ರಾಜ್ಯದಲ್ಲಿ ಉಪ ಚುನಾವಣೆ ರಂಗೇರುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಬಿಜೆಪಿ ಸೇರ್ಪಡೆಯಾಗಿದ್ದಾರೆ
ಮೂಡಿಗೆರೆ (ಅ.11): ಬಿಜೆಪಿ ಯುವಕರ ಪಕ್ಷವಾಗಿದ್ದು, ಬೇರೆ ಪಕ್ಷದ ಬಹುತೇಕ ಯುವಕರು ದೇಹ ಮಾತ್ರ ಅಲ್ಲಿದ್ದು ಮನಸ್ಸು ಮತ್ತು ಆತ್ಮಗಳು ಭಾರತೀಯ ಚಿಂತನೆಯಲ್ಲಿ ಹುದುಗಿವೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ತಿಳಿಸಿದರು.
ಪಕ್ಷದ ಕಚೇರಿಯಲ್ಲಿ ಬಾಳೂರು ಹೋಬಳಿಯ ಕಾಂಗ್ರೆಸ್, ಜೆಡಿಎಸ್ ಪಕ್ಷದ ಮುಖಂಡರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿ, ಬಿಜೆಪಿ ಸಾಮಾನ್ಯ ಕಾರ್ಯಕರ್ತರ ಪಕ್ಷವಾಗಿದ್ದು, ಇಲ್ಲಿ ಜಾತಿ, ಮತ, ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣಲಾಗುತ್ತಿದೆ. ಒಬ್ಬ ಸಮಾನ್ಯ ಕಾರ್ಯಕರ್ತ ಕೂಡಾ ದೇಶದ ಪ್ರಧಾನಿಯಾಗಬಹುದು ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ ಉದಾಹರಣೆಯಾಗಿದ್ದು, ಪಕ್ಷಕ್ಕೆ ನಿಮ್ಮ ಮಹತ್ವ ಮತ್ತು ಶ್ರಮವನ್ನು ಗೌರವಿಸಲಾಗುವುದು.
ಕುತೂಹಲದ ಕೇಂದ್ರವಾದ ಆರ್ ಆರ್ ನಗರ : ಫೈನಲ್ ಆಗಿಲ್ಲ ಬಿಜೆಪಿ ಅಭ್ಯರ್ಥಿ ..
ಸಮಸ್ಯೆಗಳು ಬಂದಲ್ಲಿ ಪ್ರಮುಖರ ಗಮನಕ್ಕೆ ತನ್ನಿ ಎಂದು ತಿಳಿಸಿದರು. ಈ ವೇಳೆ ಬಾಳೂರು ಹೋಬಳಿಯಿಂದ ಜಗದೀಶ್, ಸುರೇಶ್, ಅಣ್ಣಪ್ಪ, ಸುಧಾಕರ್, ಲಕ್ಷಣ್, ಸುನೀಲ್, ಸುರೇಶ್, ಶಮಂತ್, ಪ್ರವೀಣ್, ಸಾತ್ವೀಕ್, ಸುರೇಶ್, ಬಿ.ಎಸ್.ಸುಂದರೇಶ್ ಪಕ್ಷಕ್ಕೆ ಸೇರ್ಪಡೆಯಾದರು. ಬಿಜೆಪಿ ಮುಖಂಡರಾದ ರಘು ಜನ್ನಾಪುರ, ಶಿವಣ್ಣ ಹಳಸೆ, ಜಯಂತ್, ವಿ.ಕೆ.ಶಿವೇಗೌಡ, ಭರತ್, ಅರೆಕೋಡಿಗೆ ಶಿವು, ಗಜೇಂದ್ರ, ಪಂಚಾಕ್ಷರಿ, ಶಶಿಧರ್, ವಿಜೇಂದ್ರ, ನಯನ ತಳವಾರ, ಸಂಜಯ್, ಮಂಜು ಮತ್ತಿತರರಿದ್ದರು.