ಲಕ್ಷಾಂತರ ರು. ಬೆಲೆ ಬಾಳುವ ಬೈಕ್‌ಗಳನ್ನು ಕದಿಯುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿ ಅವರಿಂದ ಅನೇಕ ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ
ಚಿಕ್ಕಬಳ್ಳಾಪುರ (ಅ.11): ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಮನೆಗಳ ಮುಂದೆ ನಿಲ್ಲಿಸಲಾಗುತ್ತಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರನ್ನು ಜಿಲ್ಲೆಯ ಚಿಂತಾಮಣಿ ನಗರ ಠಾಣೆ ಪೊಲೀಸರು ಬಂಧಿಸಿ ಬರೋಬ್ಬರಿ 14 ಲಕ್ಷ ರು, ಮೌಲ್ಯದ 33 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳನ್ನು ಶಿಡ್ಲಘಟ್ಟ ತಾಲೂಕಿನ ಕಾಚಹಳ್ಳಿ ಗ್ರಾಮದ ನಿವಾಸಿ ಬಣ್ಣದ ಕೆಲಸಗಾ ನರಸಿಂಹಮೂರ್ತಿ ಬಿನ್ ಮುದ್ದಪ್ಪ (32) ಹಾಗೂ ಚಿಂತಾಮಣಿ ತಾಲೂಕಿನ ಜೋಡಿ ಕಾಚಹಳ್ಳಿ ನಿವಾಸಿ ಚಿಂತಾಮಣಿ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ನವೀನ್ ಬಿನ್ ಸುಬ್ಬರಾಯಪ್ಪ (23) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿ ನರಸಿಂಹಮೂರ್ತಿ ಕದ್ದ ವಾಹನವನ್ನು ಶಿಡ್ಲಘಟ್ಟ ಕಡೆಯಿಂದ ಚಿಂತಾಮಣಿಗೆ ತರುವಾಗ ಸಿಕ್ಕಿ ಬಿದ್ದಿದ್ದಾನೆ.
ಚಿಂತಾಮಣಿ ನಗರದ ಬಾಗೇಪಲ್ಲಿ ವೃತ್ತದಲ್ಲಿದ್ದ ಪೊಲೀಸರನ್ನು ಕಂಡು ನರಸಿಂಹಮೂರ್ತಿ ಗಾಬರಿಯಿಂದ ವಾಹನ ತಿರುಗಿಸಿಕೊಂಡು ವಾಪಸ್ಸು ಹೋಗುವಾಗ ಗಸ್ತಿನಲ್ಲಿದ್ದ ಚಿಂತಾಮಣಿ ನಗರ ಠಾಣೆ ಪೊಲೀಸರು ಹಿಡಿದು ತಪಾಸಣೆ ನಡೆಸಿದ್ದಾರೆ.
ಹುಬ್ಬಳ್ಳಿ: ಅನೈತಿಕ ಸಂಬಂಧಕ್ಕೆ ಅಡ್ಡಿ, ಪ್ರಿಯಕರನ ಜತೆ ಸೇರಿ ಪತ್ನಿಯಿಂದ ಪತಿ ಕೊಲೆ ...
ಬಳಿಕ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಚಿಂತಾಮಣಿ ನಗರ, ವೇಮಗಲ್ ಹೋಸಕೋಟೆ ಮತ್ತಿತರ ಕಡೆ ಕದ್ದಿರುವ ಸುಮಾರು 14 ಲಕ್ಷ ರೂ, ಮೌಲ್ಯದ 33 ದ್ವಿಚಕ್ರವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಜಿಲ್ಲಾ ಎಸ್ಪಿ ಮಿಥುನ್ ಕುಮಾರ್, ಚಿಂತಾಮಣಿ ಡಿವೈಎಸ್‌ಪಿ ಲಕ್ಷ್ಮಯ್ಯ ಮಾರ್ಗದರ್ಶನದಲ್ಲಿ ಚಿಂತಾಮಣಿ ನಗರ ಠಾಣೆ ಸಿಪಿಐ ಆನಂದ್ ಕುಮಾರ್, ಪಿಎಸ್‌ಐ ನಾರಾಯಣಸ್ವಾಮಿ, ಚಂದ್ರಕಳ, ಪೆದೇಗಳಾದ ವಿಶ್ವನಾಥ, ನಾಗಭೂಷಣ್, ಮಂಜನಾಥ, ಸಂತೋಷ್, ಸರ್ವೇಶ್, ರವೀಂದ್ರ, ಚೌಡರೆಡ್ಡಿ ಪಾಲ್ಗೊಂಡಿದ್ದು, ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅಧಿಕಾರಿ, ಸಿಬ್ಬಂದಿಗೆ ಎಸ್ಪಿ ಬಹುಮಾನ ಘೋಷಿಸಿದ್ದಾರೆ.