ವಿಧಾನಸಭಾ ಚುನಾವಣೆ: ಚಿತ್ರಕಲೆಯಿಂದ ಸಿಂಗಾರಗೊಂಡಿರುವ ಮತಗಟ್ಟೆಗಳು!

By Kannadaprabha News  |  First Published Mar 10, 2023, 3:41 PM IST

ಚುನಾವಣೆಯ ಮತಗಟ್ಟೆಗಳೆಂದರೆ ಶಾಲೆಯೊಂದರ ಕೊಠಡಿಯಲ್ಲಿ ಮೌನವಾಗಿ ನಡೆಯುವ ಮತದಾನ, ಸುತ್ತಲೂ ಬಿಗಿ ಪೊಲೀಸ್‌ ಬಂದೋಬಸ್ತು, ಶಾಲೆ ಹೊರಗೆ ಒಂದಷ್ಟುಪಕ್ಷಗಳ ಕಾರ್ಯಕರ್ತರು, ಈ ದೃಶ್ಯ ಕಣ್ಣೆದುರು ಬರುತ್ತದೆ.


ಉಡುಪಿ (ಮಾ.10) : ಚುನಾವಣೆಯ ಮತಗಟ್ಟೆಗಳೆಂದರೆ ಶಾಲೆಯೊಂದರ ಕೊಠಡಿಯಲ್ಲಿ ಮೌನವಾಗಿ ನಡೆಯುವ ಮತದಾನ, ಸುತ್ತಲೂ ಬಿಗಿ ಪೊಲೀಸ್‌ ಬಂದೋಬಸ್ತು, ಶಾಲೆ ಹೊರಗೆ ಒಂದಷ್ಟುಪಕ್ಷಗಳ ಕಾರ್ಯಕರ್ತರು, ಈ ದೃಶ್ಯ ಕಣ್ಣೆದುರು ಬರುತ್ತದೆ.

ಆದರೆ, ಉಡುಪಿ ಜಿಲ್ಲೆಯಲ್ಲಿ ಈ ಯಾಂತ್ರಿಕ ಮತದಾನ ವ್ಯವಸ್ಥೆಯ ನಡುವೆಯೂ ಮತಗಟ್ಟೆಯನ್ನು ಒಂದಿಷ್ಟುಚೇತೋಹಾರಿ ಮಾಡುವ ವಿಭಿನ್ನ ಪ್ರಯತ್ನ ನಡೆದಿದೆ.

Tap to resize

Latest Videos

undefined

ಮುಂದೆ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ಹಬ್ಬದಂತೆ ಆಚರಿಸುವಂತೆ, ಅದಕ್ಕಾಗಿ ಮತಗಟ್ಟೆಗಳನ್ನು ಬಣ್ಣಬಣ್ಣಗಳಿಂದ ಸಿಂಗರಿಸಲು ಸೂಚಿಸಿದೆ.

ಟಿಕೆಟ್‌ಗಾಗಿ ಕಡಿಮೆ ವಯಸ್ಸು ನಮೂದಿಸಿದ್ರಾ ಕೆ ಜಿ ಬೋಪಯ್ಯ ? ಚುನಾವಣಾ ಆಯೋಗಕ್ಕೆ ದೂರು

ಆದರೆ ಉಡುಪಿ(Udupi)ಯಲ್ಲಿ ಜಿಲ್ಲಾ ಸ್ವೀಪ್‌ ಸಮಿತಿಯು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಜಿಲ್ಲೆಯಲ್ಲಿ ಗುರುತಿಸಲಾಗಿರುವ 1111 ಮತಗಟ್ಟೆಗಳನ್ನು ಜಿಲ್ಲೆಯ ಪರಂಪರೆ, ಕಲೆ, ಸಂಸ್ಕೃತಿ, ವೈಭವವನ್ನು ಬಿಂಬಿಸುವ ಚಿತ್ರಗಳಿಂದ ಆಕರ್ಷಕವಾಗಿ ಸಿಂಗರಿಸಲು ನಿರ್ಧರಿಸಿದೆ. ಪ್ರತಿಯೊಂದು ಶಾಲಾ ಮತಗಟ್ಟೆಯ ಗೋಡೆಗಳು ಯಕ್ಷಗಾನ, ಕಂಬಳ, ಪ್ರಕೃತಿ, ಪ್ರವಾಸಿಸ್ಥಳ, ಉಡುಪಿ ಸೀರೆ, ವರ್ಲಿ ಇತ್ಯಾದಿ ಸಾಂಸ್ಕೃತಿಕ ವೈಭವವನ್ನು ಬಿಂಬಿಸುವ ಚಿತ್ರಗಳಿಂದ ಒಂದು ಮಿನಿ ಆರ್ಚ್‌ ಗ್ಯಾಲರಿಯಂತೆ ಕಂಗೋಳಿಸುತ್ತಿವೆ.

ಪ್ರಾಯೋಗಿಕವಾಗಿ ಉಡುಪಿಯ ಹನುಮಂತನಗರ ಶಾಲೆಯಲ್ಲಿನ 5 ಮತಗಟ್ಟೆಗಳನ್ನು, 30 ಕ್ಕೂ ಅಧಿಕ ಚಿತ್ರಕಲಾ ಶಿಕ್ಷಕರು, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಒಂದೇ ದಿನದಲ್ಲಿ ವೈವಿಧ್ಯಮಯ ಚಿತ್ರಗಳ ಮೂಲಕ ಸಿಂಗರಿಸಿದ್ದು, ಇವು ಚುನಾವಣೆಯಂದು ಮತದಾರರನ್ನು ಸೆಳೆಯಲಿದೆ.

Kodagu: ಲೋಕಾಯುಕ್ತ ದಾಳಿಗೆ ಸರ್ಕಾರವೇ ಸೂಚನೆ ನೀಡಿತ್ತಾ?: ಶಾಸಕ ಬೋಪಯ್ಯ

ಮತದಾರರ ಉತ್ಸಾಹ ಹೆಚ್ಚಿಸುವ ಪ್ರಯತ್ನ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು, ಪ್ರತಿಯೊಂದು ಮತವೂ ನಿರ್ಣಾಯಕವಾಗಿದ್ದು, ಚುನಾವಣೆಯಲ್ಲಿ ಮತದಾರರು ಮತ್ತು ಮತಗಟ್ಟೆಗಳಿಗೂ ಮಹತ್ವಪೂರ್ಣ ಪಾತ್ರ ಇದೆ. ಎಲ್ಲಾ ಮತದಾರರು ಉತ್ಸಾಹದಿಂದ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಲು ಕೈಬೀಸಿ ಕರೆಯುವಂತೆ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲೂ ಈ ರೀತಿಯ ಚಿತ್ರಗಳನ್ನು ರಚಿಸಲಾಗುತ್ತದೆ. ಈ ವಿನೂತನ ಪ್ರಯತ್ನಕ್ಕೆ ಜಿಲ್ಲೆಯ ಚಿತ್ರಕಲಾ ಶಿಕ್ಷಕರು ಚುನಾವಣಾ ಕರ್ತವ್ಯ ಎಂಬಂತೆ ಉತ್ತಮ ಸಹಕರ ನೀಡುತ್ತಿದ್ದಾರೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್‌. ತಿಳಿಸಿದ್ದಾರೆ.

click me!