆ ಇನ್ಸ್‌ಪೆಕ್ಟರ್‌ ಮಾಡಿದ್ದರು. 

Tap to resize

Latest Videos

ಶಿವಮೊಗ್ಗ: ತನ್ನ ಹುಟ್ಟುಹಬ್ಬದಂದು ಕಿಚ್ಚ ಸುದೀಪ್, ತಂದೆ-ತಾಯಿಗೆ ವಿಶಿಷ್ಟ ಉಡುಗೊರೆ ನೀಡಿದ ಯುವಕ..!

ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಗೆ ಪೊಲೀಸ್ ಅಧಿಕಾರಿಯ ಸಮವಸ್ತ್ರವನ್ನು ಧರಿಸಿ ಬಂದಬಾಲಕ ಆಜಾನ್ ಖಾನ್ ನಿಗೆ ಎಸ್ ಪಿ ಮಿಥುನ್ ಕುಮಾರ್ ಖುದ್ದು ಹಾಜರಿದ್ದು ಪೊಲೀಸ್ ನಿರೀಕ್ಷಕರ ಹುದ್ದೆಯನ್ನು ಸಾಂಕೇತಿಕವಾಗಿ ಅಲಂಕರಿಸಲು ಅವಕಾಶ ಮಾಡಿ ಕೊಡಲಾಯಿತು. ಪೊಲೀಸ್ ಅಧಿಕಾರಿಯ ಸಮವಸ್ತ್ರ ಧರಿಸಿ ಠಾಣೆಗೆ ಬಂದ ಬಾಲಕ ಆಜಾನ್ ಖಾನ್ ಮೊದಲು ಎಸ್ ಪಿ ಯವರಿಗೆ ಸೆಲ್ಯೂಟ್ ಮಾಡಿದ. ನಂತರ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿ ಪೊಲೀಸ್ ಅಧಿಕಾರಿಯ ಚೇರ್ ನಲ್ಲಿ ಕುಳಿತಠಾಣೆಯ ಪೊಲೀಸ್ ಸಿಬ್ಬಂದಿಗಳಿಗೆ  ಬ್ರೀಫಿಂಗ್ ಮಾಡಿ ಅವರ ಕರ್ತವ್ಯ ತಿಳಿಸಿದ. ಸಿಬ್ಬಂದಿಗಿ ರಜೆಯನ್ನು ಮಂಜೂರು ಮಾಡಿ ಕಳ್ಳನಿಗೆ ಬುದ್ಧಿ ಹೇಳಿದ.  

ಒಂದು ಗಂಟೆ ಕಾಲ ಆಜಾನ್‌ ಖಾನ್‌ ದೊಡ್ಡಪೇಟೆ ಠಾನೆ ಇನ್ಸ್‌ಪೆಕ್ಟರ್‌ ಆಗಿ ಕರ್ತವ್ಯ ನಿಭಾಯಿಸಿದ  ಮಗನ ಆಸೆಯನ್ನು ಈಡೇರಿಸಿದ ಖುಷಿ ತಂದೆ ತಬ್ರೇಜ್‌ ಖಾನ್‌  ಹಾಗೂ ತಾಯಿ ನಗ್ಮಾ ಖಾನ್ ಗಾಗಿತ್ತು. ನನ್ನ ಮಗನಿಗೆ ಹುಟ್ಟಿನಿಂದ ಹೃದಯ ಸಂಬಂಧಿ ಕಾಯಿಲೆ ಇದೆ. ಎಷ್ಟೋ ಲಕ್ಷ ಮಕ್ಕಳಲ್ಲಿ ಒಬ್ಬರಿಗೆ ಇಂತಹ ಕಾಯಿಲೆ ಬರಲಿದೆಯಂತೆ.  ಆತನ ಹೃದಯ ಬೆಳೆದಿಲ್ಲ. ವೈದ್ಯರು, ತಜ್ಞರ ಬಳಿ ತೋರಿಸಿದಾಗ ಶಸ್ತ್ರಚಿಕಿತ್ಸೆ ಮಾಡಲು ಆಗುವುದಿಲ್ಲ. ಹೃದಯ ಮತ್ತು ಶಾಸ್ವಕೋಶದ ಕಸಿ ಮಾಡಬೇಕು ಎಂದಿದ್ದಾರೆ. ಆತನಿಗೆ ಪೊಲೀಸ್‌ ಆಗಬೇಕು ಅನ್ನುವ ಆಸೆಯನ್ನು ಪೂರೈಸಿದ್ದೇನೆ ಎಂದರು. 

ಈಗಾಗಲೇ ಚಿತ್ರನಟ ಕಿಚ್ಚ ಸುದೀಪ್ ಹಾಗೂ ರಿಷಬ್ ಶೆಟ್ಟಿ ರನ್ನು ನೋಡುವ ಆಸೆ ವ್ಯಕ್ತಪಡಿಸಿದ್ದ ಮಗನಿಗೆ ನಟರನ್ನು ಭೇಟಿ ಮಾಡಿಸಿ ಆಸೆ ಈಡೇರಿಸಿದ್ದರು. ಇದೀಗ ಪೊಲೀಸ್ ಆಫೀಸರ್ ಆಗುವ ಆಸೆಯನ್ನು ಪೋಷಕರು ಶಿವಮೊಗ್ಗ ಎಸ್‌ಪಿ ನೆರವಿನೊಂದಿಗೆ ಈಡೇರಿಸಿದ್ದಾರೆ

ಯತ್ನಾಳ್‌ ಬಸ್‌ಸ್ಟ್ಯಾಂಡ್‌ನಲ್ಲಿ ಗಿಣಿಶಾಸ್ತ್ರ ಹೇಳಲಿ: ಸಚಿವ ಮಧು ತಿರುಗೇಟು

ಬಾಲಕನಿಗೆ ತಮ್ಮ ಇನ್ಸ್‌ಪೆಕ್ಟರ್‌ ಹುದ್ದೆಯ ಜವಾಬ್ದಾರಿಯನ್ನು ಕೊಟ್ಟ ದೊಡ್ಡಪೇಟೆಯ ಇನ್ಸ್ಪೆಕ್ಟರ್ ಅಂಜನ್ ಕುಮಾರ್ ಮಾನವೀಯ ನೆಲೆಯಲ್ಲಿ ಆ ಮಗುವನ್ನು ಒಂದು ಗಂಟೆ ಇನ್ಸ್‌ಪೆಕ್ಟರ್‌ ಮಾಡುತ್ತೇವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದರು. ಬಹಳ ಖುಷಿಯಿಂದ ಒಂದು ಗಂಟೆ ಕಾಲ ಆ ಮಗುವಿನ ನನ್ನ ಸ್ಥಾನ ಬಿಟ್ಟುಕೊಟ್ಟಿದ್ದೇನೆ. ಠಾಣೆಯ ಸಿಬ್ಬಂದಿಯನ್ನು ಕರೆದು ರೋಲ್‌ ಕಾಲ್‌ ಮಾಡಿದ. ಒಬ್ಬ ಸಿಬ್ಬಂದಿ ಒಂದು ದಿನ ರಜೆ ಕೇಳಿದರೆ ಎರಡು ದಿನ ರಜೆಯನ್ನು ಕೊಟ್ಟಿದ್ದಾನೆ. ಮಗುವಿನ ಖುಷಿ ಕಂಡು ನಮಗೆ ಖುಷಿಯಾಯಿತು ಎಂದಿದ್ದಾರೆ

ಒಟ್ಟಿನಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿದ್ದಕ್ಕೆ ಬಾಲಕ ಖುಷಿ ಪಟ್ಟರೆ ಮಗನ ಆಸೆ ಈಡೇರಿಸಿದ ಸಮಾಧಾನ ಪೋಷಕರಲ್ಲಿತ್ತು. ಮಾನವೀಯ ನೆಲೆಯಲ್ಲಿ ಬಾಲಕನನ್ನು ಇನ್ಸ್‌ಪೆಕ್ಟರ್‌ ಮಾಡಿದ್ದೇವೆ. ಬಾಲಕ ತುಂಬ ಖುಷಿ ಪಟ್ಟ ವಿಶೇಷ ಸಂದರ್ಭಕ್ಕೆ ಜೊತೆಯಾದ ಧನ್ಯತೆ ಪೊಲೀಸರಲ್ಲಿತ್ತು. 

click me!