ಕರ್ನಾಟಕದ ಕಾಶ್ಮೀರ ಎಂದೇ ಕರೆಸಿಕೊಳ್ಳುವ ಕೊಡಗಿನ ಶೌಚಾಲಯದಲ್ಲಿ ಬೃಹತ್ ಕಾಳಿಂಬ ಸರ್ಪ ಒಂದು ಪತ್ತೆಯಾಗಿದೆ. ಅದನ್ನು ಹಿಡಿದು ಕಾಡಿಗೆ ಬಿಡಲಾಗಿದೆ.
ಮಡಿಕೇರಿ (ಆ.31): ಬೆಟ್ಟಗೇರಿ ಸಮೀಪದ ಮನು ಕಟ್ರತಂಡ ಎಂಬುವರ ಶೌಚಗೃಹದಲ್ಲಿದ್ದ ಬೃಹತ್ ಕಾಳಿಂಗ ಸರ್ಪವನ್ನು ಮೂರ್ನಾಡುವಿನ ಸ್ನೇಕ್ಸ್ ಪ್ರಜ್ವಲ್ ಭಾನುವಾರ ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ.
ಕಾಳಿಂಗ ಸರ್ಪ ಇರುವುದರ ಬಗ್ಗೆ ಮನು ಅವರು ಪ್ರಜ್ವಲ್ ಅವರಿಗೆ ಮಾಹಿತಿ ನೀಡಿದ್ದು, ಕೂಡಲೇ ಬಂದು, ಪರಿಶೀಲಿಸಿದಾಗ ಶೌಚಗೃಹದಲ್ಲಿ ಅಡಗಿದ್ದ 9 ಮುಕ್ಕಾಲು ಅಡಿ ಉದ್ದ ಆರೂವರೆ ಕೆ.ಜಿ. ತೂಕದ ಬೃಹದಾಕಾರದ ಕಾಳಿಂಗ ಸರ್ಪವನ್ನು ಸ್ನೇಕ್ ಪ್ರಜ್ವಲ್ ಸೆರೆ ಹಿಡಿದರು.
undefined
ಮುತ್ತು ಕೊಡಲು ಹೋದವನಿಗೆ ಕಚ್ಚಿ ಹರಿದ ಹಾವು..
ಬಳಿಕ ಅದನ್ನು ಅರಣ್ಯ ಇಲಾಖೆಯ ಮುಖಾಂತರ ಮಾಕುಟ್ಟಬಳಿಯ ಪೆರುಂಬಾಡಿ ಅರಣ್ಯಕ್ಕೆ ಬಿಡಲಾಯಿತು.
ಮಲೆನಾಡು ಪ್ರದೇಶದಲ್ಲಿ ಮಳೆಗಾಲದ ಈ ಸಂದರ್ಭದಲ್ಲಿ ಎಲ್ಲೆಡೆ ಹಾವುಗಳು ಪತ್ತೆಯಾಗುತ್ತವೆ. ಮನೆಯ ಒಳಗೂ ಬರುವ ಹಾವುಗಳು ಆತಂಕ ಹುಟ್ಟಿಸುತ್ತವೆ.
ಮಿಲನದ ಬಳಿಕ ಸಂಗಾತಿಯನ್ನೇ ತಿನ್ನುವ ಕಾಳಿಂಗ! ಕಾರಣವೇನು?...
ಕಳೆದ ವರ್ಷ ಕೊಡಗಿನಲ್ಲಿ ಉಂಟಾದ ಭಾರೀ ಪ್ರವಾಹದ ಸಂದರ್ಭದಲ್ಲಿಯೂ ಹಾವುಗಳು ಪ್ರವಾಹದಲ್ಲಿ ಕೊಚ್ಚಿ ಬಂದು ಮನೆಯಲ್ಲಿ ಸೇರಿಕೊಂಡಿರುವ ಘಟನೆಗಳು ನಡೆದಿದ್ದವು.
ಅದರಂತೆ ಈಗಲೂ ಮನೆಯ ಸಮೀಪ ಹಾಗೂ ಮನೆ ಒಳಗೂ ಹಾವುಗಳು ಕಂಡುಬರುವುದು ಜನರಲ್ಲಿ ಆತಂಕ ಉಂಟು ಮಾಡುತ್ತಿವೆ.