ಸಂಪೂರ್ಣ ಅಂಧತ್ವ ಹೊಂದಿದ ಯುವತಿಯ ಕೈ ಹಿಡಿಯುವ ಮೂಲಕ ಶಿವಮೊಗ್ಗದಲ್ಲಿ ಅಕೌಂಟಂಟ್ ಓರ್ವರು ಆದರ್ಶ ಮೆರೆದಿದ್ದಾರೆ.
ಭದ್ರಾವತಿ [ಫೆ.07]: ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕೆಂಬ ಹಂಬಲದಲ್ಲಿರುವ ಅಂಧ ವಿಕಲಚೇತನರಿಬ್ಬರು ದಾಂಪತ್ಯ ಮೂಲಕ ನವ ಜೀವನಕ್ಕೆ ಕಾಲಿರಿಸಿದ್ದಾರೆ. ಆ ಮೂಲಕ ಸಮಾಜದ ಇತರರಿಗೂ ಮಾದರಿಯಾಗಿ ಗಮನ ಸೆಳೆದಿದ್ದಾರೆ. ಟಿ.ಡಿ. ಉಲ್ಲಾಸ್ ಹಾಗೂ ಕಾರವಾರ ಮೂಲದ ವೀಣಾ ವಿವಾಹ ಬಂಧನಕ್ಕೊಳಗಾದ ಅಂಧ ದಂಪತಿ.
ಹೊಸಮನೆ ಅಶ್ವಥ್‌ನಗರದ ದಾಕ್ಷಾಯಣಿ ಮತ್ತು ತಿಪ್ಪೇಶಪ್ಪ ದಂಪತಿ ಪುತ್ರ ಟಿ.ಡಿ. ಉಲ್ಲಾಸ್‌ಕುಮಾರ್ ಭಾಗಶಃ ಶೇ.80ರಷ್ಟುಅಂಧತ್ವ ಹೊಂದಿದ್ದಾರೆ. ಎಲ್ಲರಂತೆ ಬದುಕು ಕಟ್ಟಿಕೊಳ್ಳಬೇಕೆಂಬ ಹಂಬಲದೊಂದಿಗೆ ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ (ಎಂ.ಕಾಂ) ಪದವಿ ಪಡೆದಿದ್ದಾರೆ. ಈಗಾಗಲೇ ಲೆಕ್ಕ ಪರಿಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಧಾರೆ ಸೀರೆ ವಿಚಾರಕ್ಕೆ ಮುರಿದುಬಿತ್ತು ಲವ್ ಮ್ಯಾರೇಜ್, ವರ ಎಸ್ಕೇಪ್..
ಮೂಲತಃ ಕಾರವಾರ ಕೆರವಡಿ ನಿವಾಸಿಗಳಾದ ಸುಧಾ ಮತ್ತು ಶ್ರೀಕಾಂತ ದಂಪತಿ ಪುತ್ರಿ, ನಗರದ ನ್ಯೂಟೌನ್ ಸರ್ ಎಂ.ವಿ. ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪ್ರಥಮ ಬಿ.ಎ. ವ್ಯಾಸಂಗ ನಡೆಸುತ್ತಿದ್ದ ವೀಣಾ (ಕೆ.ಎಸ್. ಶೀಲಾ) ಅವರನ್ನು ಉಲ್ಲಾಸ್ ಅವರು ವಿವಾಹವಾಗಿದ್ದಾರೆ. ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳುವ ಜೊತೆಗೆ ಪೂರ್ಣ ಪ್ರಮಾಣದಲ್ಲಿ ಅಂಧತ್ವ ಹೊಂದಿರುವ ಯುವತಿಯನ್ನು ವಿವಾಹವಾಗಿ ಆದರ್ಶ ಮೆರೆದಿರುವುದು ವಿಶೇಷ.
ತಾಯಿ, ಸಹೋದರನಿಗೆ ಮುಜುಗರ ತಪ್ಪಿಸಲು ಕೊಲೆ: ಬಾಯ್ಬಿಟ್ಟ ಮಗಳು ಅಮೃತಾ!...
ನ್ಯೂಟೌನ್ ಸಿದ್ಧಾರ್ಥ ಅಂಧರ ಕೇಂದ್ರದಲ್ಲಿ ಆಶ್ರಯ ಪಡೆದು ವಿದ್ಯಾಭ್ಯಾಸ ನಡೆಸುತ್ತಿದ್ದ ವೀಣಾ ಅವರು ಉಲ್ಲಾಸ್‌ಕುಮಾರ್ ಅವರಿಗೆ 1 ವರ್ಷದಿಂದ ಪರಿಚಯ ವಿದ್ದರು. ಪ್ರಥಮ ಬಿ.ಎ. ಮುಗಿದು ದ್ವಿತೀಯ ಬಿ.ಎ. ಸೇರ್ಪಡೆ ಆಗಬೇಕಿದ್ದ ವೀಣಾ ಅವರನ್ನು ವಿವಾಹವಾಗಲು ಉಲ್ಲಾಸ್ ಕುಮಾರ್ ಇಚ್ಛಿಸಿದ್ದರು. ಅದರಂತೆ ಇವರಿಬ್ಬರ ವಿವಾಹಕ್ಕೆ ಎರಡು ಕುಟುಂಬದವರು ಸಹಮತ ವ್ಯಕ್ತಪಡಿಸಿದ್ದಾರೆ. ಸಿದ್ಧಾರೂಢನಗರದ ಬಸವೇಶ್ವರ ಸಭಾ ಭವನದಲ್ಲಿ ನ.3ರಂದು ವಿವಾಹವಾಗಿದ್ದಾರೆ. ನಗರದ ಕೆಲವು ಗಣ್ಯರು ಅಭಿನಂದಿಸುವ ಜೊತೆಗೆ ಇವರ ಧೈರ್ಯವನ್ನು ಕೊಂಡಾಡಿದ್ದಾರೆ.