ವಂಡ​ರ್‌ ಲಾ ಅಮ್ಯೂಸ್‌ಮೆಂಟ್‌ ಪಾರ್ಕ್ ಒಂದು ವಾರ ಸ್ಥಗಿತ

Kannadaprabha News   | Asianet News
Published : Mar 14, 2020, 07:59 AM IST
ವಂಡ​ರ್‌ ಲಾ ಅಮ್ಯೂಸ್‌ಮೆಂಟ್‌ ಪಾರ್ಕ್ ಒಂದು ವಾರ ಸ್ಥಗಿತ

ಸಾರಾಂಶ

ಬಿಡದಿಯ ಅಮ್ಯೂಸ್ಮೆಂಟ್  ಪಾರ್ಕನ್ನು ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮುಚ್ಚಲಾಗಿದೆ. 

 ಬೆಂಗ​ಳೂ​ರು [ಮಾ.14]:  ಹೆಚ್ಚು​ತ್ತಿ​ರುವ ಕೊರೋನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಬಿಡ​ದಿ​ ಸಮೀಪದ ‘ವಂಡರ್‌ ಲಾ ಅಮ್ಯೂಸ್‌ಮೆಂಟ್‌ ಪಾರ್ಕ್’ ಮುಂದಿನ ಆರು ದಿನಗಳವರೆಗೆ ತನ್ನ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಲಿದೆ.

ಸಾರ್ವಜನಿಕರು ಒಂದೆಡೆ ಸೇರುವ ಬಹುತೇಕ ಎಲ್ಲಾ ಚಟುವಟಿಕೆಗಳನ್ನು ನಿರ್ಬಂಧಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ವಂಡರ್‌ ಲಾ ಶನಿವಾರ (ಮಾ. 14)ದಿಂದ ಮಾ.20ರವರೆಗೆ ಕಾರ್ಯ ನಿರ್ವಹಿಸುವುದಿಲ್ಲ ಎಂದು ಪಾರ್ಕ್ನ ಪ್ರಕಟಣೆ ತಿಳಿಸಿದೆ.

ನಾಡಿನ ಪ್ರಮುಖ ಮನರಂಜನಾ ತಾಣವಾದ ವಂಡ​ರ್‌ ಲಾಗೆ ನಿತ್ಯ ಸಾವಿ​ರಾರು ಜನ ಆಗ​ಮಿ​ಸು​ತ್ತಾರೆ. ಒಂದು ವೇಳೆ ಪಾರ್ಕ್ನ ಕಾರ್ಯ ​ಚ​ಟು​ವ​ಟಿ​ಕೆಗೆ ಮುಂದು​ವ​ರೆದರೆ ಇದು ವೈರಸ್‌ ಹರಡಲು ಪೂರ​ಕ​ವಾಗುತ್ತದೆ. ಹೀಗಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೊರೋನಾ ವೈರಸ್‌ ತಗು​ಲಿ​ದ್ದ ನಗರದ ಟೆಕ್ಕಿ ಗುಣ​ಮು​ಖ

ಈಗಾಗಲೇ ಕೊರೋನಾ ಭೀತಿ ಹಿನ್ನೆಲೆಯಲ್ಲಿ ಕರ್ನಾಟಕವನ್ನು ಬಂದ್ ಮಾಡಲಾಗಿದ್ದು, ಹಲವು ಸೇವೆಗಳನ್ನು ಸ್ಥಗಿತ ಮಾಡಲಾಗಿದೆ. 

PREV
click me!

Recommended Stories

ರೈತರಿಗೆ ಅನುಕೂಲ ಮಾಡುವುದೇ ಗುರಿ: ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್
ದಾವಣಗೆರೆ ಮಹಿಳೆಯನ್ನ ಕಚ್ಚಿಕೊಂದ 2 ರಾಟ್‌ವೀಲರ್ ನಾಯಿಗಳು ಜನರ ಹಲ್ಲೆಯಿಂದ ಸಾವು; ಶ್ವಾನಗಳ ಮಾಲೀಕ ಬಂಧನ