ಬಿಳಿಗಿರಿರಂಗನಬೆಟ್ಟ ವನ್ಯಧಾಮದಲ್ಲಿ ಕಪ್ಪುಚಿರತೆ ಪತ್ತೆ

Published : May 22, 2022, 05:58 AM IST
ಬಿಳಿಗಿರಿರಂಗನಬೆಟ್ಟ ವನ್ಯಧಾಮದಲ್ಲಿ ಕಪ್ಪುಚಿರತೆ ಪತ್ತೆ

ಸಾರಾಂಶ

*  ಎರಡೂ ವನ್ಯಧಾಮಗಳ ನಡುವಿನ ಕಾರಿಡಾರ್‌ ಸಂರಕ್ಷಣೆ ಅಗತ್ಯ: ವನ್ಯ ತಜ್ಞ ಗುಬ್ಬಿ *  ಬಹುತೇಕ ವನ್ಯಧಾಮದಲ್ಲೂ ಕಪ್ಪು ಚಿರತೆ *  ಕಪ್ಪು ಚಿರತೆಯು ತನ್ನ ಆವಾಸ ಸ್ಥಾನವನ್ನು ಪಕ್ಕದ ವನ್ಯಜೀವಧಾನಕ್ಕೆ ವಿಸ್ತರಿಸಿರುವುದು ಸ್ಪಷ್ಟ 

ಬೆಂಗಳೂರು(ಮೇ.22):  ಎರಡು ವರ್ಷಗಳ ಹಿಂದೆ ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿ ಪತ್ತೆಯಾಗಿದ್ದ ಕಪ್ಪು ಚಿರತೆಯೊಂದು ಈಗ ಬಿಳಿಗಿರಿರಂಗನಬೆಟ್ಟ ವನ್ಯಜೀವಿಧಾಮದಲ್ಲೂ ಪತ್ತೆಯಾಗಿದೆ. ಹೀಗಾಗಿ ಈ ಎರಡೂ ವನ್ಯಜೀವಿಧಾಮದ ಮಧ್ಯೆದ ಕಾರಿಡಾರ್‌ ಸಂರಕ್ಷಣೆಯ ತುರ್ತು ಅಗತ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ಹೊಳೆಮತ್ತಿ ನೇಚರ್‌ ಫೌಂಡೇಶನ್‌ನಲ್ಲಿ ಡಾ.ಸಂಜಯ್‌ ಗುಬ್ಬಿ ಮತ್ತವರ ತಂಡ ಬಿಳಿಗಿರಿರಂಗನಬೆಟ್ಟದಲ್ಲಿ ನಡೆಸುತ್ತಿರುವ ಅಧ್ಯಯನದಲ್ಲಿ 6 ವರ್ಷದ ಕಪ್ಪು ಚಿರತೆಯೊಂದು ಪತ್ತೆಯಾಗಿತ್ತು. ಈ ಕಪ್ಪು ಚಿರತೆಯು 2020 ಆಗಸ್ಟ್‌ನಲ್ಲಿ ಮೊದಲ ಬಾರಿಗೆ ಅರಣ್ಯ ಇಲಾಖೆಯ ಮಲೆಮಹದೇಶ್ವರ ವನ್ಯಜೀವಿಧಾಮದ ಪಿ.ಜಿ.ಪಾಳ್ಯ ವಲಯದಲ್ಲಿ ನಡೆಸಿದ ಕ್ಯಾಮೆರಾ ಟ್ರ್ಯಾಪ್‌ ನಲ್ಲಿ ಕಾಣಿಸಿಕೊಂಡಿತ್ತು. ಎರಡು ವರ್ಷಗಳ ಬಳಿಕ ಪಕ್ಕದ ಬಿಳಿಗಿರಿರಂಗನಬೆಟ್ಟ ವನ್ಯಜೀವಿಧಾಮದಲ್ಲಿ ಪತ್ತೆಯಾಗಿದೆ. ಈ ಮೂಲಕ ಕಪ್ಪು ಚಿರತೆಯು ತನ್ನ ಆವಾಸ ಸ್ಥಾನವನ್ನು ಪಕ್ಕದ ವನ್ಯಜೀವಧಾನಕ್ಕೆ ವಿಸ್ತರಿಸಿರುವುದು ಸ್ಪಷ್ಟವಾಗಿದೆ. ಹೀಗಾಗಿ ಎರಡು ವನ್ಯಜೀವಿಧಾಮದ ನಡುವೆ ಕಾರಿಡಾರ್‌ ಸಂರಕ್ಷಿಸಬೇಕು ಎಂದು ವನ್ಯಜೀವಿ ತಜ್ಞ ಡಾ.ಸಂಜಯ್‌ ಗುಬ್ಬಿ ಅಭಿಪ್ರಾಯಪಟ್ಟಿದ್ದಾರೆ.

6 ತಿಂಗಳ ಬಳಿಕ ಕಾಕನಕೋಟೆ ಅರಣ್ಯದಲ್ಲಿ ಕರಿ ಚಿರತೆ ಪ್ರತ್ಯಕ್ಷ!

ಬಹುತೇಕ ವನ್ಯಧಾಮದಲ್ಲೂ ಕಪ್ಪು ಚಿರತೆ:

ನಾಗರಹೊಳೆಯ ಕಾಕನಕೋಟೆ ಭಾಗದಲ್ಲಿ ಕಂಡುಬರುವ ಕಪ್ಪು ಚಿರತೆಯಂತೂ ವನ್ಯಜೀವಿ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯಾಗಿದೆ. ಕಪ್ಪು ಚಿರತೆಗಳು ರಾಜ್ಯದ ನಾಗರಹೊಳೆ, ಬಂಡೀಪುರ, ಭದ್ರಾ, ಕಾಳಿ ಮತ್ತು ಬಿಳಿಗಿರಿರಂಗನಬೆಟ್ಟ ವನ್ಯಧಾಮ, ಹುಲಿಸಂರಕ್ಷಣಾಧಾಮಗಳಲ್ಲಿ ಕಂಡುಬಂದಿವೆ. ಅದರೊಡನೆ ಬಂಡೀಪುರ ಹುಲಿ ಸಂರಕ್ಷಣಾ ಯೋಜನಾ ಪ್ರದೇಶಕ್ಕೆ ಹೊಂದಿಕೊಂಡಿರುವ ನುಗು ವನ್ಯಜೀವಿಧಾಮದಲ್ಲೂ ದಾಖಲಾಗಿದೆ ಡಾ.ಸಂಜಯ್‌ ಗುಬ್ಬಿ ಮಾಹಿತಿ ನೀಡಿದ್ದಾರೆ.

ಕಪ್ಪು ಚಿರತೆಗಳು ವನ್ಯಜೀವಿಧಾಮಗಳಾಚೆ ಹೊನ್ನಾವರ, ಉಡುಪಿ, ಕುಂದಾಪುರ ಮತ್ತಿತರ ಪ್ರದೇಶಗಳಲ್ಲೂ ಕಾಣಿಸಿಕೊಳ್ಳುತ್ತಿವೆ. ಬಹುಶಃ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅತಿ ಹೆಚ್ಚು ಕಪ್ಪು ಚಿರತೆಗಳ ಸಾಂದ್ರತೆ ಇದ್ದು, ಅರಣ್ಯ ಇಲಾಖೆಯ ಕ್ಯಾಮರಾ ಟ್ರ್ಯಾಪ್‌ಗಳಲ್ಲಿ ಸಾಕಷ್ಟು ಕಪ್ಪು ಚಿರತೆಗಳು ದಾಖಲಾಗುತ್ತವೆ ಎಂದು ಡಾ.ಸಂಜಯ್‌ ಗುಬ್ಬಿ ಮಾಹಿತಿ ನೀಡಿದ್ದಾರೆ.
 

PREV
Read more Articles on
click me!

Recommended Stories

ಮಾಂಸದ ಮುದ್ದೆಯಂಥಾದ ಮೃತದೇಹದ ಮುಂದೆ ಮಗನ ಕಣ್ಣೀರು, ಪಂಚಭೂತದಲ್ಲಿ ಲೀನರಾದ ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ!
ರೈತರ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸಲು 'ಅಂತಾರಾಷ್ಟ್ರೀಯ ಸ್ಯಾಂಡ್‌ವಿಚ್ ಸ್ನಾತಕೋತ್ತರ ಕೋರ್ಸ್': ಸಿಎಂ ಸಿದ್ದರಾಮಯ್ಯ