ಮಾನಸಿಕ ಅಸ್ವಸ್ಥ ಯುವಕ ಸಹಜ ಸ್ಥಿತಿಯತ್ತ, ಉಡುಪಿ ಬಂದು ಕರೆದೊಯ್ದ ಬಿಹಾರ ಕುಟುಂಬ

By Suvarna News  |  First Published Mar 10, 2023, 4:02 PM IST

ಉಡುಪಿಯ ಹಳೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಭಯದ ವಾತಾವರಣ ನಿರ್ಮಿಸಿದ ಮಾನಸಿಕ ಅಸ್ವಸ್ಥ ಯುವಕ ಬಿಹಾರ ಮೂಲದ ಶಕೀಲ್ ನನ್ನು ಆತನ ಕುಟುಂಬದ ಜೊತೆಗೆ ಕಳುಹಿಸಿ ಕೊಡಲಾಗಿದೆ.


ಉಡುಪಿ (ಮಾ.10): ಉಡುಪಿಯ ಹಳೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಭಯದ ವಾತಾವರಣ ನಿರ್ಮಿಸಿದ ಮಾನಸಿಕ ಅಸ್ವಸ್ಥ ಯುವಕನನ್ನು ಫೆಬ್ರವರಿ 19 ರಂದು ಸಮಾಜ ಸೇವಕ ವಿಶು ಶೆಟ್ಟಿ ಅವರು ನಗರ ಠಾಣಾ ಹೆಡ್‌ಕಾನ್ಸ್ಟೇಬಲ್ ಮರಿ ಗೌಡರ ಸಹಾಯದಿಂದ ವಶಕ್ಕೆ ಪಡೆದ್ದರು. ಆತನಿಗೆ ಚಿಕಿತ್ಸೆ ಅಗತ್ಯವಿದೆ ಎಂಬುದನ್ನು ಮನಗಂಡು, ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗಾ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಬಳಿಕ ಈತನ ಆರೋಗ್ಯದಲ್ಲಿ ಕೊಂಚ ಸುಧಾರಣೆ ಕಂಡು ಬಂದು ಈತ ಬಿಹಾರ ಮೂಲದ ಶಕೀಲ್ ( 25) ಎಂದು ಗುರುತಿಸಲಾಯ್ತು. ಈತ ಕಾರ್ಮಿಕನಾಗಿ ಉಡುಪಿಗೆ ಬಂದಿದ್ದು, ಕಳೆದ ಕೆಲವು ದಿನಗಳಿಂದ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ಹಾಗಾಗಿ ಕೆಲಸದ ಸ್ಥಳದಿಂದ ಬೇರ್ಪಟ್ಟು ಅಲೆಯುತ್ತಿದ್ದ.

ಅನಾಥ ವೃದ್ಧರಿಗೆ ಆಶ್ರಯ ನೀಡೋದ್ಯಾರು, ಡಿಸಿ ಮೊರೆ ಹೋದ ಉಡುಪಿಯ ಸಾಮಾಜಿಕ ಕಾರ್ಯಕರ್ತರು

Tap to resize

Latest Videos

undefined

ಆರೋಗ್ಯದಲ್ಲಿ ಸುಧಾರಣೆಯಾದ ಬಳಿಕ ಆತನಿಂದ ಮಾಹಿತಿ ಪಡೆದು, ಯುವಕನ ಹೆತ್ತವರ ಪತ್ತೆಗೆ ವಿಶು ಶೆಟ್ಟಿಯವರು ಮಾಧ್ಯಮದ ಮೂಲಕ ಮನವಿ ಮಾಡಿದ್ದರು. ಪ್ರಸ್ತುತ ಯುವಕನ ಕುಟುಂಬಿಕರ ಪತ್ತೆಯಾಗಿದ್ದು ಯುವಕನ ಸಹೋದರ ಬಿಹಾರದಿಂದ ಉಡುಪಿಗೆ ಬಂದು ಸಹೋದರ ನನ್ನು ಭೇಟಿಯಾದರು.

Udupi : ಮಾನಸಿಕ ಅಸ್ವಸ್ಥೆ ಆಸ್ಪತ್ರೆಗೆ ದಾಖಲು, ನಿಟ್ಟುಸಿರು ಬಿಟ್ಟ ಸ್ಥಳೀಯರು

ಆಸ್ಪತ್ರೆಯ ಸಂಪೂರ್ಣ ಖರ್ಚು ವೆಚ್ಚವನ್ನು ಭರಿಸಿ ಯುವಕನನ್ನು ಬಿಹಾರಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ಹಿಂದೆ ಹೆಚ್ಚಿನ ಪ್ರಕರಣದಲ್ಲಿ ಆಸ್ಪತ್ರೆಯ ವೆಚ್ಚವನ್ನು ವಿಶು ಶೆಟ್ಟಿಯವರೇ ಭರಿಸಿದ್ದು,  ಈ ಪ್ರಕರಣದಲ್ಲಿ ಯುವಕನ ಸಹೋದರನೇ ಆಸ್ಪತ್ರೆಯ ವೆಚ್ಚ ವನ್ನು ಭರಿಸಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಆರೈಕೆ ಮಾಡಿದ್ದಕ್ಕೆ ವಿಶು ಶೆಟ್ಟಿ ಯವರಿಗೆ ವಿಶೇಷವಾಗಿ ಧನ್ಯವಾದ ಸಲ್ಲಿಸಿದ್ದಾರೆ.

click me!