Bengaluru ಪೊಲೀಸರೇ ನನ್ನ ಹೆಲ್ಮೆಟ್‌ ಕಳೆದೋಗಿದೆ: ಎಫ್‌ಐಆರ್‌ ದಾಖಲಿಸಿಕೊಂಡ ಪೊಲೀಸರು

By Sathish Kumar KHFirst Published Aug 17, 2023, 1:58 PM IST
Highlights

ಬೆಂಗಳೂರಿನಲ್ಲಿ ಯುವಕನೊಬ್ಬ ತನ್ನ ಹೆಲ್ಮೆಟ್‌ ಕಳೆದು ಹೋಗಿದೆ ಹುಡುಕಿಕೊಡಿ ಎಂದು ಗಿರಿನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ಬೆಂಗಳೂರು (ಆ.14): ಪೊಲೀಸರ ಬಳಿ ಕೊಲೆ, ದರೋಡೆ, ಅತ್ಯಾಚಾರ, ಕಳ್ಳತನ, ಜಾತಿನಿಂದನೆ ಸೇರಿ ವಿವಿಧ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿ ಎಫ್‌ಐಆರ್‌ ದಾಖಲಿಸುತ್ತಾರೆ. ಆದರೆ, ಇಲ್ಲೊಬ್ಬ ಯುವಕ ತನ್ನ ಹೆಲ್ಮೆಟ್‌ ಕಳೆದುಹೋಗಿದೆ ಹುಡುಕಿ ಕೊಡಿ ಎಂದು ಬೆಂಗಳೂರಿನ ಗಿರಿನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಹೆಲ್ಮೆಟ್ ಕಳ್ಳತನ ಆಗಿದೆ ಹುಡುಕಿಕೊಡಿ ಅಂತ ದೂರು ದಾಖಲಿಸಲಾಗಿದೆ. ಗಿರಿನಗರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲು ಮಾಡಲಾಗಿದೆ. ಬೈಕ್‌ ಸವಾರ ಸೂರ್ಯ ಎಂಬಾತ ದ್ವಾರಕನಗರದ ಜಯದುರ್ಗ ಜ್ಯೂಸ್ ಕುಡಿಯೋಕೆ ಅಂತ ಬೇಕರಿಗೆ ಹೋಗಿದ್ದನು. ಈ ವೇಳೆ 10 ಸಾವಿರ ಮೌಲ್ಯದ ಹೆಲ್ಮೆಟ್ ಅನ್ನು ಬೇಕರಿಯ ಬಳಿಯಿದ್ದ ಟೇಬಲ್ ಮೇಲೆ ಇಟ್ಟಿದ್ದನು. ಜ್ಯೂಸ್ ಕುಡಿದ ಬಳಿಕ ಹೆಲ್ಮೆಟ್ ಮರೆತು ಬಂದಿದ್ದಾನೆ. ಸ್ವಲ್ಪ ದೂರ ಬಂದ ಬಳಿಕ ಹೆಲ್ಮೆಟ್ ಇಲ್ಲದೆ ಇರೋದು ಗೊತ್ತಾಗಿದೆ. ಆಗ ಬಂದು ಬೇಕರಿ ಬಳಿ ನೋಡಿದಾಗ ಹೆಲ್ಮೆಟ್‌ ಕಳೆದು ಇಲ್ಲದಿರುವುದು ಗೊತ್ತಾಗಿದೆ.

ನಟ ಉಪೇಂದ್ರನಿಗೆ ಬಿಗ್‌ ರಿಲೀಫ್‌: ಹಲಸೂರು ಗೇಟ್‌ ಠಾಣೆಯ ಎಫ್‌ಐಆರ್‌ಗೂ ತಡೆಕೊಟ್ಟ ಹೈಕೋರ್ಟ್‌

ಇನ್ನು ಬೇಕರಿಗೆ ಬಂದವರು ಯಾರೋ ಚೆನ್ನಾಗಿರುವ ಹೆಲ್ಮೆಟ್‌ ಬಿಟ್ಟುಹೋಗಿದ್ದಾರೆಂದು ಅದನ್ನು ಎತ್ತಿಕೊಂಡು ಹೋಗಿದ್ದಾರೆ. ಇನ್ನು ಸ್ಥಳಕ್ಕೆ ಬಂದು ಹುಡುಕಾಡಿದರೂ ಹೆಲ್ಮೆಟ್‌ ಸಿಗದಿದ್ದಾಗ ಅಕ್ಕಪಕ್ಕದವರನ್ನು ಹಾಗೂ ಬೇಕರಿ ಮಾಲೀಕರ ಬಳಿ ವಿಚಾರಣೆ ಮಾಡಿದ್ದಾರೆ. ಈ ವೇಳೆ ಹಲ್ಮೆಟ್‌ ಯಾರು ತೆಗೆದುಕೊಂಡಿದ್ದಾರೆ ಎಂಬ ಸುಳಿವು ಸಿಕ್ಕಿಲ್ಲ. ನಂತರ ಯುವಕ ತನ್ನ ಹೆಲ್ಮೆಟ್ ಹುಡುಕಿಕೊಡಿ ಅಂತ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ. ಗಿರಿನಗರ ಪೊಲೀಸ್‌ ಠಾಣೆಗೆ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ. ಯುವಕನ ದೂರಿನನ್ವಯ ಪೊಲೀಸರು ಎಫ್ ಐ ಆರ್ ದಾಖಲಿಸಿ ಹೆಲ್ಮೆಟ್ ಹುಡುಕಾಟಕ್ಕೆ ಮುಂದಾಗಿದ್ದಾರೆ. 

ಇನ್ನು ಗಿರಿನಗರ ಪೊಲೀಸರು ಬಂದು ಬೇಕರಿಯಲ್ಲಿ ವಿಚಾರಣೆ ಮಾಡಿದ್ದಾನೆ. ನಂತರ, ಬೇಕರಿಯಲ್ಲಿ ಅಳವಡಿಸಿದ ಹಾಗೂ ಬೇಕರಿಯ ಅಕ್ಕಪಕ್ಕದಲ್ಲಿ ಅಳವಡಿಕೆ ಮಾಡಿರುವ ಸಿಸಿಟಿವಿ ಕ್ಯಾಮರಾಗಳ ವಿಡಿಯೋ ಫೂಟೇಜ್‌ ಅನ್ನು ಪರಿಶೀಲನೆ ಮಾಡುತ್ತಿದ್ದಾರೆ. ಯಾರು ಹೆಲ್ಮೆಟ್‌ ಕದ್ದಿದ್ದಾರೆ ಎಂಬ ಬಗ್ಗೆ ಮಾಹತಿ ಕಲೆ ಹಾಕುತ್ತಿದ್ದು, ಈವರೆಗೆ ಕಳ್ಳರ ಬಗ್ಗೆ ಸುಳಿವು ಸಿಕಿಲ್ಲ.

click me!