ಶಿವಮೊಗ್ಗ : ಬಿಜೆಪಿಗೊಲಿದ ಮತ್ತೊಂದು ಅಧಿಕಾರ

By Kannadaprabha News  |  First Published Mar 11, 2021, 7:55 AM IST

ಮುಖ್ಯಮಂತ್ರಿ ತವರು ಹಾಗೂ ಹೆಚ್ಚು ಬಿಜೆಪಿ ಶಾಸಕರು ಹಾಗೂ ಬಿಜೆಪಿ ಸಂಸದರು ಇರುವ ಶಿವಮೊಗ್ಗದಲ್ಲಿ ಬಿಜೆಪಿ ಇದೀಗ ಮತ್ತೊಂದು ಅಧಿಕಾರವನ್ನು ತನ್ನದಾಗಿಸಿಕೊಂಡಿದೆ. ಮೇಯರ್ ಸ್ಥಾನ ಬಿಜೆಪಿಗೆ ಒಲಿದಿದೆ.


ಶಿವಮೊಗ್ಗ (ಮಾ.11):  ನಿರೀಕ್ಷೆಯಂತೆ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್‌ ಆಗಿ ಬಿಜೆಪಿಯ ಸುನೀತಾ ಅಣ್ಣಪ್ಪ ಮತ್ತು ಉಪ ಮೇಯರ್‌ ಆಗಿ ಕೆ.ಶಂಕರ್‌ ಗನ್ನಿ ಆಯ್ಕೆಯಾಗಿದ್ದಾರೆ.

ಬುಧವಾರ ಪಾಲಿಕೆ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಮೇಯರ್‌ ಸ್ಥಾನಕ್ಕೆ ಬಿಜೆಪಿಯಿಂದ ಸುನೀತಾ ಅಣ್ಣಪ್ಪ ಮತ್ತು ಕಾಂಗ್ರೆಸ್‌ನಿಂದ ರೇಖಾ ರಂಗನಾಥ್‌ ನಾಮಪತ್ರ ಸಲ್ಲಿಸಿದ್ದರು. 

Tap to resize

Latest Videos

ಉಪಮೇಯರ್‌ ಸ್ಥಾನಕ್ಕೆ ಬಿಜೆಪಿಯಿಂದ ಶಂಕರ್‌ ಗನ್ನಿ, ಕಾಂಗ್ರೆಸ್‌ನಿಂದ ಆರ್‌.ಸಿ.ನಾಯ್ಕ ನಾಮಪತ್ರ ಸಲ್ಲಿಸಿದ್ದರು. 35 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿ 23, ಕಾಂಗ್ರೆಸ್‌ 8, ಜೆಡಿಎಸ್‌ 2, ಪಕ್ಷೇತರ 1 ಹಾಗೂ ಎಸ್‌ಡಿಪಿಐನ ಒಬ್ಬರು ಸದಸ್ಯರಿದ್ದಾರೆ. 

ಶಿವಮೊಗ್ಗ ಚಲೋ: ಕಾಂಗ್ರೆಸ್‌ಗೊಂದು ಸಚಿವ ಈಶ್ವರಪ್ಪ ಬಹಿರಂಗ ಸವಾಲ್

ಚುನಾವಣೆಯಲ್ಲಿ ಸುನೀತಾ ಅಣ್ಣಪ್ಪ ಪರವಾಗಿ 25 ಹಾಗೂ ರೇಖಾ ರಂಗನಾಥ್‌ ಪರವಾಗಿ 11 ಮಂದಿ ಮತ ಚಲಾಯಿಸಿದರು. ಉಪ ಮೇಯರ್‌ ಸ್ಥಾನದ ಚುನಾವಣೆಯಲ್ಲಿ ಬಿಜೆಪಿಯ ಶಂಕರ್‌ ಗನ್ನಿ ಅವರಿಗೆ 24 ಮತ್ತು ಕಾಂಗ್ರೆಸ್‌ನ ಆರ್‌.ಸಿ.ನಾಯ್ಕ್ ಅವರಿಗೆ 11 ಮತಗಳು ಬಂದವು.

click me!