Congress guarantee scheme: ಗ್ಯಾರಂಟಿ ಯೋಜನೆ-ವಾಹನ ಮಾಲೀಕರಿಗೆ ತೆರಿಗೆ ಶಾಕ್‌

By Kannadaprabha News  |  First Published Aug 17, 2023, 1:33 PM IST

ಕಾಂಗ್ರೆಸ್‌ ಗ್ಯಾರಂಟಿಯ ಬಿಸಿ ಈಗ ಲಘು ಹಾಗೂ ಮಧ್ಯಮ ವಾಣಿಜ್ಯ ವಾಹನಗಳಿಗೂ ತಟ್ಟಿದೆ. ಜೀವಿತಾವಧಿ (ಪೂರ್ಣಾವಧಿ) ತೆರಿಗೆ ವಿಧಿಸುವ ಮೂಲಕ ಈ ವಾಹನಗಳ ಮಾಲೀಕರನ್ನು ಹಿಂಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.


ವಸಂತಕುಮಾರ ಕತಗಾಲ

ಕಾರವಾರ (ಆ.17) :  ಕಾಂಗ್ರೆಸ್‌ ಗ್ಯಾರಂಟಿಯ ಬಿಸಿ ಈಗ ಲಘು ಹಾಗೂ ಮಧ್ಯಮ ವಾಣಿಜ್ಯ ವಾಹನಗಳಿಗೂ ತಟ್ಟಿದೆ. ಜೀವಿತಾವಧಿ (ಪೂರ್ಣಾವಧಿ) ತೆರಿಗೆ ವಿಧಿಸುವ ಮೂಲಕ ಈ ವಾಹನಗಳ ಮಾಲೀಕರನ್ನು ಹಿಂಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.

Tap to resize

Latest Videos

undefined

ಸರ್ಕಾರದ ಈ ನಿರ್ಧಾರದಿಂದ ಲಘು ಹಾಗೂ ಮಧ್ಯಮ ವಾಣಿಜ್ಯ ವಾಹನಗಳ ಮಾಲೀಕರು ಕಂಗೆಟ್ಟಿದ್ದಾರೆ. 14-15 ವರ್ಷ ಬಳಸಿದ ವಾಹನಗಳಿಗೂ ಜೀವಿತಾವಧಿ ತೆರಿಗೆ ಕಟ್ಟಲೇಬೇಕಾದ ಸಂಕಷ್ಟಕ್ಕೆ ಒಳಗಾಗಿದ್ದಾರೆ.

'ಪವಿತ್ರ ಸೇವಾವೃತ್ತಿಯನ್ನು ವ್ಯಾಪಾರ ಮಾಡಿದ್ದೀರಿ' ವೈದ್ಯರಿಗೆ ಆರ್‌ವಿ ದೇಶಪಾಂಡೆ ಚಿಕಿತ್ಸೆ!

ಈ ಹಿಂದೆ ಲಘು ಮತ್ತು ಮಧ್ಯಮ ವಾಣಿಜ್ಯ ವಾಹನಗಳಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ತೆರಿಗೆ ಪಾವತಿಸಬೇಕಿತ್ತು. ಈ ಬಾರಿ ಮಂಡಿಸಿದ ಬಜೆಟ್‌ ನಲ್ಲಿ ಈ ವಾಹನಗಳಿಗೂ ಜೀವಿತಾವಧಿ ತೆರಿಗೆ ವಿಧಿಸಲಾಗಿದೆ. 1500 ಕಿ.ಗ್ರಾಂ.ನಿಂದ 12 ಸಾವಿರ ಕಿ.ಗ್ರಾಂ. ತನಕದ ಎಲ್ಲ ವಾಹನಗಳಿಗೂ ಜೀವಿತಾವಧಿ ತೆರಿಗೆ ವಿಧಿಸಲಾಗಿದೆ. 15-16 ವರ್ಷ ಸಂಚರಿಸಿದ ವಾಹನಗಳಿಗೂ . 45ರಿಂದ . 46 ಸಾವಿರ ಗಳಷ್ಟುಜೀವಿತಾವಧಿ ತೆರಿಗೆ ಭರಿಸಬೇಕು. ಇದು ಈ ವಾಹನ ಮಾಲೀಕರಿಗೆ ಭಾರಿ ಹೊರೆಯಾಗಿ ಪರಿಣಮಿಸಿದೆ. ವಾಹನಗಳು ಸಂಚಾರ ಆರಂಭಿಸಿದ ವರ್ಷ ಹಾಗೂ ಭಾರಕ್ಕೆ ತಕ್ಕಂತೆ ತೆರಿಗೆ ಮೌಲ್ಯವನ್ನು ನಿಗದಿ ಪಡಿಸಲಾಗಿದೆ. 14 ವರ್ಷ ಮೀರಿದ 15 ವರ್ಷದ ಒಳಗಿರುವ 9500-12000 ಕಿ.ಗ್ರಾಂ ಒಳಗಿನ ವಾಹನಕ್ಕೆ ವಾಹನಕ್ಕೆ ಜೀವಿತಾವಧಿ ತೆರಿಗೆ . 49 ಸಾವಿರ ನಿಗದಿ ಪಡಿಸಲಾಗಿದೆ.

ಕೇಂದ್ರ ಸರ್ಕಾರ 15 ವರ್ಷ ಮೀರಿದ ವಾಹನಗಳ ನಿಯಂತ್ರಣಕ್ಕೆ ಮುಂದಾಗಿದೆ. ಆದರೆ ರಾಜ್ಯ ಸರ್ಕಾರ 15 ವರ್ಷ ಮೀರಿದ ವಾಹನಗಳಿಗೂ ಜೀವಿತಾವಧಿ ತೆರಿಗೆ ವಿಧಿಸುವ ಮೂಲಕ ಅಂತಹ ವಾಹನಗಳನ್ನು ಮತ್ತೆ ದೀರ್ಘಕಾಲ ಬಳಸುವುದಕ್ಕೆ ಜೀವಿತಾವಧಿ ತೆರಿಗೆ ವಿಧಿಸಿದೆ.

ಕಾಂಗ್ರೆಸ್‌ ಸರ್ಕಾರ ಮಹಿಳೆಯರಿಗೆ ಬಸ್‌ ಸಂಚಾರ ಫ್ರೀ, ಮನೆಯ ಯಜಮಾನಿಗೆ ಮಾಸಿಕ . 2 ಸಾವಿರ, ವಿದ್ಯುತ್‌ ಶುಲ್ಕ ಫ್ರೀ. ಅಕ್ಕಿ ನೀಡಿಕೆ, ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು ಹಣ ನೀಡಿಕೆಯಂತಹ ಗ್ಯಾರಂಟಿ ಘೋಷಿಸಿ ಅದಕ್ಕೆ ಹಣ ಹೊಂದಿಸಲು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ತೆರಿಗೆ ಭಾರ ಹಾಕುತ್ತಿದೆ. ಇದಕ್ಕೆ ಲಘು ಹಾಗೂ ಮಧ್ಯಮ ವಾಣಿಜ್ಯ ವಾಹನಗಳ ಮಾಲೀಕರು ಬಲಿಯಾಗುತ್ತಿದ್ದಾರೆ ಎಂದು ವಾಹನಗಳ ಮಾಲೀಕರು ಆರೋಪಿಸುತ್ತಿದ್ದಾರೆ.

ಫ್ರೀ ಬಸ್‌ ನಿಲ್ಲಲ್ಲ, ನಾನೇ ಗ್ಯಾರಂಟಿ: ಸಿಎಂ ಸಿದ್ದರಾಮಯ್ಯ

ಸರ್ಕಾರ ಪುಕ್ಕಟೆ ಭಾಗ್ಯ (ಗ್ಯಾರಂಟಿ) ನೀಡಲು ಲಘು ಹಾಗೂ ಮಧ್ಯಮ ವಾಣಿಜ್ಯ ವಾಹನಗಳಿಗೆ ಜೀವಿತಾವಧಿ ತೆರಿಗೆ ವಿಧಿಸುವ ಮೂಲಕ ಅವರ ಹೊಟ್ಟೆಯ ಮೇಲೆ ಬರೆ ಎಳೆದಿದೆ. ಸರ್ಕಾರದ ಈ ನೀತಿಯಿಂದಾಗಿ ಈ ವಾಹನಗಳ ಮಾಲೀಕರು ತತ್ತರಿಸಿ ಹೋಗಿದ್ದಾರೆ. ಕೂಡಲೇ ಈ ವಾಹನಗಳಿಗೆ ಜೀವಿತಾವಧಿ ತೆರಿಗೆ ವಿಧಿಸಿರುವುದನ್ನು ವಾಪಸ್‌ ಪಡೆಯಬೇಕು.

ವೆಂಕಟ್ರಮಣ ಹೆಗಡೆ ಕವಲಕ್ಕಿ ಶ್ರೀಕುಮಾರ ಸಾರಿಗೆ ಸಂಸ್ಥೆ ಮಾಲೀಕರು

click me!