Shivamogga: ಬೊಮ್ಮನ​ಕಟ್ಟೆ ಬಡಾ​ವಣೆ ರಸ್ತೆಗಳ ಅಧ್ವಾನ: ದಶಕಗಳಿಂದ ದುರುಸ್ತಿ ಮರೀಚಿಕೆ!

By Kannadaprabha NewsFirst Published Jan 20, 2023, 9:13 AM IST
Highlights

ಬೊಮ್ಮನಕಟ್ಟೆಬಡಾವಣೆಯ ಮುಖ್ಯ ರಸ್ತೆ ಸೇರಿದಂತೆ ಸಂಪರ್ಕ ರಸ್ತೆಗಳು ಹದಗೆಟ್ಟು ಗುಂಡಿಮಯವಾಗಿದ್ದು, ವಾಹನಗಳ ಸಂಚಾರವಿರಲೀ ಜನರು ನಡೆ​ದಾ​ಡ​ಲೂ ಕಷ್ಟವಾಗಿದೆ. ರೈಲ್ವೆ ಮೇಲ್ಸೇತುವೆಯಾಗಲಿ, ಕೆಳಸೇತುವೆಯಾಗಲಿ ಇನ್ನೂ ಆರಂಭವಾಗಿಲ್ಲ. ರೈಲ್ವೆ ಮೇಲ್ಸೇತುವೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ವಾಹನಗಳು ನಿಂತು ಟ್ರಾಫಿಕ್‌ ಜಾಮ್‌ ಆಗುತ್ತಿದೆ

ಶಿವಮೊಗ್ಗ (ಜ.20) : ಬೊಮ್ಮನಕಟ್ಟೆಬಡಾವಣೆಯ ಮುಖ್ಯ ರಸ್ತೆ ಸೇರಿದಂತೆ ಸಂಪರ್ಕ ರಸ್ತೆಗಳು ಹದಗೆಟ್ಟು ಗುಂಡಿಮಯವಾಗಿದ್ದು, ವಾಹನಗಳ ಸಂಚಾರವಿರಲೀ ಜನರು ನಡೆ​ದಾ​ಡ​ಲೂ ಕಷ್ಟವಾಗಿದೆ.

ನಗರದಲ್ಲಿ ವೇಗವಾಗಿ ಬೆಳೆಯುತ್ತಿರುವ ಬಡಾವಣೆಗಳಲ್ಲಿ ಪ್ರಮುಖವಾಗಿರುವ ಬೊಮ್ಮನಕಟ್ಟೆಬಡಾವಣೆಗೆ ಮೂಲ ಸೌಲಭ್ಯಗಳು ಇಲ್ಲದಿರುವುದು ಅತ್ಯಂತ ವಿಷಾದನೀಯ. ಈ ಬಡಾವಣೆಯ ಬಹುತೇಕ ರಸ್ತೆಗಳಲ್ಲಿ ಗುಂಡಿಗಳು ಸಾಮಾನ್ಯ ಎಂಬಂತಾ​ಗಿದೆ. ಸುಗಮ ಸಂಚಾರ ಕಷ್ಟ​ಸಾ​ಧ್ಯ​ವಾ​ಗಿದೆ. ಬೃಹತ್‌ ವಾಹನಗಳ ಓಡಾಟ, ಕಾಮಗಾರಿ ಕೈಗೊಳ್ಳಲು ಅಗೆದ ಗುಂಡಿಗಳನ್ನು ಮುಚ್ಚದೇ ಹಾಗೆಯೇ ಬಿಟ್ಟಿದ್ದಾರೆ. ಪರಿ​ಣಾಮ ಪಾದಚಾರಿಗಳು ಹಾಗೂ ಪ್ರಯಾಣಿಕರ ಜೀವಕ್ಕೆ ಆಪತ್ತು ಎದುರಾಗಿದೆ.

Shivamogga: ಸೊರಬ ಪುರಸಭೆ: .18.79 ಕೋಟಿ ಮೊತ್ತದ ಬಜೆಟ್‌ ಮಂಡನೆ

ಸವಳಂಗ ರಸ್ತೆಯ ರೈಲ್ವೆ ಮೇಲ್ಸೇತುವೆ ಕಾಮಗಾರಿ ಆರಂಭವಾದ ಮೇಲೆ ಎಲ್ಲ ರೀತಿಯ ವಾಹನಗಳು ಬೊಮ್ಮನಕಟ್ಟೆಮುಖ್ಯ ರಸ್ತೆಯಲ್ಲಿಯೇ ಸಾಗಬೇಕಾಗಿದೆ. ದಿನದಲ್ಲಿ ದ್ವಿಚಕ್ರ ವಾಹನವೂ ಸೇರಿದಂತೆ ಬಸ್‌, ಲಾರಿ, ಕಾರು, ಟ್ರ್ಯಾಕ್ಟರ್‌, ಟಿಪ್ಪರ್‌ಗಳು ಸಾವಿರಾರು ಸಂಖ್ಯೆಯಲ್ಲಿ ಈ ರಸ್ತೆಯ ಮೂಲಕ ಸಾಗುತ್ತಿವೆ. ಬೃಹತ್‌ ಪ್ರಮಾಣದ ಲಾರಿ, ಟ್ರ್ಯಾಂಕರ್‌, ಟಿಪ್ಪರ್‌ಗಳಿಂದ ರಸ್ತೆ ಅಧ್ವಾನ ಸ್ಥಿತಿಗೆ ತಲುಪಿದೆ. ಗುಂಡಿಗಳ ಸಂಖ್ಯೆ ಹೆಚ್ಚಿ ವಾಹನ ಸಂಚಾರಕ್ಕೆ ತೊಡಕಾಗಿದೆ.

ಬೊಮ್ಮನಕಟ್ಟೆ(Bommanakatte)ಮಾರ್ಗದ ರೈಲ್ವೆ ಮೇಲ್ಸೇತುವೆಯಾಗಲಿ, ಕೆಳಸೇತುವೆಯಾಗಲಿ ಇನ್ನೂ ಆರಂಭವಾಗಿಲ್ಲ. ರೈಲ್ವೆ ಮೇಲ್ಸೇತುವೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ವಾಹನಗಳು ನಿಂತು ಟ್ರಾಫಿಕ್‌ ಜಾಮ್‌ ಆಗುತ್ತಿದೆ. ಮುಖ್ಯ ರಸ್ತೆಯಲ್ಲಿ ನೂರಾರು ಗುಂಡಿಗಳಿವೆ. ಈ ರಸ್ತೆ ಮಳೆಗಾಲದಲ್ಲಿ ಕೆಸರಿನ ಮಜ್ಜನವಾದರೆ, ಬೇಸಿಗೆಯಲ್ಲಿ ಧೂಳುಮಯವಾಗುತ್ತಿದೆ. ದೊಡ್ಡ ವಾಹನಗಳು ಚಲಿಸುತ್ತಿದ್ದಂತೆ ವಿಪರೀತ ಧೂಳು ಏಳುವುದರಿಂದ ಹಿಂಬದಿಯ ವಾಹನ ಚಾಲಕರಿಗೆ ಕೆಲವೊಂದು ಬಾರಿ ದಾರಿಯೇ ಕಾಣದಂತಾಗುತ್ತದೆ. ಇದರಿಂದ ಅಕ್ಕಪಕ್ಕದಲ್ಲಿರುವ ವಾಸದ ಮನೆಗಳಿಗೆ ಹಾನಿ ಉಂಟಾಗುತ್ತಿದೆ. ಇಲ್ಲಿನ ಬಹುತೇಕ ಜನರು ಶ್ವಾಸಕೋಶ ಮತ್ತು ಕೆಮ್ಮಿನಂತಹ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ಅದರಲ್ಲೂ ಈ ಮುಖ್ಯ ರಸ್ತೆಯಲ್ಲಿ ನೂರಾರು ಸಂಖ್ಯೆಯಲ್ಲಿ ಅಂಗಡಿಗಳಿವೆ. ಅಂಗಡಿಗಳ ಮುಂದೆ ವಾಹನಗಳನ್ನು ನಿಲ್ಲಿಸುವುದರಿಂದ ಮತ್ತು ದಿನೇದಿನೇ ಹೆಚ್ಚಾಗುತ್ತಿರುವ ವಾಹನ ಸಂಚಾರದಿಂದಾಗಿ ಕಿರಿಕಿರಿ ಉಂಟಾಗುತ್ತಿದೆ.

ದಶಕಗಳಿಂದ ದುರಸ್ತಿ ಕಾಣದ ರಸ್ತೆ!:

ಬೊಮ್ಮನಕಟ್ಟೆಮುಖ್ಯ ರಸ್ತೆಯ ಅಭಿವೃದ್ಧಿ ಮರೀಚಿಕೆ ಎನ್ನುವುದು ಮೊದಲಿನಿಂದಲೂ ಇರುವ ಮಾತು. ನಗರಕ್ಕೆ ಸಂಚರಿಸಲು ಪ್ರಮುಖ ರಸ್ತೆಯಾಗಿರುವ ಇದನ್ನು ದಶಕಗಳ ಹಿಂದೆ ಈ ಅಭಿವೃದ್ಧಿಪಡಿಸಿದ್ದು, ಬಿಟ್ಟರೆ ಇಲ್ಲಿಯವರೆಗೆ ರಸ್ತೆಗೆ ತೇಪೆ ಹಚ್ಚುವ ಕೆಲಸವೂ ನಡೆದಿಲ್ಲ. ಈಗ ರಸ್ತೆಯಲ್ಲಿ ತಗ್ಗು-ಗುಂಡಿಗಳು ಬಿದ್ದು ಜಲ್ಲಿಕಲ್ಲುಗಳು ಹರಡಿದ್ದಾರೆ. ಆದಕಾರಣ ವಾಹನ ಸವಾರರು ಹರಸಾಹಸಪಟ್ಟು ವಾಹನ ಚಾಲನೆ ಮಾಡಬೇಕಿದೆ. ಈ ರಸ್ತೆ ಅಭಿವೃದ್ಧಿಗೆ ಸ್ಥಳೀಯರು ಹಲವು ಬಾರಿ ಮನವಿ ಮಾಡಿದರೂ ಈ ರಸ್ತೆ ಮಾತ್ರ ಇಲ್ಲಿಯವರೆಗೆ ಸುಧಾರಣೆ ಕಂಡಿಲ್ಲ.

ಮೊದಲೇ ದುಸ್ಥಿತಿಯಲ್ಲಿದ್ದ ರಸ್ತೆಯಲ್ಲಿ ಸವಳಂಗ ರಸ್ತೆ ಮತ್ತು ಗೆಜ್ಜೇನಹಳ್ಳಿ ರಸ್ತೆಗಳಲ್ಲಿ ಭಾರಿ ವಾಹನ ಸಂಚಾರ ನಿಬಂರ್‍ಧವಿದೆ. ಇದರಿಂದ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಈ ರೀತಿ ಭಾರಿ ವಾಹನಗಳಿಗೆ ಪರ್ಯಾಯ ರಸ್ತೆ ಮಾರ್ಗವನ್ನು ಸೂಚಿಸುವಾಗ ಅಂತಹ ರಸ್ತೆಗಳನ್ನು ಸಂಬಂಧಿಸಿದವರು ಅಭಿವೃದ್ಧಿಪಡಿಸಬೇಕಿತ್ತು. ಆದರೆ ಹಾಗೆ ಮಾಡದಿದ್ದರಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಸಮಸ್ಯೆ ಎದುರಿಸಬೇಕಾಗಿದೆ.

SHIMUL: ಶಿಮುಲ್‌ನಿಂದ ನಂದಿನಿ ಸಿಹಿ ಲಸ್ಸಿ ಮಾರುಕಟ್ಟೆಗೆ

ಇಬ್ಬರು ಪಾಲಿಕೆ ಸದ​ಸ್ಯರೂ ನಿರ್ಲ​ಕ್ಷ್ಯ!

ಈ ರಸ್ತೆಗೆ ಸಂಬಂಧಿಸಿದಂತೆ ಇಬ್ಬರು ಪಾಲಿಕೆ ಸದಸ್ಯರು ಬರುತ್ತಾರೆ. ಇವರಾರ‍ಯರೂ ಈ ಸಮಸ್ಯೆಯತ್ತ ಗಮನಹರಿಸಿಲ್ಲ. ಸ್ಮಾರ್ಚ್‌ಸಿಟಿ ವ್ಯಾಪ್ತಿಗೂ ಇದು ಸೇರಿಲ್ಲ. ಜಿಲ್ಲಾಡಳಿತವಾಗಲೀ ಪಾಲಿಕೆ ಆಡಳಿತವಾಗಲೀ ಇತ್ತ ಗಮನ ಹರಿಸುತ್ತಿಲ್ಲ. ಮತ್ತು ಬೊಮ್ಮನಕಟ್ಟೆಯಿಂದ ಪ್ರತಿದಿನ ಶಾಲೆಗೆ, ಕಚೇರಿಗೆ, ಕೆಲಸಕ್ಕೆ ಹೋಗುವವರ ಸಂಖ್ಯೆ ಕೂಡ ಹೆಚ್ಚಿದೆ. ಇದರಿಂದಲೂ ಕೂಡ ಸಮಸ್ಯೆ ಉಂಟಾಗಿದೆ. ಗೆಜ್ಜೇನಹಳ್ಳಿ ಹಾಗೂ ಸವಳಂಗ ರಸ್ತೆಯಲ್ಲಿ ವಾಹನ ಸಂಚಾರ ಆರಂಭವಾಗಲು ಇನ್ನೂ ಐದಾರು ತಿಂಗಳಾದರೂ ಬೇಕಾಗಿದ್ದು, ಬೊಮ್ಮನಕಟ್ಟೆಮುಖ್ಯರಸ್ತೆ ಅಭಿವೃದ್ಧಿಪಡಿಸದೆ ಇದ್ದಲ್ಲಿ, ನಗರದಲ್ಲಿ ಅತೀಹೆಚ್ಚು ಸಂಚಾರ ಸಮಸ್ಯೆಗಳು ಇಲ್ಲಿ ಸೃಷ್ಟಿಆಗುವುದರಲ್ಲಿ ಸಂದೇಹವಿಲ್ಲ ಎಂಬುದು ಸಾರ್ವಜನಿಕರ ಅಳಲು.

click me!