ಹಿಂದೂ ಸಂಘಟನೆಗಳಿಂದ ಇಂದು ಭಟ್ಕಳ ಬಂದ್, ಮಧ್ಯಾಹ್ನ ಸಂಪೂರ್ಣ ಸ್ಥಬ್ದವಾಗಲಿದೆ ಪಟ್ಟಣ

Published : Jun 05, 2026, 10:47 AM IST
Bhatkal Murinakatte reconstruction

ಸಾರಾಂಶ

ಮುರಿನ ಕಟ್ಟೆ ಧ್ವಂಸ ಪ್ರಕರಣ ಸಂಬಂಧ ಹಿಂದೂ ಸಂಘಟನೆಗಳು ಕೆರಳಿದೆ. ಅನ್ಯ ಕೋಮಿನ ಸಮುದಾಯದ ಉದ್ರಿಕ್ತರು ಮುರಿನ ಕಟ್ಟೆ ಧ್ವಂಸಗೊಳಿಸಿರುವುದು ಹಾಗೂ ಕಟ್ಟೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಇಂದು ಬಂದ್ ನಡೆಸಲಾಗುತ್ತಿದೆ.

ಭಟ್ಕಳ (ಜೂ.05) ಹಿಂದೂಗಳ ಶ್ರದ್ಧಾ ಕೇಂದ್ರವಾಗಿದ್ದ ಮುರಿನ ಕಟ್ಟೆ ಧ್ವಂಸಗೊಳಿಸಿದ ಪ್ರಕರಣ ಸಂಬಂಧ ಇಂದು ಭಟ್ಕಲ್ ಬಂದ್ ನಡೆಸಲಾಗುತ್ತಿದೆ. ಹಿಂದೂ ಸಂಘಟನೆಗಳು ಈಗಾಗಲೇ ಬಂದ್‌ಗೆ ಕೆರೆ ನೀಡಿದ್ದಾರೆ. ಆಟೋ ಚಾಲಕರು ಹಾಗೂ ಅಂಗಡಿ ಮಾಲೀಕರಿಂದ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ಇಂದು ಮಧ್ಯಾಹ್ನ ಭಟ್ಕಲ್ ಸಂಪೂರ್ಣ ಸ್ಥಬ್ಧವಾಗಲಿದೆ. ಈ ಮೂಲಕ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ಪ್ರತಿಭಟನೆ

ಇಂದು (ಜೂ.05) ಮಧ್ಯಾಹ್ನ 3 ಗಂಟೆಗೆ ಹಿಂದೂ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ. ಸುಮಾರು 10 ಸಾವಿರ ಕ್ಕಿಂತ ಹೆಚ್ಚು ಜನರನ್ನ ಸೇರುವ ಸಾಧ್ಯತೆ ಇದೆ. ಮುಂಜಾನೆ ಎಂದಿನಂತಿದ್ದ ಭಟ್ಕಳ ಇದೀಗ ನಿಧಾನವಾಗಿ ಸ್ಥಬ್ದವಾಗುತ್ತಿದೆ. ಮಧ್ಯಾಹ್ನ ವೇಳೆಗೆ ಸಂಪೂರ್ಣ ಸ್ಥಬ್ದವಾಗಲಿದೆ. ಈ ಪ್ರತಿಭಟನೆಯಲ್ಲಿ ಮುರಿನ ಕಟ್ಟೆ ವಿಚಾರವಾಗಿ ಹಿಂದೂ ಕಾರ್ಯಕರ್ಯರ ಮೇಲೆ ದಾಖಲಾದ ಸುಳ್ಳು ಕೇಸ್ ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಯಲಿದೆ.

ಮದ್ಯ ಮಾರಾಟ ಬಂದ್

ಹಿಂದೂಗಳ ಮೇಲಿನ ದೌರ್ಜನ್ಯ ಮರುಕಳಿಸದಂತೆ ಒತ್ತಾಯಿಸಲಾಗುತ್ತದೆ. ವಿಶೇಷ ಪೊಲೀಸ್ ಪಡೆ ಸೇರಿದಂತೆ ಹೆಚ್ಚುವರಿ ಪೊಲೀಸರ ನಿಯೋಜನೆ‌ ಮಾಡಲಾಗಿದೆ. ಭಟ್ಕಳ ಬಂದ್ ಹಿನ್ನೆಲೆ ಇಂದು ಭಟ್ಕಳದಲ್ಲಿ ಮಧ್ಯ ಮಾರಾಟ ನಿಷೇಧ ಮಾಡಲಾಗಿದೆ. ಮಧ್ಯ ಮಾರಾಟ ಮಾಡದಂತೆ ಆದೇಶ ಹೊರಡಿಸಲಾಗಿದೆ. ಉರಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾರಿಂದ ಈ ಆದೇಶ ನೀಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಅಗಲಿಕರಣಕ್ಕಾಗಿ ಹಿಂದೂಗಳ ಭಕ್ತಿಯ ಕೇಂದ್ರವಾಗಿದ್ದ ಮುರಿನ ಕಟ್ಟೆ ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು. ಅಭಿವೃದ್ಧಿ ಹಾಗೂ ಅನಿವಾರ್ಯ ಕಾರಣಗಳಿಂದ ಸ್ಥಳಾಂತರಕ್ಕೆ ಹಿಂದೂ ಮುಖಂಡರು ಒಪ್ಪಿಕೊಂಡಿದ್ದರು. ಇದರಂತೆ ಹೆದ್ದಾರಿ ಪಕ್ಕದಲ್ಲಿ ಮುರಿನ ಕಟ್ಟೆ ನಿರ್ಮಾಣ ಮಾಡಲಾಗಿತ್ತು. ಆದರೆ ಅನ್ಯ ಕೋಮಿನ ಉದ್ರಿಕ್ತರು ಈ ಮುರಿನ ಕಟ್ಟೆ ಧ್ವಂಸಗೊಳಿಸಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೂ ಹಲ್ಲೆ ನಡೆಸಲಾಗಿತ್ತು. ಘಟನೆ ಸಂಬಂಧ ಪ್ರಶ್ನಿಸಿ, ಬೀದಿಗಿಳಿದ ಹೋರಾಟ ನಡೆಸಿದ ಹಿಂದೂಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇದು ಹಿಂದೂ ಸಂಘಟನೆಗಳನ್ನು ಮತ್ತಷ್ಟು ಕೆರಳಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ನಗರದ ರಂಗಿನಕಟ್ಟೆ ಸಮೀಪ ಇದ್ದ ಮೂರಿನಕಟ್ಟೆಯನ್ನ ಕಳೆದ ರವಿವಾರ ಕೆಲ ಕಿಡಗೇಡಿ ಮುಸ್ಲಿಮರು ಧ್ವಂಸಮಾಡಿದ್ದು ಈ ಪ್ರಕರಣದ ಕೆಲ ಅರೋಪಿಗಳನ್ನು ಈಗಾಲೇ ಪೊಲೀಸ್ರು ಬಂಧಿಸಿದ್ದಾರೆ. ಇತ್ತೀಚೆಗೆ ಅದೇ ಸ್ಥಳದಲ್ಲಿ ಮುರಿನಕಟ್ಟೆ ಪುನರ್ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಇಂದು ಭಟ್ಕಳದಲ್ಲಿ ವಿಪಕ್ಷ ನಾಯಕ ಆರ್. ಅಶೋಕ ಅವರ ನೇತ್ರತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು.

 

PREV
Read more Articles on
click me!

Recommended Stories

ಕೋಲಾರ: ಮಲಗಿದ್ದ ಕುರಿಗಳ ಮೇಲೆ ಚಾಕು-ಮಚ್ಚುಗಳಿಂದ ಇರಿದ ದುಷ್ಕರ್ಮಿಗಳು! 50 ಕುರಿಗಳ ಪೈಕಿ 5 ಸಾವು, 18 ಕುರಿಗಳ ಸ್ಥಿತಿ ಗಂಭೀರ!
ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಡಿಮ್ಯಾಂಡಪ್ಪೋ ಡಿಮ್ಯಾಂಡ್, ಸಚಿವರ ಜಿದ್ದಾಜಿದ್ದಿಗೆ ಅಸಲಿ ಕಾರಣಗಳೇನು?