ತುಮಕೂರು : ರಾಗಿ ಖರೀದಿ ನೋಂದಣಿ ಸ್ಥಗಿತ: ರೈತರ ಪ್ರತಿಭಟನೆ

By Kannadaprabha News  |  First Published Dec 28, 2023, 9:52 AM IST

ಪಟ್ಟಣದ ಎಪಿಎಂಸಿ ಆವರಣದಲ್ಲಿ ಕಳೆದ 8 ದಿನಗಳ ಹಿಂದೆ ರಾಗಿ ಖರೀದಿ ಕೇಂದ್ರ ಆರಂಭವಾಗಿದ್ದು, ಕರ್ತವ್ಯದ ಮೂರು ದಿನಗಳ ನಂತರ ನೋಂದಣಿ ಬಂದ್ ಮಾಡಲಾಗಿದೆ. ದಿಢೀರ್ ಈ ನಿರ್ಧಾರದಿಂದ ರಾಗಿ ಖರೀದಿ ಕೇಂದ್ರದ ಮುಂದೆ ರೈತರು ಪ್ರತಿಭಟನೆ ನಡೆಸಿದರು.


  ಕುಣಿಗಲ್ :  ಪಟ್ಟಣದ ಎಪಿಎಂಸಿ ಆವರಣದಲ್ಲಿ ಕಳೆದ 8 ದಿನಗಳ ಹಿಂದೆ ರಾಗಿ ಖರೀದಿ ಕೇಂದ್ರ ಆರಂಭವಾಗಿದ್ದು, ಕರ್ತವ್ಯದ ಮೂರು ದಿನಗಳ ನಂತರ ನೋಂದಣಿ ಬಂದ್ ಮಾಡಲಾಗಿದೆ. ದಿಢೀರ್ ಈ ನಿರ್ಧಾರದಿಂದ ರಾಗಿ ಖರೀದಿ ಕೇಂದ್ರದ ಮುಂದೆ ರೈತರು ಪ್ರತಿಭಟನೆ ನಡೆಸಿದರು.

ತಾಲೂಕಿನ 26,000 ಎಕ್ಟರ್ ಭೂ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಈ ಬಾರಿ ದ ಹಿನ್ನೆಲೆಯಲ್ಲಿ ರೈತರು ಕೊಳವೆಬಾವಿ ಸೇರಿದಂತೆ ಟ್ಯಾಂಕರ್ ಮೂಲಕ ನೀರು ಹರಿಸಿ ಕೆಲವೆಡೆ ಉತ್ತಮ ರಾಗಿ ಬೆಳೆ ಪಡೆದಿದ್ದಾರೆ.

Tap to resize

Latest Videos

undefined

ವಾತಾವರಣದ ವ್ಯತ್ಯಾಸ ಹಾಗೂ ಬರಗಾಲದ ಸಮಸ್ಯೆಯಿಂದ ಕೆಲವೆಡೆ ಇಳುವರಿ ತುಂಬಾ ಕಡಿಮೆ ಆಗಿದೆ. ಕೃಷಿ ಇಲಾಖೆ ಮಾಹಿತಿ ಆಧರಿಸಿ ಅಂದಾಜು ಎರಡು ಲಕ್ಷ ಟನ್ ರಾಗಿ ಉತ್ಪಾದನೆ ಆಗಬಹುದೆಂದು ಅಂದಾಜಿಸಲಾಗಿದೆ. ರಾಗಿ ಒಕ್ಕಣೆ ಸಮಯದಲ್ಲಿ ಕೂಲಿ ಆಳುಗಳ ಸಮಸ್ಯೆ ಅತಿ ಹೆಚ್ಚಾಗಿ ಕಾಡುತ್ತಿದ್ದು ರೈತರು ಯಂತ್ರಗಳ ಮೊರೆ ಹೋಗಿದ್ದಾರೆ.

ತಮಿಳುನಾಡಿನ ಮೂಲದಿಂದ ಬಂದಿರುವ ಹಲವರು ರಾಗಿ ಒಕ್ಕಣೆ ಯಂತ್ರಗಳು 3500 ಮತ್ತೆ ಕೆಲವರು 3800 ಹೀಗೆ ವಿಭಿನ್ನವಾಗಿ ರೈತರಿಂದ ಹಣ ಪೀಕುತಿದ್ದಾರೆ. ಯಂತ್ರಗಳ ನಿರ್ವಹಣೆ ಮತ್ತು ಹಣದ ನಿರ್ವಹಣೆಯಲ್ಲಿ ಸ್ಥಳೀಯ ದಳ್ಳಾಳಿಗಳ ಲಾಭ ಹೆಚ್ಚಾಗುತ್ತಿದೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ತಾವು ಬೆಳೆದ ಅಲ್ಪ ರಾಗಿಯನ್ನು ಮಾಡಿರುವ ಸಾಲಕ್ಕಾಗಿ ಮಾರುವ ಉದ್ದೇಶದಿಂದ ರೈತರು ರಾಗಿ ಖರೀದಿ ಕೇಂದ್ರದ ಮುಂದೆ ಬಂದಾಗ ಅದು ಬಂದ್ ಆಗಿದ್ದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದರು.

ರಾಗಿ ಖರೀದಿ ತಂತ್ರಾಂಶವನ್ನು ದಿಢೀರ್ ಬಂದ್ ಮಾಡಿದ್ದ ಹಿನ್ನೆಲೆಯಲ್ಲಿ ನೂರಾರು ರೈತರು ಆಕ್ರೋಶಬರಿತರಾಗಿ ಖರೀದಿ ಕೇಂದ್ರದ ಮುಂದೆ ಪ್ರತಿಭಟನೆ ಮುಂದಾದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತರು, ಬಯೋಮೆಟ್ರಿಕ್ ಮೂಲಕ ರಾಗಿ ಖರೀದಿ ಮಾಡುತ್ತಿದ್ದಾರೆ. ಕೆಲವರು ವಯಸ್ಸಾದ ವ್ಯಕ್ತಿಗಳಿಗೆ ಬಯೋಮೆಟ್ರಿಕ್ ಬರುತ್ತಿಲ್ಲ. ಈ ಸಮಸ್ಯೆಯಿಂದ ಅವರು ರಾಗಿಯನ್ನು ಮಾರಾಟ ಮಾಡಲು ಕಷ್ಟ ಆಗುತ್ತಿದೆ. ಸರ್ಕಾರ ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.

ತಾಲೂಕಿನಲ್ಲಿ ಸಂಪೂರ್ಣವಾಗಿ ಬಹುತೇಕ ತಂದೆ, ತಾಯಿ, ಅಜ್ಜಿ, ತಾತ ಇವರ ಹೆಸರಿನಲ್ಲಿ ಭೂಮಿಗಳಿವೆ ಕೆಲ ಪಾಣಿದಾರರು ಈಗಾಗಲೇ ಮೃತರಾಗಿದ್ದು ಅವರ ಮಕ್ಕಳು ರಾಗಿ ವ್ಯವಸಾಯ ಮಾಡಿದ್ದು ಅದನ್ನು ಅವರು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲವೇ ದಿನಗಳಲ್ಲಿ ಕಾರ್ಯನಿರ್ವಹಿಸಿ ಸ್ಥಗಿತವಾದ ರಾಗಿ ಖರೀದಿ ಕೇಂದ್ರದ ಮುಂದೆ ರೈತರು ಆಕ್ರೋಶ ವ್ಯಕ್ತಪಡಿಸಿ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು,

ವ್ಯವಸ್ಥಾಪಕ ಕೃಷ್ಣಮೂರ್ತಿ ಮಾತನಾಡಿ, ಇದು ಕೇವಲ ಕುಣಿಗಲ್ ಕೇಂದ್ರದ ಸಮಸ್ಯೆ ಅಲ್ಲ ಸಂಪೂರ್ಣ ರಾಜ್ಯದಲ್ಲಿ ಇದೇ ರೀತಿ ಸಮಸ್ಯೆ ಇದೆ. ನಾವು ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದು ರೈತರನ್ನು ಸಮಾಧಾನ ಪಡಿಸುತ್ತಿದ್ದರು.

click me!