ಉತ್ತರ ಕನ್ನಡ : ಬಿಜೆಪಿ ಪಾಲಾದ ಸಹಕಾರಿ ಸಂಘಗಳು

By Kannadaprabha News  |  First Published Feb 7, 2020, 1:26 PM IST

ಇತ್ತ ಉತ್ತರ ಕನ್ನಡದ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಜ್ ಹೆಬ್ಬಾರ್ ಯಡಿಯೂರಪ್ಪ ಸಂಪುಟದಲ್ಲಿ ಸಚಿವ ಸ್ಥಾನ ಪಡೆದಿದ್ದರೆ, ಉತ್ತರ ಕನ್ನಡದಿಂದ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಮುಂಡಗೋಡ ತಾಲೂಕಿನ ಸಹಕಾರಿ ಸಂಘಗಳು ಬಿಜೆಪಿ ಪಾಲಾಗಿವೆ. 


ಮುಂಡಗೋಡ [ಫೆ.07]:  ತಾಲೂಕಿನ ವಿವಿಧ ಸೇವಾ ಸಹಕಾರಿ ಸಂಘಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸುವ ಮೂಲಕ ಬಹುತೇಕ ಸೇವಾ ಸಹಕಾರಿ ಸಂಘಗಳಲ್ಲಿ ಅಧಿಕಾರ ಹಿಡಿದಿದ್ದಾರೆ. ತಾಲೂಕಿನ ಮಳಗಿ ಸೇವಾ ಸಹಕಾರಿ ಸಂಘದಲ್ಲಿ ಹದಿಮೂರು ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಎಲ್ಲ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಜಯಗಳಿಸಿದ್ದಾರೆ.

ಪ್ರಮೋದ ಢವಳೆ, ಗಣಪತಿ ಕತ್ಲೇರ, ಜಗದೀಶ ನಾಯ್ಕ, ಮಂಜುನಾಥ ಲಕ್ಷ್ಮೀಪುರ, ನಾಗರಾಜ ಪಾಟೀಲ, ಪ್ರಭಾಕರ ಆಲದಕಟ್ಟಿ, ಚಂದ್ರಗೌಡ ಪಾಟೀಲ, ಮಂಜುನಾಥ ಹರಿಜನ, ಪರಮೇಶ್ವರ ಇಡಗೋಡ, ಸಣ್ಣಪ್ಪ ನಾಯ್ಕ, ಚೇತನ ನಾಯ್ಕ, ಗೀತಾರಾಯ್ಕರ, ಮಮತಾ   ಗುಡಿಗಾರ ಆಯ್ಕೆಯಾಗಿದ್ದಾರೆ.

Latest Videos

undefined

ಚವಡಳ್ಳಿ ಮಲವಳ್ಳಿ ಸೇವಾ ಸಹಕಾರಿ ಸಂಘಕ್ಕೆ ನಿಂಗಪ್ಪ ಭದ್ರಾಪುರ, ಧರ್ಮಣ್ಣ ಆರೇಗೋಪ್ಪ, ಶಿವಾನಂದ ಮಡ್ಲಿ, ಪ ರಶುರಾಮ ತಹಸೀಲ್ದಾರ್, ಶಿವಾನಂದ ಬಿಸವಣ್ಣವರ, ಪೀರಪ್ಪ ನ್ಯಾಸರ್ಗಿ, ಹನ್ಮಂತ ವಾಲ್ಮೀಕಿ, ಲಕ್ಷ್ಮಣ ರಾಠೋಡ, ಖಾದರಸಾಬ್ ದುಂಡಸಿ, ಮೌಲಾಸಾಬ್ ನದಾಫ್ ಆಯ್ಕೆಯಾಗಿದ್ದಾರೆ. ಆಗಾಖಾನ ಪಠಾಣ, ಯಲ್ಲವ್ವ ಮಾಯಣ್ಣವರ, ರಾಜಕ್ಕ ಹಾನಗಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಹದಿಮೂರು ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಹತ್ತು ಸ್ಥಾನಗಳನ್ನು ಗೆದ್ದಿದ್ದಾರೆ. ಇಂದೂರ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಯಲ್ಲಪ್ಪ ಕದಂ, ಸುಭಾಸ ಮಾಡಲಗಿ, ಧರ್ಮರಾಜ ನಾಯ್ಕ, ಬಸಪ್ಪ ಗಲಬಿ, ರವೀಂದ್ರ ದುಗ್ಗಳ್ಳಿ, ಮಂಜುನಾಥ ನಡಗೇರಿ, ಮಂಜುನಾಥ ಮುಂಗೈ, ಫಕ್ಕೀರಪ್ಪ ಚಳಮಟ್ಟಿ, ಚಂದ್ರಶೇಖರ ನಡಗೇರಿ, ಸಾಯಬಜಾನ ಮೇಳ್ಳಾಗಟ್ಟಿ, ಶಿವಾಜಿ ದೇವಿಕೊಪ್ಪ, ಶಿವಾಜಿ ದೇವಿಕೊಪ್ಪ, ಪಾರ್ವತೆವ್ವ ಪುಟಗಿ, ಶಿವಕ್ಕ ಬಳ್ಳಾರಿ ಆಯ್ಕೆಯಾಗಿದ್ದು, ಹದಿಮೂರು ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಹನ್ನೆರಡು ಸ್ಥಾನಗಳಲ್ಲಿ ಜಯಗಳಿಸಿದ್ದಾರೆ.

ಕಾರವಾರ - ಭಟ್ಕಳ ಮಾರ್ಗದಲ್ಲಿ ಸಂಚರಿಸಲು ಇನ್ಮುಂದೆ ಟೋಲ್...

ಕಾತೂರ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ಈರಯ್ಯ ಹಿರೇಮಠ, ಜಗದೀಶ ಪಾಟೀಲ, ನಿತಿನ್ ರಾಯ್ಕರ, ಮಂಜುನಾಥ ಕುರ್ಸಾಪುರ, ಶಿವಾಜಿ ಶಿಂದೆ, ಹಾಲಪ್ಪ ರಾಣೆಬೆನ್ನೂರ, ಈರಮ್ಮ ದೊಡ್ಡಕಂತಿಮಠ, ಫಕ್ಕೀರಪ್ಪ ಹರಿಜನ, ಫಕ್ಕೀರಪ್ಪ ಯಲ್ಲಾಪುರ, ಬಸವರಾಜ ಕುಂಬಾರ, ಮಧುಕರ ತಳವಾರ, ರಾಜವ್ವ ಮಿಶ್ರಿಕೋಟಿ, ಹನ್ಮವ್ವ ವಡ್ಡರ ಜಯಗಳಿಸಿದ್ದಾರೆ.

ಚಿಗಳ್ಳಿ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿಯೂ ಬಿಜೆಪಿ ಬೆಂಬಲಿತರು ಜಯಗಳಿಸಿದ್ದಾರೆ. ಎಲ್.ಟಿ. ಪಾಟೀಲ, ರಾಜಶೇಖರ ಹಿರೇಮಠ, ಮಲ್ಲಿಕಾರ್ಜುನ ಅಂತೋಜಿ, ಮಂಜುನಾಥ ನೆಗಡೆ, ಪುಂಡಲಿಕ ಕುಸೂರ, ನಾಮದೇವ ಜಾಧವ, ಗೋಪಾಲ ಚಂದಾಪುರ, ಗಿರಿಮಲ್ಲೇಶಿ ಗಾಂಜಾನವರ, ಶಿವರಾಯ ತಳವಾರ, ತಿರುಪತಿ ವಡ್ಡರ, ಸುಜಾತಾ ನಿಂಬಾಯಿ, ಶಾಂತವ್ವ ಕೇರೆಮನೆ, ಕಲ್ಮೇಶ ಆಲದಕಟ್ಟಿ ಆಯ್ಕೆಯಾಗಿದ್ದಾರೆ.

click me!