ಕಲಬುರಗಿ: ಬಾವಿಗೆ ಬಿದ್ದು ಅಂಧ ಯುವತಿ ಸಾವು

By Kannadaprabha News  |  First Published Dec 28, 2023, 11:37 AM IST

ಸ್ಥಳಕ್ಕೆ ಬಂದು ಸ್ಥಳ ಪರಿಶೀಲಿಸಿದಾಗ ಕಬ್ಬು ಕಟಾವು ಮಾಡುವ ತಂಡದವರ ಜೋಪಡಿ ಪಕ್ಕದಲ್ಲಿ ಇರುವ ಭಾವಿ ಒಂದರಲ್ಲಿ ಕಣ್ಣು ಕಾಣದೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾಳೆ ಮಂಗಳವಾರ ರಾತ್ರಿ ಶವ ನೀರಿನ ಮೇಲೆ ತೇಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಮಲಾಪುರ(ಡಿ.28):  ತಾಲೂಕಿನ ದಸ್ತಾಪುರ ಗ್ರಾಮದಲ್ಲಿ ಕಬ್ಬು ಕಟಾವಿಗೆ ಬಂದಿದ್ದ ತಂಡದ ಕಣ್ಣು ಕಾಣದ ಯುವತಿಯೊಬ್ಬರು ರೈತ ಅಂಬರಾಯ ಕಾಮ ಅವರ ಹೊಲದ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆಳಂದ ತಾಲೂಕಿನ ಲಾಡ ಚಿಂಚೋಳಿ ಗ್ರಾಮದ ನಿವಾಸಿ ಕಾಜಲ್ ಲಕ್ಷ್ಮಣ (21) ಶವ ಪತ್ತೆಯಾಗಿದೆ.

ಈ ಪ್ರಕರಣ ಸಾಕಷ್ಟು ಸುದ್ದಿಗೆ ಗ್ರಾಸವಾಗಿದೆ. ಈ ಯುವತಿ ತನ್ನ ತಂಡದ ಜೊತೆಗೆ ಪ್ರತಿ ವರ್ಷವೂ ರೈತರ ಕಬ್ಬು ಕಟಾವು ಮಾಡಲು ಸಕ್ಕರೆ ಕಾರ್ಖಾನೆಯಿಂದ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡು ಪ್ರತಿ ವರ್ಷವೂ ಒಂದೊಂದು ತಾಲೂಕಿನ ಗ್ರಾಮಗಳ ರೈತರ ಹೊಲಗಳಿಗೆ ಹೋಗುತ್ತಾರೆ. ಅದರಂತೆ ದಸ್ತಾಪುರ ಗ್ರಾಮಕ್ಕೆ ರೈತರ ಕಬ್ಬು ಕಟಾವು ಮಾಡಲು ಹೋಗಿದ್ದ ವೇಳೆ ಬಾವಿಗೆ ಬಿದ್ದಿರುವ ಈ ಅಂಧ ಯುವತಿ ಕಾಜಲ್‌ಳನ್ನು ಜೋಪಡಿಯಲ್ಲಿ ಇರುವಂತೆ ಹೇಳಿ ಹೋಗಿದ್ದರು. ಕೆಲಸ ಮುಗಿಸಿ ಮರಳಿ ಬಂದಾಗ ಯುವತಿ ಕಾಣದೆ ಇರೋದನ್ನು ಕಂಡು ಗಾಬರಿಗೊಂಡ ತಂದೆ ತಾಯಿ ದಿನಪೂರ್ತಿ ಹುಡುಕಿದ್ದರು, ಸಿಗದೇ ಇದ್ದ ಸಮಯದಲ್ಲಿ ಮಹಾಂಗಾವ ಠಾಣೆಯಲ್ಲಿ ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದಾರೆ. 

Tap to resize

Latest Videos

undefined

ಯತ್ನಾಳ್‌ ಹೇಳಿಕೆಯಿಂದ ತನಿಖೆಗೆ ಬಲ, ದಾಖಲೆ ಬಿಡುಗಡೆ ಮಾಡಲಿ: ಪ್ರಿಯಾಂಕ್‌ ಖರ್ಗೆ

click me!