ಭೀಮಾತೀರದ ರಕ್ತಸಿಕ್ತ ಅಧ್ಯಾಯಕ್ಕೆ ಇಂದು ಸಿಗಲಿದೆ ಮುಕ್ತಿ.!: ಎಡಿಜಿಪಿ ಅಲೋಕ್‌ ಕುಮಾರ್‌ ಭೇಟಿ

By Sathish Kumar KH  |  First Published Feb 15, 2023, 3:55 PM IST

• ಕುತೂಹಲ ತೆರಳಿಸಿದ ಭೀಮಾತೀರಕ್ಕೆ ಎಡಿಜಿಪಿ ಅಲೋಕ್‌ ಕುಮಾರ್‌ ಭೇಟಿ..!
• ನಟೋರಿಯಸ್‌ ಹಂತಕರಲ್ಲಿ ಶುರುವಾಗಿದೆ ನಡುಕ..!
• ಬೈರಗೊಂಡ-ಚಡಚಣ ಕುಟುಂಬಗಳ ನಡೆಯುತ್ತಾ ರಾಜೀ-ಸಂಧಾನ..!
• ಸಂಧಾನದಲ್ಲಿ ಭಾಗಿಯಾಗ್ತಾನಾ ಭೂಗತ ಮಲ್ಲಿಕಾಜೀ ಚಡಚಣ..!?


ವರದಿ - ಷಡಕ್ಷರಿ ಕಂಪೂನವರ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್‌ 

ವಿಜಯಪುರ (ಫೆ.15) : ಖಡಕ್‌ ಪೊಲೀಸ್‌ ಅಧಿಕಾರಿ ADGP ಅಲೋಕ್‌ ಕುಮಾರ್‌ ಇಂದು ಭೀಮಾತೀರಕ್ಕೆ ಭೇಟಿ ಕೊಡ್ತಿದ್ದಾರೆ. ಕಳೆದ ಕೆಲ ತಿಂಗಳ ಹಿಂದಷ್ಟೆ ಭೀಮಾತೀರಕ್ಕೆ ಭೇಟಿ ನೀಡಿ ಭೀಮಾತೀರದ ಗ್ಯಾಂಗ್‌ ಗಳಿಗೆ ಖಡಕ್‌ ವಾರ್ನಿಂಗ್‌ ಕೊಟ್ಟಿದ್ದರು. ಚಡಚಣದಲ್ಲಿ ಸಭೆ ನಡೆಸಿ ಭ್ರಷ್ಟಾಚಾರ ಕೈ ಜೋಡಿಸಿದ್ರೆ ಹುಷಾರ್‌ ಅಂತಾ ತಮ್ಮ ಅಧಿಕಾರಿ-ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದ್ದರು. ಅದ್ರಲ್ಲು ಭೀಮಾತೀರದ ರಕ್ತಸಿಕ್ತ ಅಧ್ಯಾಯಕ್ಕೆ ಕಾರಣವಾದ ಭೀಮಾತೀರದ ಎರಡು ಕುಟುಂಬಗಳ ನಡುವೆ ರಾಜಿ ಸಂಧಾನಕ್ಕೆ ಯತ್ನಿಸಿದ್ದರು. ಎರಡು ಕಡೆಯವರಿಗೆ ಕೊನೆಯ ವಾರ್ನಿಂಗ್ ಕೊಟ್ಟು ಹೋಗಿದ್ರು. ಈ ಮತ್ತೆ ಭೀಮಾತೀರದಲ್ಲಿ ಅಲೋಕ್‌ ಕುಮಾರ್‌ ಮಿಂಚಿನ ಸಂಚಾರ ನಡೆಸಲಿದ್ದು ಈ ಭಾಗದ ಜನರಲ್ಲಿ ಕುತೂಹಲ ಮನೆ ಮಾಡಿದೆ.

Latest Videos

undefined

ಬೈರಗೊಂಡ- ಚಡಚಣ ಕುಟುಂಬಗಳ ನಡುವೆ ರಾಜಿ-ಸಂಧಾನ:
ಕಳೆದ ಅರ್ಧ ದಶಕದಿಂದ ಭೀಮಾತೀರದ ಚಡಚಣ ಭಾಗದ ಬೈರಗೊಂಡ ಹಾಗೂ ಚಡಚಣ ಕುಟುಂಬಗಳ ನಡುವೆ ದ್ವೇಷವಿದೆ. ಇದೆ ದ್ವೇಷದಿಂದ ಎರಡು ಕುಟುಂಬಗಳು ಹತ್ತಾರು ಹೆಣಗಳು ಬಿದ್ದಿವೆ. ಎರಡು ಕುಟುಂಬಗಳು ಗ್ಯಾಂಗ್‌ ಕಟ್ಟಿಕೊಂಡು ಹೊಡೆದಾಡಿ ಇಡೀ ಭೀಮಾತೀರವನ್ನೆ ರಕ್ತಸಿಕ್ತ ಮಾಡಿದ ಅಪಖ್ಯಾತಿ ಪಡೆದಿದ್ದರು. ಇದನ್ನ ಹೋಗಲಾಡಿಸಬೇಕು, ಭೀಮಾತೀರದಲ್ಲಿ ಮತ್ತೆ ಶಾಂತಿ ಮರುಸ್ಥಾಪನೆಗಾಗಿ ಖಡಕ್‌ ಪೊಲೀಸ್‌ ಅಧಿಕಾರಿ ADGP ಅಲೋಕ್‌ ಕುಮಾರ್‌ ಇನ್ನಿಲ್ಲದ ಪ್ರಯತ್ನದಲ್ಲಿ ತೊಡಗಿದ್ದಾರೆ. ಕಳೆದ ಕೆಲ ತಿಂಗಳ ಹಿಂದಷ್ಟೆ ಬೈರಗೊಂಡ ಕುಟುಂಬದ ಮಹಾದೇವ ಬೈರಗೊಂಡ ಆಂಡ್‌ ಗ್ಯಾಂಗ್‌ ಮತ್ತು ಚಡಚಣ ಕುಟುಂಬಸ್ಥರು ಸಂಬಂಧಿಕರನ್ನ ಚಡಚಣ ಠಾಣೆಗೆ ಕರೆಯಿಸಿ ದ್ವೇಷ ಬಿಡುವಂತೆ ವಾರ್ನ್‌ ಮಾಡಿದ್ದರು. ಆಗ ವಿಮಲಾಬಾಯಿ ನಾಪತಾ ಇದ್ದಿದ್ದರಿಂದ ರಾಜಿ ಸಂಧಾನ ಯಶಸ್ವಿಯಾಗಿರಲಿಲ್ಲ. ಇಂದು ಸ್ವತಃ ವಿಮಲಾಬಾಯಿ ಹಾಗೂ ಮಹಾದೇವ ಬೈರಗೊಂಡನನ್ನ ಎದುರು ಬದುರು ಕೂರಿಸಿಕೊಂಡು ರಾಜಿ ಮಾಡಲಿದ್ದಾರೆ ಎನ್ನಲಾಗ್ತಿದೆ.

ಭೀಮಾತೀರದಲ್ಲಿ ಮತ್ತೆ ಸದ್ದು ಮಾಡಿದ ಗನ್‌ ಫೈರ್‌: ಐವರು ದರೋಡೆಕೋರರ ಪೈಕಿ ಇಬ್ಬರನ್ನು ಹಿಡಿದ ಜನರು

ವಾರ್ನಿಂಗ್‌ ಬಳಿಕ ಕೋರ್ಟಗೆ ಶರಣಾಗಿದ್ದ ವಿಮಲಾಬಾಯಿ:
ವಿಮಲಾಬಾಯಿ ಚಡಚಣ ಭೀಮಾತೀರದ ಮೋಸ್ಟ್‌ ನಟೋರಿಯಸ್‌ ಹಂತಕ ಮಲ್ಲಿಕಾಜೀ ಚಡಚಣ ಪತ್ನಿ, ನಕಲಿ ಎನ್ಕೌಂಟರನಲ್ಲಿ ಸತ್ತ ಶಾರ್ಫ್‌ ಶೂಟರ್‌ ಆಗಿದ್ದ ಧರ್ಮರಾಜ್‌ ಚಡಚಣ ಹಾಗೂ ಗಂಗಾಧರ ಸಹೋದರರ ತಾಯಿ ಕೂಡ. ಕಳೆದ ಎರಡು ವರ್ಷಗಳ ಹಿಂದೆ ಮಹಾದೇವ ಬೈರಗೊಂಡನ ಮೇಲೆ ಮಾರಾಮೋಸದ ದಾಳಿ ಬಳಿಕ ವಿಮಲಾಬಾಯಿ ಪ್ರಕರಣದಲ್ಲಿ ಎ2 ಆರೋಪಿಯಾಗಿದ್ದಳು. ಪೊಲೀಸರ ಕೈಗೆ ಸಿಗದೆ ಮಹಾರಾಷ್ಟ್ರದ ಕಡೆಗೆ ಪರಾರಿಯಾಗಿದ್ದಳು. ಕಳೆದ ಬಾರಿ ಎಡಿಜಿಪಿ ಅಲೋಕ್‌ ಕುಮಾರ್‌ ಭೀಮಾತೀರಕ್ಕೆ ಭೇಟಿ ಕೊಟ್ಟಾಗ ವಿಮಲಾಬಾಯಿ ಹಾಗೂ 18 ವರ್ಷಗಳಿಂದ ಭೂಗತನಾಗಿರುವ ಆಕೆ ಗಂಡ ಮಲ್ಲಿಕಾಜೀ ಪೊಲೀಸರಿಗೆ ಶರಣಾಗಬೇಕು ಅಂತಾ ವಾರ್ನಿಂಗ್‌ ಕೊಟ್ಟಿದ್ದರು. ಬಳಿಕ ವಿಮಲಾಬಾಯಿ ವಿಜಯಪುರ ನ್ಯಾಯಾಲಯಕ್ಕೆ ಹಾಜರಾಗಿ ಜೈಲು ಸೇರಿ ಈಗ ಬೇಲ್‌ ಮೇಲೆ ವಾಪಾಸ್ಸಾಗಿದ್ದಾಳೆ. ಹೀಗಾಗಿ ಎಡಿಜಿಪಿ ಎರಡು ಕುಟುಂಬಗಳ ನಡೆಸುವ ಸಂಧಾನ ಮಹತ್ವ ಪಡೆದುಕೊಂಡಿದೆ..

ರಾಜಿ ಸಂಧಾನದಲ್ಲಿ ವಿಮಲಾಬಾಯಿ ಭಾಗಿ:
ರಾಜೀ ಸಂಧಾನದಲ್ಲಿ ಚಡಚಣ ಕುಟುಂಬದ ಕೆಲ ದೂರದ ಸಂಬಂಧಿಕಗಳು ಬಿಟ್ಟರೆ ಬೇರ್ಯಾರು ಇರಲಿಲ್ಲ. ಇತ್ತ ಬೈರಗೊಂಡ ಆಂಡ್‌ ಆತನ ಗ್ಯಾಂಗ್‌ ಸಂಧಾನದಲ್ಲಿ ಪಾಲ್ಗೊಂಡಿತ್ತಾದ್ರು ಸಂಧಾನ ಯಶಸ್ವಿಯಾಗಿರಲಿಲ್ಲ. ಆದ್ರೆ ಇಂದು ನಡೆಯೋ ರಾಜೀ ಸಂಧಾನದಲ್ಲಿ ಚಡಚಣ ಕುಟುಂಬದ ವಿಮಲಾಬಾಯಿ ಪಾಲ್ಗೊಳ್ಳಲಿದ್ದಾರೆ. ಆಕೆ ಭಾಗವಹಿಸಬೇಕು ಅಂತಾ ಪೊಲೀಸರು ಖಡಕ್‌ ವಾರ್ನಿಂಗ್‌ ಕೊಟ್ಟಿರುವ ಕಾರಣ ಆಕೆ ಪಾಲ್ಗೊಳ್ಳಲಿದ್ದಾಳೆ.

ಭೀಮಾತೀರದಲ್ಲಿ ಜನಮೆಚ್ಚುಗೆ ಪಡೆದ ಡಿಸಿ ನಡೆ ಹಳ್ಳಿ ಕಡೆ, ಗರ್ಭಿಣಿಯರಿಗೆ ಸೀಮಂತ, ಮಗುವಿಗೆ ನಾಮಕರಣ!

ರಾಜೀ-ಸಂಧಾನದ ಬಳಿಕ ಶಾಂತವಾಗುತ್ತಾ ಭೀಮಾತೀರ:
ಭೀಮಾತೀರದ ರಕ್ತಸಿಕ್ತ ಇತಿಹಾಸ ಇಂದು ನಿನ್ನೆಯದಲ್ಲ, ಇಲ್ಲಿ ನಡೆದ ರಕ್ತಪಾತಗಳಿಗೆ ಅರ್ಧ ಶತಮಾನದ ಚರಿತ್ರೆ ಇದೆ. ಹಿಂದೆ ಕ್ಷುಲ್ಲಕ ಕಾರಣಕ್ಕೆ ಭೀಮಾತೀರದ ಅಂಚಿಗಿರುವ ಉಮರಾಣಿ ಗ್ರಾಮದಲ್ಲಿ ಚಡಚಣ ಹಾಗೂ ಬೈರಗೊಂಡ ಕುಟುಂಬದ ನಡುವೆ ತಕರಾರು ಶುರುವಾಗಿ, ಅದು ಆ ಜನ್ಮದ್ವೇಷಕ್ಕೆ ತಿರುಗಿತ್ತು. ಬಳಿಕ ಭೀಮಾತೀರದಲ್ಲಿ ಬಿದ್ದ ಹೆಣಗಳಿಗೆ ಲೆಕ್ಕವಿಲ್ಲ. ಚಡಚಣ ಹಾಗೂ ಬೈರಗೊಂಡ ಎರಡು ಕುಟುಂಬಗಳು ತಮ್ಮ ಉಳಿವಿಗಾಗಿ ಗ್ಯಾಂಗ್‌ ಕಟ್ಟಿಕೊಂಡವು. ಬೈರಗೊಂಡ ಕುಟುಂಬದ ಪುತ್ರಪ್ಪ ಸಾಹುಕಾರ್‌, ಮಹಾದೇವ ಸಾಹುಕಾರ್‌ ಮಲ್ಲಿಕಾಜೀಯಿಂದ ಜೀವ ಉಳಿಸಿಕೊಳ್ಳೊದಕ್ಕೆ ಬಂದೂಕುಗಳನ್ನ ಬೆನ್ನಿಗೆ ಕಟ್ಟಿಕೊಂಡು ಓಡಾಡೋಕೆ ಶುರು ಮಾಡಿದ್ದರು. 

ಗ್ಯಾಂಗ್‌ವಾರ್‌ಗೆ ಹತ್ತಾರು ಹೆಣಗಳು ಬಿದ್ದಿವೆ:
ಹೀಗೆ ಎರಡು ಕುಟುಂಬಗಳ ನಡುವೆ ನಡೆದ ಗ್ಯಾಂಗ್‌ ವಾರ್‌ ಗಳಲ್ಲಿ ಹತ್ತಾರು ಹೆಣಗಳು ಬಿದ್ದಿವೆ. ಹಂತಕ ಧರ್ಮರಾಜ್‌ ಹಾಗೂ ಗಂಗಾಧರ ಡಬಲ್‌ ಮರ್ಡರ್‌ ಬಳಿಕ ಸೇಡು ತೀರಿಸಿಕೊಳ್ಳಲು ಚಡಚಣ ಗ್ಯಾಂಗ್‌ ಕಳೆದ ಮೂರು ವರ್ಷಗಳ ಹಿಂದಷ್ಟೆ ಮಹಾದೇವ ಬೈರಗೊಂಡನ ಮೇಲೆ ಹಾಡುಹಗಲೆ ಪೈರಿಂಗ್‌ ನಡೆಸಿದ್ದರು. ಇದಾದ ಬಳಿಕ ಎಡಿಜಿಪಿಯಾಗಿ ಅಧಿಕಾರವಹಿಸಿಕೊಂಡ ಅಲೋಕ್‌ ಕುಮಾರ್‌ ಭೀಮಾತೀರದ ಈ ಎರೆಡು ಮನೆತನಗಳ ನಡುವಿನ ದ್ವೇಷಕ್ಕೆ ಬ್ರೇಕ್ ಹಾಕಿ ರಕ್ತಪಾತಕ್ಕೆ ಕೊನೆಹಾಡಲು ನಿರ್ಧರಿಸಿದ್ದಾರೆ. ಸಂಧಾನ-ರಾಜಿ ಬಳಿಕ ಭೀಮಾತೀರದಲ್ಲಿ ಶಾಂತಿ ನೆಲೆಸುತ್ತೆ ಎನ್ನುವ ಅಭಿಪ್ರಾಯಗಳಿವೆ..

ರಾಜೀ-ಸಂಧಾನಕ್ಕೆ ಬರ್ತಾನಾ ಭೂಗತ ಮಲ್ಲಿಕಾಜೀ:
ಮಲ್ಲಿಕಾಜೀ ಚಡಚಣ ಭೂಗತನಾಗಿ 18 ವರ್ಷಗಳು ಕಳೆದಿವೆ. ಇಲ್ಲಿಯವರೆಗೆ ಅವನ ಒಂದು ಸಿಂಗಲ್‌ ಪೋಟೊ ಸಹಿತ ಪೊಲೀಸ್‌ ಇಲಾಖೆ ಬಳಿ ಇಲ್ಲ. 18 ವರ್ಷಗಳಿಂದ ಭೂಗತ ಜೀವನ ನಡೆಸುತ್ತಿರುವ ಮಲ್ಲಿಕಾಜೀ ಚಡಚಣ ADGP ನಡೆಸುವ ಸಂಧಾನಕ್ಕೆ ಬರ್ತಾನಾ ಅನ್ನೋ ಕುತೂಹಲಗಳಿವೆ. ಆದ್ರೆ ಆತನ ಆರೋಗ್ಯಸ್ಥಿತಿ ಅಷ್ಟೋಂದು ಸರಿಯಾಗಿಲ್ಲ ಎನ್ನುವ ಮಾಹಿತಿಗಳಿದ್ದು, ರಾಜೀ-ಸಂಧಾನದಲ್ಲಿ ಮಲ್ಲಿಕಾಜೀ ಕಾಣಿಸಿಕೊಳ್ಳೋದು ಡೌಟ್‌ ಎನ್ನಲಾಗ್ತಿದೆ.

click me!