ಸೋತವರಿಗೂ ಸಚಿವ ಸ್ಥಾನ: ಬಿಎಸ್‌ವೈಗೆ ಬ್ಲಾಕ್‌ಮೇಲ್..!

By Suvarna News  |  First Published Dec 14, 2019, 3:44 PM IST

ಸಚಿವ ಸ್ಥಾನಕ್ಕಾಗಿ ಸಿಎಂ ಯಡಿಯೂರಪ್ಪ ಅವರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಸೋತವರಿಗೂ ಸಚಿವ ಸ್ಥಾನ‌ ನೀಡುವಂತೆ ಬಿಎಸ್‌ವೈಗೆ ಬ್ಲಾಕ್ ಮೇಲ್ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಎನ್. ಹೆಚ್. ಶಿವಶಂಕರರೆಡ್ಡಿ ಹೇಳಿದ್ದಾರೆ.


ಚಿಕ್ಕಬಳ್ಳಾಪುರ(ಡಿ.14): ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ತುಂಬಾ ದಿನ ಉಳಿಯಲ್ಲ. ಅನರ್ಹರಾಗಿದ್ದವರೆಲ್ಲಾ ಈಗಲು  ಬ್ಲಾಕ್ ಮೇಲ್ ಗಿರಾಕಿಗಳು ಎಂದು ಮಾಜಿ ಸಚಿವ ಎನ್. ಹೆಚ್. ಶಿವಶಂಕರರೆಡ್ಡಿ ಹೇಳಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕೃತಜ್ಞತೆ ಸಭೆ ಬಳಿಕ ಮಾತನಾಡಿದ ಅವರು, ಸಚಿವ ಸ್ಥಾನಕ್ಕಾಗಿ ಸಿಎಂ ಯಡಿಯೂರಪ್ಪ ಅವರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಸೋತವರಿಗೂ ಸಚಿವ ಸ್ಥಾನ‌ ನೀಡುವಂತೆ ಬಿಎಸ್‌ವೈಗೆ ಬ್ಲಾಕ್ ಮೇಲ್ ಮಾಡಲಾಗುತ್ತಿದೆ. ಇದರಿಂದ ಬಿಜೆಪಿ ಪಕ್ಷದ ಹಿರಿಯರಿಗೆ ಕಿರಿಕಿರಿಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Tap to resize

Latest Videos

undefined

'ಇವರೆಂತ ಕಳ್ಳನ್ ಮಕ್ಳು'..? ದೇವೇಗೌಡ ಕುಟುಂಬದ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ

ಸಚಿವರಾಗಬೇಕಿರುವ ಹಿರಿಯ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನ ಕೈ ತಪ್ಪಲಿದೆ. ಸರ್ಕಾರ ‌ಜನಪರ ಆಡಳಿತ ನೀಡುವಲ್ಲಿ ವಿಫಲವಾಗಿದೆ. ಚುನಾವಣೆ ನಡೆಸೋದ್ರಲ್ಲಿ ಸರ್ಕಾರ ಬ್ಯುಸಿಯಾಗಿತ್ತು ಎಂದು ಹೇಳಿದ್ದಾರೆ.

'ಕೆ.ಆರ್. ಪೇಟೆಯಲ್ಲಿ JDS ಸೋತಿದ್ದು ಹೊಟ್ಟೆ ಉರಿಯುತ್ತಿದೆ'..!

ಈಗಾಗಲೇ ಚುನಾವಣೆಯಲ್ಲಿ ಸೋತವರಿಗೂ ಸಚಿವ ಸ್ಥಾನ ನೀಡುವ ಬಗ್ಗೆ ಮಾತುಗಳು ಕೇಳಿ ಬರುತ್ತಿದ್ದು, ಡಿಸಿಎಂ ಸ್ಥಾನಕ್ಕೂ ಶ್ರೀರಾಮುಲು ಹಾಗೂ ರಮೇಶ್ ಜಾರಕಿಹೊಳಿ ಹೆಸರು ಕೇಳಿ ಬರುತ್ತಿದೆ. ಹುಣಸೂರಿನಲ್ಲಿ ಪರಾಜಿತ ಅಭ್ಯರ್ಥಿ ವಿಶ್ವನಾಥ್‌ ಅವರೂ ಸಚಿವ ಸ್ಥಾನ ನಿರೀಕ್ಷಿಸಿರುವ ಬಗ್ಗೆ ಮಾತುಗಳು ಕೇಳಿ ಬಂದಿತ್ತು.

ಡಿಸೆಂಬರ್ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

click me!