BMTC Bus ಖರೀದಿ ಪ್ರಶ್ನಿಸಿ ಅಂಗವಿಕಲ ಅರ್ಜಿ; ಸರ್ಕಾರಕ್ಕೆ ಕೋರ್ಟ್ ನೋಟಿಸ್
- ಬಸ್ ಖರೀದಿ ಪ್ರಶ್ನಿಸಿ ಅಂಗವಿಕಲ ಅರ್ಜಿ
- ಎತ್ತರದ ಬಸ್‌ಗಳು ಅಂಗವಿಕಲರಿಗೆ ಸೂಕ್ತವಲ್ಲ: ಅರ್ಜಿದಾರ
- ಚಾಸಿ ಎತ್ತರ ಹೆಚ್ಚಿರಬೇಕು ಎಂದು ಟೆಂಡರಲ್ಲಿ ಬಿಎಂಟಿಸಿ ಷರತ್ತು
- ಇದು ಅಂಗವಿಕಲರಿಗೆ ಸಮಸ್ಯೆ
- ಸರ್ಕಾರಕ್ಕೆ ಕೋರ್ಟ್ ನೋಟಿಸ್
ಬೆಂಗಳೂರು (ಜ.3) : ಬೆಂಗಳೂರು ಮಹಾನಗರದ ಸಾರಿಗೆ ಸಂಸ್ಥೆ (ಬಿಎಂಟಿಸಿ) 840 ಹೊಸ ಬಸ್‌ಗಳ ಖರೀದಿಗೆ ಹೊರಡಿಸಿದ್ದ ಟೆಂಡರ್ ಅಧಿಸೂಚನೆಯನ್ನು ಪ್ರಶ್ನಿಸಿರುವ ಅರ್ಜಿ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಈ ಕುರಿತು ಬೆಂಗಳೂರಿನ ಅಂಗವಿಕಲ ಸುನೀಲ್ ಕುಮಾರ್ ಜೈನ್ ಸಲ್ಲಿಸಿದ್ದ ಸಾರ್ವಜನಿಕ ಅರ್ಜಿ, ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಕೆಲ ಕಾಲ ಅರ್ಜಿದಾರ ಪರ ವಕೀಲರ ವಾದ ಆಲಿಸಿದ ನ್ಯಾಯ ಪೀಠ, ಪ್ರತಿವಾದಿಗಳಾದ ರಾಜ್ಯ ಸಾರಿಗೆ ಇಲಾಖೆ(Department of Transport), ಕೇಂದ್ರ ಸರ್ಕಾರದ ವಸತಿ-ನಗರ ವ್ಯವಹಾರಗಳ ಸಚಿವಾಲಯ(Ministry of Housing-Urban Affairs), ರಸ್ತೆ ಸಾರಿಗೆ-ಹೆದ್ದಾರಿ ಸಚಿವಾಲಯ(Ministry of Road Transport-Highways), ಅಂಗವಿಕಲರ ಸಬಲೀಕರಣ ಇಲಾಖೆ(Department of Empowerment of Persons with Disabilities) ಮತ್ತು ಬಿಎಂಟಿಸಿ(BMTC)ಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
karnataka high court : ಆಸ್ಪತ್ರೆಯಿಂದ ಹೊರಬಂದ ಪತಿಗೆ ಬೆಂಗಳೂರು ಬಂಧನ!
ಅರ್ಜಿದಾರರ ಮನವಿ ಏನು?
ಪೊಲಿಯೋ(Polio) ಕಾರಣಕ್ಕೆ ಅಂಗವೈಕಲ್ಯಕ್ಕೆ ತುತ್ತಾಗಿರುವ ಅರ್ಜಿದಾರರು, ಓಡಾಟಕ್ಕಾಗಿ ಗಾಲಿ ಖುರ್ಚಿಯನ್ನು ಅವಲಂಬಿಸಿದ್ದಾರೆ. 840 ಹೊಸ ಬಸ್‌ಗಳ ಖರೀದಿಗೆ ಟೆಂಡರ್ ಆಹ್ವಾನಿಸಿ 2022ರ ಅ.28ರಂದು ಬಿಎಂಟಿಸಿ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿರುವ ಅರ್ಜಿದಾರರು, ಖರೀದಿಸಲು ಉದ್ದೇಶಿಸಿರುವ ಬಸ್‌ಗಳ ಚಾಸಿಸ್ (ತಳಕಟ್ಟು) ಎತ್ತರವು 1000 ಮಿಲಿ ಮೀಟರ್ ಇರಬೇಕು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಆದರೆ, ಇದು ಮೋಟಾರು ವಾಹನ ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗಿದೆ. ಹಾಗಾಗಿ, ಚಾಸಿಸ್ ಎತ್ತರ 1000 ಮಿಲಿ ಮೀಟರ್ ಇರಬೇಕು ಎನ್ನುವುದಕ್ಕೆ ಸೀಮಿತವಾಗಿ ಅಧಿಸೂಚನೆ ರದ್ದುಪಡಿಸಬೇಕು ಎಂದು ಕೋರಿದ್ದಾರೆ.
ಅಲ್ಲದೆ, ಬಸ್‌ನ ನೆಲಮಟ್ಟದಿಂದ ಎತ್ತರವು 400 ಮಿಲಿ ಮೀಟರ್‌ನಿಂದ 650 ಮಿ.ಮೀ ಇರಬೇಕು. ಬಾಗಿಲ ಮೂಲಕ ಗಾಲಿ ಕುರ್ಚಿಗಳಿಂದ ಹತ್ತು ಇಳಿಯಲು ಅನುಕೂಲವಾಗುವಂತೆ ವ್ಯವಸ್ಥೆ ಹೊಂದಿರುವ (ವ್ಹೀಲ್ ಚೇರ್ ಬೋಡಿಂಗ್ ಡಿವೈಸ್) ಬಸ್‌ಗಳನ್ನು ಖರೀದಿ ಮಾಡಲು ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
KGF-2 ಹಾಡು ದುರ್ಬಳಕೆ ಆರೋಪ; ರಾಹುಲ್ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ
ಹಾಗೆಯೇ, ಅರ್ಜಿ ನ್ಯಾಯಾಲಯದಲ್ಲಿ ಇತ್ಯರ್ಥವಾಗುವರೆಗೆ 840 ಹೊಸ ಬಸ್‌ಗಳ ಖರೀದಿಗೆ ಹೊರಡಿಸಿರುವ ಟೆಂಡರ್ ಅಧಿಸೂಚನೆಗೆ ತಡೆಯಾಜ್ಞೆ ನೀಡಬೇಕು. ಇಲ್ಲವೇ ಬಸ್ ಖರೀದಿ ಪ್ರಕ್ರಿಯು ಅರ್ಜಿ ಕುರಿತ ಹೈಕೋರ್ಚ್ ಅಂತಿಮ ಆದೇಶಕ್ಕೆ ಒಳಪಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿ ಮಧ್ಯಂತರ ಆದೇಶ ಹೊರಡಿಸಬೇಕು ಎಂದು ಮಧ್ಯಂತರ ಮನವಿ ಮಾಡಿದ್ದಾರೆ.