15 ವರ್ಷದ ಬಳಿಕ JDS ಆಡಳಿತ ಅಂತ್ಯ : ಅಧಿಕಾರ ಕಸಿದ ಬಿಜೆಪಿ

By Kannadaprabha News  |  First Published Sep 30, 2020, 2:09 PM IST

ಕಳೆದ 15 ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಜೆಡಿಎಸ್ ಆಡಳಿತವನ್ನು ಬಿಜೆಪಿ ಕಸಿದಿದೆ.  ಬಿಜೆಪಿ ತಂತ್ರ ಫಲಕೊಟ್ಟಿದೆ.


ಚಿಕ್ಕಮಗಳೂರು (ಸೆ.30):  ಕಳೆದ 15 ವರ್ಷಗಳಿಂದ ಡಿಸಿಸಿ ಬ್ಯಾಂಕಿನಲ್ಲಿ ಹಿಡಿತ ಸಾಧಿಸಿದ್ದ ಜೆಡಿಎಸ್‌ಗೆ ನಡೆದ ಚುನಾವಣೆಯಲ್ಲಿ ಹಿನ್ನಡೆಯಾಗಿದ್ದು, ಮೊದಲ ಬಾರಿಗೆ ಬಿಜೆಪಿಗೆ ಗೆಲುವಾಗಿದೆ.

ಬಿಜೆಪಿ, ಕೊನೆ ಕ್ಷಣದಲ್ಲಿ ಪ್ರಯೋಗ ಮಾಡಿದ ಬ್ರಹ್ಮಾಸ್ತ್ರ ಜೆಡಿಎಸ್‌ನ ಭದ್ರಕೋಟೆ ಛಿದ್ರ ಮಾಡಿದೆ. ಆಡಳಿತ ಮಂಡಳಿಯ 13 ಸ್ಥಾನಗಳಲ್ಲಿ ಕೇಸರಿ ಪಡೆ 10 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಸ್ಪಷ್ಟಬಹುಮತದೊಂದಿಗೆ ಹೊರ ಹೊಮ್ಮಿದ್ದು, ಅಧಿಕಾರದ ಗದ್ದುಗೆ ಏರಲು ತುದಿಗಾಲಲ್ಲಿ ನಿಂತಿದೆ.

Tap to resize

Latest Videos

ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳಲ್ಲಿ ವಿಧಾನಪರಿಷತ್‌ ಉಪ ಸಭಾಪತಿ ಎಸ್‌.ಎಲ್‌. ಧರ್ಮೇಗೌಡ ಅವರಿಗೆ ಗೆಲುವಾಗಿದ್ದು, ಅವರ ಸಹೋದರ ವಿಧಾನಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ ಅವರಿಗೆ ಸೋಲಾಗಿದೆ. ಕಡೂರು ಕ್ಷೇತ್ರದ ಶಾಸಕ ಬೆಳ್ಳಿ ಪ್ರಕಾಶ್‌ ಹಾಗೂ ತರೀಕೆರೆ ಶಾಸಕ ಡಿ.ಎಸ್‌. ಸುರೇಶ್‌ ಅವರು ಗೆಲುವು ಸಾಧಿಸಿದ್ದಾರೆ.

15 ವರ್ಷದ ಬಳಿಕ ಜೆಡಿಎಸ್‌ಗೆ ಭರ್ಜರಿ ಲಾಟರಿ : ಅಧಿಕಾರ ಚುಕ್ಕಾಣಿ

ಮಂಗಳವಾರ 12 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಇದರಲ್ಲಿ 9 ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿತರು ಜಯಗಳಿಸಿದ್ದಾರೆ. ಇನ್ನುಳಿದ ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರದ 2 ಸ್ಥಾನಗಳಲ್ಲಿ ಜೆಡಿಎಸ್‌ ಬೆಂಬಲಿತರು ವಿಜೇತರಾಗಿದ್ದಾರೆ. ಎನ್‌.ಆರ್‌.ಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅವಿರೋಧವಾಗಿ ಆಯ್ಕೆ ಆಗಿರುವ ಸಂದೀಪ್‌ಕುಮಾರ್‌ ಅವರು ಬಿಜೆಪಿ ಬೆಂಬಲಿತರಾಗಿದ್ದು, ಅಂದರೆ, 13 ಸ್ಥಾನಗಳ ಪೈಕಿ 10 ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡಿದ್ದರೆ, ಜೆಡಿಎಸ್‌ 2 ಸ್ಥಾನ ಪಡೆದಿದೆ.

ವಿಜೇತರ ವಿವರ:

ಚಿಕ್ಕಮಗಳೂರು ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ: ಎಂ.ಎಸ್‌. ನಿರಂಜನ್‌, ಎಚ್‌.ಬಿ. ಸತೀಶ್‌.

ತರೀಕೆರೆ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ: ಕೆ.ಆರ್‌. ಆನಂದಪ್ಪ, ಡಿ.ಎಸ್‌. ಸುರೇಶ್‌.

ಮೂಡಿಗೆರೆ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ: ಎಚ್‌.ಬಿ. ಶಿವಣ್ಣ,

ಕೊಪ್ಪ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ: ಎಸ್‌.ಎನ್‌. ರಾಮಸ್ವಾಮಿ.

ಶೃಂಗೇರಿ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ: ಡಿ.ಸಿ. ಶಂಕರಪ್ಪ.

ಕಡೂರು ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ: ಬೆಳ್ಳಿ ಪ್ರಕಾಶ್‌, ಎಸ್‌.ಜಿ. ರಾಮಪ್ಪ,

ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರ: ಎಸ್‌.ಎಲ್‌. ಧರ್ಮೇಗೌಡ, ಎಂ. ಪರಮೇಶ್ವರಪ್ಪ.

ಪ್ರಾಥಮಿಕ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕು, ಪಟ್ಟಣ ಸಹಕಾರ ಬ್ಯಾಂಕುಗಳು: ಟಿ.ಎಲ್‌. ರಮೇಶ್‌.

ಬಿಜೆಪಿ ಗೂಗ್ಲಿಗೆ ಜೆಡಿಎಸ್‌ ಬೋಲ್ಡ್‌

RR ನಗರ ಉಪಕದನ: ಮುನಿರತ್ನ ವಿರುದ್ಧ ಅಚ್ಚರಿ ಅಭ್ಯರ್ಥಿ ನಿಲ್ಲಿಸಲು ಡಿಕೆಶಿ ಪ್ಲಾನ್ ..

ಈ ಬಾರಿಯ ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಗೆಲ್ಲಬೇಕೆಂಬುದು ಬಿಜೆಪಿಯ ಪ್ರಮುಖ ಗುರಿಯಾಗಿತ್ತು. ಇದಕ್ಕಾಗಿ ಹಲವು ದಿನಗಳಿಂದ ಹೋಂ ವರ್ಕ್ ಮಾಡುತ್ತಾ ಬಂದಿತು. ಜೆಡಿಎಸ್‌ ಬೆಂಬಲಿತ ಸೊಸೈಟಿಗಳ ಪಟ್ಟಿಯನ್ನು ಸಿದ್ಧಪಡಿಸಿತು.

ಇದಕ್ಕಾಗಿ ಕಮಲ ಪಡೆ ಆಯ್ಕೆ ಮಾಡಿಕೊಂಡ ತಾಲೂಕು ಚಿಕ್ಕಮಗಳೂರು. ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಯ ಚುನಾವಣೆಯಲ್ಲಿ ವೋಟ್‌ ಮಾಡಲು ಸೂಚಿಸಿರುವ ವ್ಯಕ್ತಿಗಳ ಪಟ್ಟಿಯನ್ನು ಸಹ ಸಿದ್ಧಪಡಿಸಿತು.

ಆಗ, ಸೊಸೈಟಿಗಳು ಸೂಚಿಸಿರುವ ವ್ಯಕ್ತಿಗಳ ಹೆಸರು ಹಾಗೂ ಅವರು ಮಾಡಿರುವ ಸಹಿಯಲ್ಲಿ ವ್ಯತ್ಯಾಸ ಕಂಡು ಬಂದಿದ್ದರಿಂದ ಸರ್ಕಾರದಿಂದ ಇದರ ಬಗ್ಗೆ ಪರಿಶೀಲನೆ ನಡೆಸಲು ನೋಡಲ್‌ ಆಫೀಸರ್‌ ಓರ್ವರನ್ನು ನೇಮಕ ಮಾಡಲಾಗಿತ್ತು. ಅವರು ಕಳೆದ ಒಂದು ವಾರದ ಹಿಂದೆಯೇ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.

ಈ ಕೆಲಸ ಗೌಪ್ಯವಾಗಿ ನಡೆದಿದ್ದು, ಸೋಮವಾರ ತಡ ರಾತ್ರಿ 12 ಸೊಸೈಟಿಗಳು ಸೂಚಿಸಿರುವ ವ್ಯಕ್ತಿಗಳು ಮತದಾನಕ್ಕೆ ಅನರ್ಹರೆಂಬ ಸರ್ಕಾರದ ಆದೇಶ ಡಿಸಿಸಿ ಬ್ಯಾಂಕಿನ ಚುನಾವಣಾಧಿಕಾರಿ ಡಾ. ಎಚ್‌.ಎಲ್‌. ನಾಗರಾಜ್‌ ಅವರ ಕೈ ಸೇರಿತು.

ಇದನ್ನು ಪ್ರಶ್ನಿಸಿ ಎಸ್‌.ಎಲ್‌. ಭೋಜೇಗೌಡ ಅವರು ಹೈಕೋರ್ಟ್‌ ರಿಟ್‌ ಅರ್ಜಿ ಸಲ್ಲಿಸಿದ್ದರು. ಮತದಾನ ಪ್ರಕ್ರಿಯೆ ಮುಗಿಯುವುದರೊಳಗೆ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ಸಿಗಬಹುದೆಂದು ಎಲ್ಲ 12 ಮಂದಿ ಬ್ಯಾಂಕಿನ ಆವರಣದಲ್ಲಿ ಇದ್ದರು. ಆದರೆ, ನಿರೀಕ್ಷೆ ಹುಸಿಯಾಯಿತು.

ಬೆಳಗ್ಗೆಯಿಂದ ಸಂಜೆಯವರೆಗೆ ಈ ಕುತೂಹಲ ಜನರ ನಡುವೆ ಓಡಾಡುತ್ತಿತ್ತು. ಮತದಾನದ ಹೊರಗೆ ಫಲಿತಾಂಶ ಹೊರ ಬೀಳುವ ಮೊದಲೇ ಬಿಜೆಪಿಯವರು ವಿಜಯೋತ್ಸವ ಆಚರಿಸಿದರು.

click me!