ಬಿಎಂಟಿಸಿ ಸಿಬ್ಬಂದಿಗಳು ಪುರುಷ ಕಾರ್ಮಿಕರ ಸಮಸ್ಯೆಗೆ ಸ್ಪಂಧಿಸುವಂತೆ ಕೋರಿ ಪತ್ರ ಬರೆದಿರುವ ಘಟನೆ ನಡೆದಿದೆ. ಬಿಎಂಟಿಸಿ ಘಟಕ 21ರಲ್ಲಿ ಮಹಿಳಾ ಅಧಿಕಾರಿಗಳೇ ತುಂಬಿದ್ದಾರೆ. ಸಂಸ್ಥೆಯ ಕೆಲಸದ ಒತ್ತಡದ ಮಧ್ಯೆ ಮಹಿಳಾ ಅಧಿಕಾರಿಗಳ ಕಿರುಕುಳ ಹೆಚ್ಚುತ್ತಿದೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು (ಜ.28): ಬಿಎಂಟಿಸಿ ಸಿಬ್ಬಂದಿಗಳು ಪುರುಷ ಕಾರ್ಮಿಕರ ಸಮಸ್ಯೆಗೆ ಸ್ಪಂಧಿಸುವಂತೆ ಕೋರಿ ಪತ್ರ ಬರೆದಿರುವ ಘಟನೆ ನಡೆದಿದೆ. ಬಿಎಂಟಿಸಿ ಘಟಕ 21ರಲ್ಲಿ ಮಹಿಳಾ ಅಧಿಕಾರಿಗಳೇ ತುಂಬಿದ್ದಾರೆ. ಕೋವಿಡ್ 19 ಬಳಿಕ ವೇತನ ಹೆಚ್ಚಳವಾಗದ ಹಿನ್ನೆಲೆ ಮನೆಯಲ್ಲಿ ನಿತ್ಯ ಮಾನಸಿಕ ಹಿಂಸೆ ಹಾಗೂ ಸಂಸ್ಥೆಯ ಕೆಲಸದ ಒತ್ತಡದ ಮಧ್ಯೆ ಮಹಿಳಾ ಅಧಿಕಾರಿಗಳ ಕಿರುಕುಳ ಹೆಚ್ಚುತ್ತಿದೆ. ನಮ್ಮ ಸಮಸ್ಯೆ ಕುಂದು ಕೊರತೆ ಆಲಿಸಲು ಸಂಸ್ಥೆಯಲ್ಲಿ ಪುರುಷ ಅಧಿಕಾರಿಗಳೇ ಇಲ್ಲ. ಪುರುಷರ ಸಮಸ್ಯೆ ಹೇಳಿಕೊಳ್ಳಲು ಮುಂದಾದ್ರೆ ಮಹಿಳಾ ಅಧಿಕಾರಿಗಳು ದೌರ್ಜನ್ಯ ಮಾಡ್ತಿದ್ದಾರೆ. ಹೀಗಾಗಿ ನಮ್ಮ ಸಮಸ್ಯೆಗೆ ಸ್ಪಂಧಿಸಲು ಸಂಸ್ಥೆಯಲ್ಲಿ ಒಬ್ಬ ದಕ್ಷ ಐಎಎಸ್, ಐಪಿಎಸ್ ಅಧಿಕಾರಿ ನೇಮಿಸುವಂತೆ ಪತ್ರ ಬರೆದಿದ್ದಾರೆ. ಮಾತ್ರವಲ್ಲ ಇತ್ತೀಚೆಗೆ ನೌಕರನ ಸಾವಿಗೆ ಕಾರಣರಾದ ಮಹಿಳಾ ಅಧಿಕಾರಗಳ ಮೇಲೆ ಕ್ರಮ ಜರುಗಿಸುವಂತೆ ಆಗ್ರಹಿಸಿ ಬಿಎಂಟಿಸಿ ಎಂ.ಡಿ ಸತ್ಯವತಿಗೆ ನೌಕರರು ಪತ್ರ ಬರೆದಿದ್ದಾರೆ.
BMTC Bus ಖರೀದಿ ಪ್ರಶ್ನಿಸಿ ಅಂಗವಿಕಲ ಅರ್ಜಿ; ಸರ್ಕಾರಕ್ಕೆ ಕೋರ್ಟ್ ನೋಟಿಸ್
ಬಿಎಂಟಿಸಿ ಬಸ್ ಡಿಕ್ಕಿಯಾಗಿ ನಾಲ್ವರಿಗೆ ಗಾಯ
ಚಾಲಕನ ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿಯಾಗಿ ಚಲಿಸಿ ಎರಡು ಬೈಕ್‌ಗಳಿಗೆ ಬಿಎಂಟಿಸಿ ಬಸ್‌ವೊಂದು ಗುದ್ದಿದ ಪರಿಣಾಮ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಥಣಿಸಂದ್ರ ಮುಖ್ಯರಸ್ತೆಯಲ್ಲಿ ಶುಕ್ರವಾರ ನಡೆದಿದೆ.
ಬಿಎಂಟಿಸಿಗೆ ಮಹಿಳಾ ಸಾರಥಿ, ದೇಶದ ಮೊದಲ ಎಲೆಕ್ಟ್ರಿಕ್ ಬಸ್ ಚಾಲಕಿ ದುಗ್ಗಮ್ಮ
ಯಲಹಂಕದಿಂದ ಮೆಜೆಸ್ಟಿಕ್‌ಗೆ ಪ್ರಯಾಣಿಸುತ್ತಿದ್ದ ಬಸ್ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಗಾಯಗೊಂಡಿರುವ ನಾಲ್ವರ ಪೈಕಿ ಒಬ್ಬಾತನ ಕಾಲಿನ ಮೇಲೆ ಬಸ್ ಚಕ್ರಗಳು ಹರಿದಿವೆ. ಇನ್ನುಳಿದ ಮೂವರು ಸಣ್ಣಪುಟ್ಟಗಾಯಗಳಾಗಿವೆ ಎಂದು ಉತ್ತರ ವಿಭಾಗದ (ಸಂಚಾರ) ಡಿಸಿಪಿ ಸಚಿನ್ ಘೋರ್ಪಡೆ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಬೆಂಗಳೂರು: ಕಿಲ್ಲರ್ ಬಿಎಂಟಿಸಿ ಬಸ್ ಸರಣಿ ಅಪಘಾತಕ್ಕೆ ಯುವಕ ಬಲಿ
ಥಣಿಸಂದ್ರ ಮುಖ್ಯರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಚಲಿಸಿದ ಬಿಎಂಟಿಸಿ ಬಸ್, ಹಿಂದಿನಿಂದ ಎರಡು ಬೈಕ್‌ಗಳಿಗೆ ಗುದ್ದಿ ಬಳಿಕ ರಸ್ತೆ ವಿಭಜಕಕ್ಕೆ ಅಪ್ಪಳಿಸಿ ನಿಂತಿದೆ. ಆಗ ಬೈಕ್‌ನಲ್ಲಿದ್ದ ಮೂವರು ಹಾಗೂ ರಸ್ತೆ ದಾಟುತ್ತಿದ್ದ ಓರ್ವ ಪಾದಚಾರಿ ಗಾಯಗೊಂಡಿದ್ದಾರೆ. ಬ್ರೇಕ್ ವೈಫಲ್ಯವಾದ ಪರಿಣಾಮ ಚಾಲನೆ ಮೇಲೆ ನಿಯಂತ್ರಣ ತಪ್ಪಿತು ಎಂದು ವಿಚಾರಣೆ ವೇಳೆ ಚಾಲಕ ಹೇಳಿಕೆ ನೀಡಿದ್ದಾನೆ.