ಕೊರೋನಾ ವೈರಸ್‌ ತಗು​ಲಿ​ದ್ದ ನಗರದ ಟೆಕ್ಕಿ ಗುಣ​ಮು​ಖ

By Kannadaprabha NewsFirst Published Mar 14, 2020, 7:43 AM IST
Highlights

ಕೊರೋನಾ ವೈರಸ್ ತಗುಲಿದ್ದ ಬೆಂಗಳೂರಿನ ಟೆಕ್ಕಿ ಗುಣಮುಖರಾಗಿದ್ದಾರೆ. ಟೆಕ್ಕಿ​ಯನ್ನು ಸರ್ಕಾರಿ ಆಸ್ಪತ್ರೆ​ಯಿಂದ ಬಿಡು​ಗಡೆ ಮಾಡ​ಲಾ​ಗಿದೆ ಎಂದು ತೆಲಂಗಾಣ ಆರೋ​ಗ್ಯ ಸಚಿವ ಇ.ರಾಜೇಂದ್ರ ತಿಳಿ​ಸಿ​ದ್ದಾ​ರೆ.

ಬೆಂಗಳೂರು [ಮಾ.14] : ಬೆಂಗ​ಳೂ​ರಿ​ನಲ್ಲಿ ಕೆಲಸ ನಿರ್ವ​ಹಿ​ಸು​ತ್ತಿ​ರುವ ತೆಲಂಗಾ​ಣ ಮೂಲದ ಎಂಜಿ​ನಿ​ಯರ್‌ ಕೊರೋನಾ ವೈರ​ಸ್‌​ನಿಂದ ಗುಣ​ಮು​ಖ​​ನಾ​ಗಿದ್ದಾನೆ. ಟೆಕ್ಕಿ​ಯನ್ನು ಸರ್ಕಾರಿ ಆಸ್ಪತ್ರೆ​ಯಿಂದ ಬಿಡು​ಗಡೆ ಮಾಡ​ಲಾ​ಗಿದೆ ಎಂದು ತೆಲಂಗಾಣ ಆರೋ​ಗ್ಯ ಸಚಿವ ಇ.ರಾಜೇಂದ್ರ ತಿಳಿ​ಸಿ​ದ್ದಾ​ರೆ.

ಕೊರೋನಾ ವೈರಸ್‌ ದೃಢಪಟ್ಟಹಿನ್ನೆ​ಲೆ​ಯಲ್ಲಿ 24 ವರ್ಷದ ಟಿಕ್ಕಿ​ಯನ್ನು ಗಾಂಧಿ ಆಸ್ಪ​ತ್ರೆ​ಯಲ್ಲಿ ಪ್ರತ್ಯೇಕ ಕೋಣೆ​ಯಲ್ಲಿ ಇಟ್ಟು ಚಿಕಿತ್ಸೆ ನೀಡ​ಲಾ​ಗಿತ್ತು. ಎರಡು ಬಾರಿ ವೈರಸ್‌ ಪರೀ​ಕ್ಷೆ​ಯ ವೇಳೆಯೂ ನೆಗೆ​ಟಿವ್‌ ಆಗಿ​ದೆ. ಹೀಗಾಗಿ ಆತನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಕೊರೋನಾಗೆ ವೃದ್ಧ ಬಲಿ: ತುರ್ತು ಸಂದರ್ಭ ನಿಭಾಯಿಸುವಲ್ಲಿ ಕಲಬುರಗಿ ಜಿಲ್ಲಾಡಳಿತ ನಿರ್ಲಕ್ಷ್ಯ?

ಕಳೆದ ತಿಂಗಳು ದುಬೈಗೆ ತೆರ​ಳಿದ್ದ ವೇಳೆ ಟಿಕ್ಕಿಗೆ ಕೊರೋನಾ ವೈರ​ಸ್‌ ತಗುಲಿತ್ತು ಎಂದು ಶಂಕಿ​ಸ​ಲಾ​ಗಿತ್ತು. ಬಳಿಕ ಆತ ಬೆಂಗ​ಳೂ​ರಿಗೆ ಬಂದು ಕೆಲಸ ನಿರ್ವ​ಹಿಸಿ ಹೈದ​ರಾ​ಬಾ​ದ್‌ಗೆ ಬಸ್‌ ಮೂಲಕ ತೆರ​ಳಿ​ದ್ದ. ಜ್ವರ​ ಹಾಗೂ ಕೊರೋನಾ ವೈರ​ಸ್‌ನ ಲಕ್ಷ​ಣ​ಗ​ಳು ಕಾಣಿ​ಸಿ​ಕೊಂಡ ಹಿನ್ನೆ​ಲೆ​ಯಲ್ಲಿ ಖಾಸಗಿ ಆಸ್ಪ​ತ್ರೆ​ಯೊಂದಕ್ಕೆ ದಾಖ​ಲಿಸ​ಲಾ​ಗಿ​ತ್ತು. ಬಳಿಕ ಗಾಂಧಿ ಆಸ್ಪ​ತ್ರೆ​ಯಲ್ಲಿ ಪರೀಕ್ಷೆ ನಡೆ​ಸಿದ ವೇಳೆ ಕೊರೋನಾ ವೈರಸ್‌ ಇರು​ವುದು ದೃಢ​ಪ​ಟ್ಟಿತ್ತು.

ಈ ಹಿನ್ನೆಲೆಯಲ್ಲಿ ಆತ ಬೆಂಗಳೂರಿನಲ್ಲಿ ವಿಮಾನ ನಿಲ್ದಾಣ ಬಂದಿದ್ದ ಕಾರು ಚಾಲಕ, ಆತ ಬೆಂಗಳೂರಿನಲ್ಲಿ ಉಳಿದುಕೊಂಡಿದ್ದ ಪಿಜಿ, ಆತನೊಂದಿಗೆ ಕಾರ್ಯನಿರ್ವಹಿಸಿದ್ದ ಕಂಪನಿ ಸಿಬ್ಬಂದಿ, ಆತ ಹೈದರಾಬಾದ್‌ಗೆ ತೆರಳಿದ್ದ ಬಸ್‌ನಲ್ಲಿದ್ದ 20ಕ್ಕೂ ಹೆಚ್ಚು ಜನರನ್ನು ಪತ್ತೆ ಹಚ್ಚಿ ಅವರನ್ನೆಲ್ಲಾ ಪ್ರತ್ಯೇಕವಾಗಿರಿಸಿ, ಕಣ್ಗಾವಲು ಇಡಲಾಗಿತ್ತು.

click me!