ಶಿವಮೊಗ್ಗ: ಡೆಂಘೀಗೆ ಬಾಲಕ ಬಲಿ

By Kannadaprabha NewsFirst Published Aug 7, 2019, 10:27 AM IST
Highlights

ಡೆಂಘೀ, ಮಲೇರಿಯಾ, ಚಿಕೂನ್ ಗುನ್ಯಾದಂತಹ ಸಾಂಕ್ರಾಮಿಕ ರೋಗಗಳು ಜನರನ್ನು ಕಂಗೆಡಿಸಿದೆ. ರಾಜ್ಯದಲ್ಲಿ ಹಲವೆಡೆ ಜನ ರೋಗ ಭೀತಿಯಲ್ಲಿದ್ದು, ಶಿವಮೊಗ್ಗದಲ್ಲಿ ಬಾಲಕನೊಬ್ಬ ಡೆಂಘೀ ಜ್ವರಕ್ಕೆ ಬಲಿಯಾಗಿದ್ದಾನೆ. ಜನರು ಸ್ವಚ್ಛತೆ ಕಾಪಾಡುವುದರೊಂದಿಗೆ ರೋಗಗಳ ಬಗ್ಗೆ ಮುಂಜಾಗೃತೆ ವಹಿಸಬೇಕಾಗಿದೆ.

ಶಿವಮೊಗ್ಗ(ಆ.07): ಸಾಗರ ಪಟ್ಟಣದ ಎಸ್‌.ಎನ್‌. ನಗರ ನಿವಾಸಿ ಇಲಿಯಾಜ್‌ ಅವರ ಪುತ್ರ ಮಹಮ್ಮದ್‌ ಅಜಾನ್‌(10) ಡೆಂಘೀ ಜ್ವರಕ್ಕೆ ಬಲಿಯಾಗಿದ್ದಾನೆ.

ಕಳೆದ ಒಂದು ವಾರದ ಹಿಂದೆ ವಿಪರೀತ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಾಲಕನನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೂ ಜ್ವರ ತೀವ್ರ ಉಲ್ಭಣಗೊಂಡಿದ್ದರಿಂದ ಪೋಷಕರು ಬಾಲಕನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಂಡ್ಯ: ಸಹೋದರಿಯರಿಗೆ ಡೆಂಘೀ, ಬಾಲಕಿ ಸಾವು

ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬಾಲಕ ಮೃತಪಟ್ಟಿದ್ದಾನೆ. ಡೆಂಘೀ ಜ್ವರದಿಂದಲೇ ಬಾಲಕ ಮೃತಪಟ್ಟಿರುವುದಾಗಿ ಆಸ್ಪತ್ರೆ ಮೂಲಗಳು ದೃಢಪಡಿಸಿವೆ. ಸಾಂಕ್ರಾಮಿಕ ರೋಗಗಳ ಬಗ್ಗೆ ಜನರು ಹೆಚ್ಚಿನ ಮುಂಜಾಗೃತೆ ವಹಿಸಿಕೊಳ್ಳಬೇಕಾಗಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!