ಹಳಿಯ ಮೇಲಿತ್ತು 3 ಅಡಿ ನೀರು: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿತು ರೈಲು ಅವಘಡ

Published : Aug 07, 2019, 10:14 AM IST
ಹಳಿಯ ಮೇಲಿತ್ತು 3 ಅಡಿ ನೀರು: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿತು ರೈಲು ಅವಘಡ

ಸಾರಾಂಶ

ಚಾಲಕನ ಸಮಯಪ್ರಜ್ಞೆಯಿಂದ ಸಂಭಾವ್ಯ ರೈಲು ಅವಘಡ ತಪ್ಪಿದೆ. ಕುಂದಾಪುರದ ಕೆದೂರು ಸಮೀಪ ರೈಲ್ವೇ ಹಳಿ ತುಂಬಾ ಮೂರ್ನಾಲ್ಕು ಅಡಿ ನೀರು ಹರಿಯುತ್ತಿತ್ತು. ಸಕಾಲದಲ್ಲಿ ಚಾಲಕ ಇದನ್ನು ಗಮನಿಸಿ ರೈಲು ನಿಲ್ಲಿಸಿದ್ದರಿಂದ ಭಾರೀ ಅವಘಡವೊಂದು ತಪ್ಪಿದೆ.

ಉಡುಪಿ(ಆ.07): ಚಾಲಕನ ಸಮಯಪ್ರಜ್ಞೆಯಿಂದ ಸಂಭಾವ್ಯ ರೈಲು ಅವಘಡ ತಪ್ಪಿದೆ. ಉಡುಪಿ ಜಿಲ್ಲೆ ಕುಂದಾಪುರದ ಕೆದೂರು ಸಮೀಪ ರೈಲ್ವೇ ಹಳಿ ತುಂಬಾ ಮೂರ್ನಾಲ್ಕು ಅಡಿ ನೀರು ಹರಿಯುತ್ತಿತ್ತು. ಅದೇ ವೇಳೆಯಲ್ಲಿ ಮುಂಬೈನಿಂದ ಮಂಗಳೂರಿಗೆ ರೈಲು ಸಾಗಬೇಕಾಗಿತ್ತು. ಕೆದೂರು ಬಳಿ ಹಳಿಯಲ್ಲಿ ಎಚ್ಚರಿಕೆ ವಹಿಸುವಂತೆ ಕುಂದಾಪುರ ರೈಲ್ವೇ ವಲಯದಿಂದ ಸೂಚನೆ ನೀಡಲಾಗಿತ್ತು.

ಮಳೆಯಲ್ಲೇ ಸಾಗಿ ಹಳಿ ಚೆಕ್ ಮಾಡಿದ್ರು:

ಸಕಾಲದಲ್ಲಿ ರೈಲ್ವೇ ಹಳಿಯಲ್ಲಿ ನೀರು ಕಂಡ ಚಾಲಕ ತಕ್ಷಣ ರೈಲು ನಿಲ್ಲಿಸಿ ಆ ಮಳೆಯಲ್ಲೇ ಕಿಲೋಮೀಟರ್ ದೂರ ನಡೆದು ಸಾಗಿ ರೈಲು ಹಳಿ ವೀಕ್ಷಣೆ ಮಾಡಿದ್ದಾರೆ. ನೀರು ತುಂಬಿರುವುದನ್ನು ಗಮನಿಸಿದ್ದಾನೆ. ತಕ್ಷಣವೇ ಕಂಟ್ರೋಲ್ ರೂಂ ಗೆ ಮಾಹಿತಿ ನೀಡಿದ್ದಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

20ನಿಮಿಷ ರೈಲು ನಿಲುಗಡೆ:

ಅಲ್ಲದೇ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ, ಭಯವಾಗದೆಂಬ ನಿಟ್ಟಿನಲ್ಲಿ ಸುಮಾರು 20 ನಿಮಿಷಗಳಷ್ಟು ಕಾಲ ರೈಲನ್ನು ನಿಲ್ಲಿಸಿ ಮಳೆ ನೀರು ಹತೋಟಿಗೆ ಬಂದ ಬಳಿಕ ರೈಲನ್ನು ಮಂಗಳೂರಿನತ್ತ ಚಲಾಯಿಸಿದ್ದಾರೆ.

ರೈಲಿನಲ್ಲಿದ್ದ ಸಾವಿರಾರು ಮಂದಿಯ ಪ್ರಾಣ ರಕ್ಷಣೆ ಹಿನ್ನೆಲೆ ಯಲ್ಲಿ ರೈಲು ಚಾಲಕ ತೋರಿದ ಸಮಯಪ್ರಜ್ಞೆ ರೈಲ್ವೇ ಇಲಾಖಾಧಿಕಾರಿಗಳು ಸೇರಿದಂತೆ ಸಾರ್ವಜನಿಕ ವಲಯದಲ್ಲಿಯೂ ಕೂಡ ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.

ತುಂಬಿ ಹರಿಯುತ್ತಿದ್ದಾಳೆ ತುಂಗೆ, ಪ್ರವಾಹ ಭೀತಿಯಲ್ಲಿ ಜನ

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC