ಮೈಸೂರು: ನಂಜನಗೂಡು ದೇಗುಲದಲ್ಲಿ ನಟಿ ಶಿಲ್ಪಾ ಶೆಟ್ಟಿ ಧ್ಯಾನ, ಪೂಜೆ

Published : May 29, 2024, 07:34 AM IST
ಮೈಸೂರು: ನಂಜನಗೂಡು ದೇಗುಲದಲ್ಲಿ ನಟಿ ಶಿಲ್ಪಾ ಶೆಟ್ಟಿ ಧ್ಯಾನ, ಪೂಜೆ

ಸಾರಾಂಶ

ಮೈಸೂರಿನ ಇಲವಾಲದಲ್ಲಿ ಹಿಂದಿ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಸಲುವಾಗಿ ಬಂದಿದ್ದೆ. ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿಯ ದೇವಾಲಯದ ಬಗ್ಗೆ ಬಹಳವಾಗಿ ಕೇಳಿದ್ದೆ. ಇಂದು ದೇವರ ದರ್ಶನ ಪಡೆಯುವ ಸೌಭಾಗ್ಯ ದೊರೆಯಿತು ಎಂದು ಹರ್ಷ ವ್ಯಕ್ತಪಡಿಸಿದ ಶಿಲ್ಪಾ ಶೆಟ್ಟಿ 

ನಂಜನಗೂಡು(ಮೇ.29): ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿಯವರು ಮಂಗಳವಾರ ಸಂಜೆ ನಂಜನಗೂಡಿಗೆ ಭೇಟಿ ನೀಡಿ, ಶ್ರೀಕಂಠೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. 

ದೇವರ ದರ್ಶನ ಪಡೆದ ನಂತರ ದೇವಾಲಯದ ವಸಂತ ಮಂಟಪದಲ್ಲಿ 5 ನಿಮಿಷಗಳ ಕಾಲ ಕುಳಿತು ಧ್ಯಾನಾಸಕ್ತರಾದರು. ಬಳಿಕ, ಶಿಲ್ಪಾಶೆಟ್ಟಿಯವರಿಗೆ ದೇವಾಲಯದ ಅರ್ಚಕರು ದೇವರ ಶೇಷ ವಸ್ತ್ರ ಹಾಗೂ ಪ್ರಸಾದ ನೀಡಿ, ಆಶೀರ್ವದಿಸಿದರು. 

ಇದೇನಾ ನಿಮ್ಮ ಯೋಗಾ.. ಇಷ್ಟೆನಾ ನೀವು ಫಿಟ್..?: ಹೇಸರಗತ್ತೆ ಮೇಲೆ ಕುಳಿತ ಶಿಲ್ಪಾ ಶೆಟ್ಟಿ ಫುಲ್ ಟ್ರೋಲ್!

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿಲ್ಪಾ ಶೆಟ್ಟಿ ಅವರು, ಮೈಸೂರಿನ ಇಲವಾಲದಲ್ಲಿ ಹಿಂದಿ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಸಲುವಾಗಿ ಬಂದಿದ್ದೆ. ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿಯ ದೇವಾಲಯದ ಬಗ್ಗೆ ಬಹಳವಾಗಿ ಕೇಳಿದ್ದೆ. ಇಂದು ದೇವರ ದರ್ಶನ ಪಡೆಯುವ ಸೌಭಾಗ್ಯ ದೊರೆಯಿತು ಎಂದು ಹರ್ಷ ವ್ಯಕ್ತಪಡಿಸಿದರು.

PREV
Read more Articles on
click me!

Recommended Stories

ಕೊಡಗಿನ ಇತಿಹಾಸದಲ್ಲೇ ಮೊದಲ ಬಾರಿಗೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್! ಏನಿದು ಪ್ರಕರಣ?
ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!